ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವೇಗೌಡರೇ ರಾಜ್ಯವನ್ನು ಕಾಂಗ್ರೆಸ್ ಮುಕ್ತ ಮಾಡಲಿದ್ದಾರೆ: ಕೋಟಾ ಶ್ರೀನಿವಾಸ ಪೂಜಾರಿ

|
Google Oneindia Kannada News

ಉಡುಪಿ, ಅಕ್ಟೋಬರ್. 23: ಕಾಂಗ್ರೆಸ್ ಗೆ ಈಗ ಧೃತರಾಷ್ಟ್ರನ ಆಲಿಂಗನವಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಗೆ ಕಾಂಗ್ರೆಸ್ ಮುಕ್ತ ಮಾಡುವ ಅವಕಾಶ ಕೈ ತಪ್ಪಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ವ್ಯಂಗ್ಯವಾಡಿದ್ದಾರೆ.

ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಇತ್ತೀಚೆಗೆ ನಡೆದ ದೇವೇಗೌಡ- ಸಿದ್ದರಾಮಯ್ಯ ಅವರ ಜಂಟಿ ಪತ್ರಿಕಾಗೋಷ್ಠಿ ವಿಚಾರ ಪ್ರಸ್ತಾಪಿಸಿ ಕಾಂಗ್ರೆಸ್ ಶತಮಾನದ ಇತಿಹಾಸವನ್ನು ಹೊಂದಿದ್ದು, ಈಗ ಕಾಂಗ್ರೆಸ್ ಗೆ ಜೆಡಿಎಸ್ ಜೊತೆ ಅಂದರೆ ದೇವೇಗೌಡ ಎಂಬ ಧೃತರಾಷ್ಟ್ರನ ಆಲಿಂಗನವಾಗಿದೆ.

ಜಂಟಿ ಪತ್ರಿಕಾಗೋಷ್ಠಿ ನಡೆಸಿದ ದೇವೇಗೌಡ-ಸಿದ್ದರಾಮಯ್ಯ ಹೇಳಿದ್ದೇನು?ಜಂಟಿ ಪತ್ರಿಕಾಗೋಷ್ಠಿ ನಡೆಸಿದ ದೇವೇಗೌಡ-ಸಿದ್ದರಾಮಯ್ಯ ಹೇಳಿದ್ದೇನು?

ಇದರಿಂದ ಕಾಂಗ್ರೆಸ್ ಸಂಪೂರ್ಣ ಸರ್ವನಾಶ ಆಗಲಿದೆ. ಈ ಮೂಲಕ ಕಾಂಗ್ರೆಸ್ ಮುಕ್ತ ಮಾಡುವ ಅವಕಾಶ ಬಿಜೆಪಿಗೆ ಕೈ ತಪ್ಪಿದಂತಾಗಿದೆ. ದೇವೇಗೌಡರೇ ರಾಜ್ಯವನ್ನು ಕಾಂಗ್ರೆಸ್ ಮುಕ್ತ ಮಾಡಲಿದ್ದಾರೆ.

ಉಪಚುನಾವಣೆ ಘೋಷಣೆಯಾದ ಬಳಿಕ ಸರ್ಕಾರದಲ್ಲಿ ಮಂತ್ರಿಗಳಿಲ್ಲದೇ ವಿಧಾನಸೌಧ ಖಾಲಿಯಾಗಿದೆ. ಯಾವ ಜಿಲ್ಲೆಗೂ ಉಸ್ತುವಾರಿ ಮಂತ್ರಿಗಳು ಭೇಟಿ ಕೊಡುತ್ತಿಲ್ಲ. ಮಂತ್ರಿಮಂಡಲದ ಅಧಿಕಾರವನ್ನು ಚುನಾವಣಾ ಪ್ರಕ್ರಿಯೆಗಾಗಿ ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮುಂದೆ ಓದಿ...

