ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಂಕಣ ರೈಲ್ವೆಯಿಂದ ಕರಾವಳಿ ಮಾರ್ಗವಾಗಿ 2 ವಿಶೇಷ ರೈಲು

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಫೆಬ್ರವರಿ. 24 : ಹೋಳಿ ಹಬ್ಬ ಮತ್ತು ಬೇಸಿಗೆಯಲ್ಲಿ ಪ್ರಯಾಣಿಕರ ದಟ್ಟಣೆ ನಿವಾರಣೆ ನಿಟ್ಟಿನಲ್ಲಿ ಕೊಂಕಣ ರೈಲ್ವೆ ಮಾರ್ಗದಲ್ಲಿ ವಾರಕ್ಕೊಮ್ಮೆ ಜಬಲ್ ಪುರ ಮತ್ತು ಕೊಯಮತ್ತೂರು ಮಧ್ಯೆ ಎರಡು ಸೂಪರ್ ಫಾಸ್ಟ್ ವಿಶೇಷ ಸಾಪ್ತಾಹಿಕ ರೈಲುಗಳು ಸಂಚರಿಸಲಿವೆ.

ಈ ಎರಡು ರೈಲುಗಳು ಕರಾವಳಿ ಭಾಗದ ಮಾರ್ಗವಾಗಿ ಸಂಚರಿಸಲಿದ್ದು ಅಲ್ಲಿನ ಜನರಿಗೆ ಅನುಕೂಲವಾಗಲಿದೆ.

02198/02197 ನಂಬರಿನ ರೈಲು ಮಾರ್ಚ್ 11ರಿಂದ ಜೂನ್ 3ರ ವರೆಗೆ ಪ್ರತಿ ಶನಿವಾರ ಬೆಳಗ್ಗೆ 11 ಗಂಟೆಗೆ ಜಬಲ್ ಪುರದದಿಂದ ಹೊರಟು ಸೋಮವಾರ ಬೆಳಗ್ಗೆ 4 ಗಂಟೆಗೆ ಕೊಯಮತ್ತೂರು ತಲುಪಲಿದೆ.

Konkan Railway introduce two special summer trains via coastal belt from March to June

02198/02197 ರೈಲು ನರಸಿಂಗಪುರ, ಗಡರ್ವಾರ್, ಪಿಪರಿಯ, ಇತರ್ಸಿ, ಹರ್ದಾ, ಖಂಡ್ವಾ , ಭೂಸವಾಲ್, ಮನ್ಮದ್, ಇಗಥ್ಪುರಿ, ಪನ್ವೇಲ್, ರೋಹಾ, ಖೆಡ್, ರತ್ನಗಿರಿ, ಕಂಕಾವಲಿ, ಕೂಡಾಲ್, ಮಡಂಗಾವ್, ಕಾರವಾರ, ಕುಮಟಾ, ಮೂಕಾಂಬಿಕಾ ರೋಡ್, ಉಡುಪಿ, ಮೂಲ್ಕಿ, ಮಂಗಳೂರು ಜಂಕ್ಷನ್ , ಕಾಸರಗೋಡು, ಪಯನ್ನೂರು, ಕಣ್ಣೂರು, ತಿರೂರು, ರೈಲ್ವೆ ಸ್ಟೇಷನ್ ಗಳಲ್ಲಿ ನಿಲುಗಡೆಯಾಗಲಿದೆ.

09458 ಗಾಂಧಿಧಾಮ್ ತಿರುನೆಲ್ವಿಲಿ ವಿಶೇಷ ಪ್ರಯಾಣದ ದರ ಗಾಂಧಿಧಾಮದಿಂದ ಏಪ್ರಿಲ್ 10 ರಿಂದ ಜೂನ್ 5ರ ತನಕ ಪ್ರತಿ ಸೋಮವಾರ ಮಧ್ಯಾಹ್ನ 1.30ಕ್ಕೆ ಹೊರಟು ಬುಧವಾರ ಬೆಳಗ್ಗೆ 11.30ಕ್ಕೆ ತಿರುನೆಲ್ವಿಲಿ ತಲುಪಲಿದೆ.

09457 ರೈಲು ತಿರುನೆಲ್ವಿಲಿದಿಂದ ಏಪ್ರಿಲ್ 13ರಿಂದ ಜೂನ್ 8ರ ವರೆಗೆ ಪ್ರತಿ ಮಂಗಳವಾರ ಬೆಳಗ್ಗೆ 7.45ಕ್ಕೆ ಹೊರಟು ಗುರುವಾರ ಬೆಳಗ್ಗೆ 4.30ಕ್ಕೆ ಗಾಂಧಿಧಾಮ ತಲುಪಲಿದೆ.

09457/09458 ರೈಲು ಭಚವು, ಸಮಖಿಯಾಲಿ, ವೀರಂ ಗಾಂ, ಅಹ್ಮದಾಬಾದ್, ವದೊಡ್ರಾ, ಸೂರತ್, ವಾಪಿ, ವಸಾಯಿ, ಪನ್ವೇಲ್, ರೋಹಾ, ರತ್ನಗಿರಿ, ಸಿಂಧುದುರ್ಗ, ಕರ್ಮಲಿ, ಮಡಂಗಾವ್, ಕಾರವಾರ, ಕುಮಟಾ, ಉಡುಪಿ, ಮಂಗಳೂರು, ಕಾಸರಗೋಡು, ಕಣ್ಣೂರು, ತಿರೂರು, ಎರ್ನಾಕುಲಂ, ಅಲೆಪ್ಪಿ, ಕೊಲ್ಲಂ, ತಿರುವನಂತಪುರಂ, ನಾಗರ್ ಕೊಯಿಲ್ ಟೌನ್ ಸ್ಟೇಷನ್ ಗಳಲ್ಲಿ ನಿಲುಗಡೆಯಾಗಲಿದೆ.

English summary
Indian Railways has announced that it will introduce two summer special trains from March to June in order to provide additional benefits to passengers of coastal Karnataka and to meet the holiday demands.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X