ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗು, ಕೇರಳಕ್ಕೆ ಪರಿಹಾರ ಘೋಷಣೆ ಮಾಡಿದ ಕೊಲ್ಲೂರು ದೇವಾಲಯ

By Gururaj
|
Google Oneindia Kannada News

ಉಡುಪಿ, ಆಗಸ್ಟ್ 19 : ಕೊಲ್ಲೂರಿನ ಮೂಕಾಂಬಿಕ ದೇವಾಲಯದ ಆಡಳಿತ ಮಂಡಳಿ ಕೊಡಗು ಮತ್ತು ಕೇರಳ ಪ್ರವಾಹದಲ್ಲಿ ಸಿಲುಕಿ ಮೃತಪಟ್ಟವರಿಗೆ ಶ್ರದ್ದಾಂಜಲಿ ಅರ್ಪಿಸಿದೆ. ಕೇರಳಕ್ಕೆ 1 ಕೋಟಿ, ಕೊಡಗು ಜಿಲ್ಲೆಗೆ 25 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ.

ಶನಿವಾರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸಭೆ ನಡೆಯಿತು. ಕೇರಳ ಮತ್ತು ಕೊಡಗಿನ ಪ್ರವಾಹ ಪರಿಸ್ಥಿತಿ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಕೇರಳ ಮತ್ತು ಕೊಡಗಿನಲ್ಲಿ ಪ್ರವಾಹ ಕಡಿಮೆ ಆಗಲಿ ಎಂದು ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಕೇರಳ ಜಲಪ್ರಳಯ: ಚಿತ್ರಗಳ ಜೊತೆ ಸಂಪೂರ್ಣ ಮಾಹಿತಿಕೇರಳ ಜಲಪ್ರಳಯ: ಚಿತ್ರಗಳ ಜೊತೆ ಸಂಪೂರ್ಣ ಮಾಹಿತಿ

Kollur Mookambika temple announced fund for flood effected Kerala and Kodagu

ಕೊಡಗು ಪ್ರವಾಹ ಸಂತ್ರಸ್ತರಿಗಾಗಿ ಅತ್ಯಗತ್ಯ ಸಹಾಯವಾಣಿಕೊಡಗು ಪ್ರವಾಹ ಸಂತ್ರಸ್ತರಿಗಾಗಿ ಅತ್ಯಗತ್ಯ ಸಹಾಯವಾಣಿ

ದೇವಸ್ಥಾನದ ನಿಧಿಯಿಂದ ಕೇರಳ ರಾಜ್ಯಕ್ಕೆ 1 ಕೋಟಿ, ಕೊಡಗು ಜಿಲ್ಲೆಗೆ 25 ಲಕ್ಷ ರೂ. ಬಿಡುಗಡೆಗೆ ಮಂಜೂರಾತಿ ಕೋರಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಲ್ಲಿ ಮನವಿ ಮಾಡಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಕೊಲ್ಲೂರಿನ ಮೂಕಾಂಬಿಕ ದೇವಾಲಯಕ್ಕೆ ಕರ್ನಾಟಕದ ಜೊತೆಗೆ ಕೇರಳದಲ್ಲೂ ಲಕ್ಷಾಂತರ ಭಕ್ತರಿದ್ದಾರೆ. ಕೇರಳದ ನೂರಾರು ಭಕ್ತರು ಪ್ರತಿದಿನ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಆದ್ದರಿಂದ, ಕೇರಳಕ್ಕೂ ಪರಿಹಾರ ಘೋಷಣೆ ಮಾಡಲಾಗಿದೆ.

English summary
Kollur Mookambika temple announced 1 crore fund for flood affected Kerala and 25 lakh fund for Kodadu district Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X