 ಬಿಜೆಪಿ ಗೆಲುವು

ಬಿಜೆಪಿ ಗೆಲುವು

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ . ಆದರೆ ರಾಜ್ಯದಲ್ಲಿ 5 ಕಡೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಬಿಜೆಪಿ, ಶಿವಮೊಗ್ಗ , ಬಳ್ಳಾರಿ ಜಮಖಂಡಿಯಲ್ಲಿ ಗೆಲುವು ಸಾಧಿಸಲಿದೆ. ಮಂಡ್ಯ ರಾಮನಗರದಲ್ಲಿ ಬಿಜೆಪಿಗೆ ಶಕ್ತಿ ಹೆಚ್ಚಾಗಿದ್ದು, ಈ ಎರಡು ಕ್ಷೇತ್ರಗಳಲ್ಲಿ ಮೈತ್ರಿ ರಾಜಕೀಯ ಫಲ ನೀಡುವುದಿಲ್ಲ ಎಂದು ಕೋಟಾ ಶ್ರೀನಿವಾಸ ಪೂಜಾರಿ ಭವಿಷ್ಯ ನುಡಿದರು.

ಉಪ ಚುನಾವಣೆ 2018 : ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ?ಉಪ ಚುನಾವಣೆ 2018 : ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ?

 ಮರಳಿನ ಸಮಸ್ಯೆ ವಿಪರೀತ

ಮರಳಿನ ಸಮಸ್ಯೆ ವಿಪರೀತ

ರಾಜ್ಯಾದ್ಯಂತ ಮರಳಿನ ಸಮಸ್ಯೆ ವಿಪರೀತವಾಗಿದೆ. ಲಾರಿ, ಟಿಪ್ಪರ್ ಚಾಲಕರು ಹಾಗೂ ಮಾಲೀಕರು ಬೀದಿಗಿಳಿದು ಹೋರಾಟ ಆರಂಭಿಸಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಬೇಕಾದ ರಾಜ್ಯ ಸರ್ಕಾರ ಸತ್ತು ಹೋಗಿದೆಯೇ? ಎಂದು ಕೋಟಾ ಪ್ರಶ್ನಿಸಿದರು.

 ಅನಿರ್ದಿಷ್ಟಾವಧಿ ಪ್ರತಿಭಟನೆ

ಅನಿರ್ದಿಷ್ಟಾವಧಿ ಪ್ರತಿಭಟನೆ

ಅಕ್ಟೋಬರ್ 25 ರೊಳಗೆ ಮರಳಿನ ಸಮಸ್ಯೆ ಬಗೆಹರಿಯಬೇಕು ಎಂದು ಗಡುವು ನೀಡಿದ ಅವರು ಸಮಸ್ಯೆ ಬಗೆಹರಿಯದಿದ್ದರೆ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸುವುದಾಗಿ ಕೋಟಾ ಶ್ರೀನಿವಾಸ ಪೂಜಾರಿ ಎಚ್ಚರಿಸಿದ್ದಾರೆ.

ಕಾಂಗ್ರೆಸ್-ಬಿಜೆಪಿ ಸಂಘರ್ಷಕ್ಕೆ ವೇದಿಕೆಯಾಗುತ್ತಿರುವ ಉಡುಪಿ ಜಿಲ್ಲಾ ಎಸ್ಪಿ ವರ್ಗಾವಣೆಕಾಂಗ್ರೆಸ್-ಬಿಜೆಪಿ ಸಂಘರ್ಷಕ್ಕೆ ವೇದಿಕೆಯಾಗುತ್ತಿರುವ ಉಡುಪಿ ಜಿಲ್ಲಾ ಎಸ್ಪಿ ವರ್ಗಾವಣೆ

 ಮರಳು ಕೊಡುವ ತನಕ ಪ್ರತಿಭಟನೆ

ಮರಳು ಕೊಡುವ ತನಕ ಪ್ರತಿಭಟನೆ

ಸಾರ್ವಜನಿಕರು, ದೋಣಿ ನಡೆಸುವವರು, ವಾಹನ ಚಾಲಕರ ಜೊತೆ ಬಿಜೆಪಿ ಪ್ರತಿಭಟನೆಗೆ ಇಳಿಯಲಿದೆ . ಉಡುಪಿ ಜಿಲ್ಲೆಯ 5 ಶಾಸಕರು, ಸಂಸದರು ಪ್ರತಿಭಟನೆಗೆ ಕೂರುತ್ತಾರೆ ಎಂದು ಹೇಳಿದ ಕೋಟಾ ಶ್ರೀನಿವಾಸ ಪೂಜಾರಿ ಸರ್ಕಾರ ಮರಳು ಕೊಡುವ ತನಕ ಪ್ರತಿಭಟನೆ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದರು.

English summary
In Udupi BJP MLC Kota Srinivas Poojary slams Congress and BJP. He said JDS and HD Devegowda will help to create congress free state with out the help of BJP
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X