• search
 • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉಡುಪಿ; ಕೋಟಾ ದೇವಾಲಯದ ಅಚ್ಚರಿ, ಲಿಂಗ ಪೂಜಿಸಿದರೆ ಸಂತಾನ ಭಾಗ್ಯ!

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜನವರಿ 10; ಈ ಪ್ರಕೃತಿ ಹಲವು ನಿಗೂಢತೆಗಳ ಜಗತ್ತು. ಇಲ್ಲಿ ಯಾವುದು ಸಾಧ್ಯವಿಲ್ಲವೋ ಅದು ಕೆಲವೊಮ್ಮೆ ನಡೆದುಬಿಡುತ್ತದೆ. ಪ್ರಕೃತಿ ಯ ಮುಂದೆ‌ ಹಲವು ಬಾರಿ ವಿಜ್ಞಾನ ಸೋತಿದೆ. ವೈದ್ಯ ಲೋಕ ಕೈ ಬಿಟ್ಟ ಪ್ರಕರಣಗಳು ಪ್ರಕೃತಿಯ ಅಭಯದಿಂದ ಗೆದ್ದಿದೆ.

ಇಂತಹದೇ ಒಂದು ಅಚ್ಚರಿಯನ್ನು ಸೃಷ್ಠಿಸುವ ಕ್ಷೇತ್ರವೇ ಉಡುಪಿಯ ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನ. ಸಂತಾನಭಾಗ್ಯವಿಲ್ಲದವರಿಗೆ ಸಂತಾನ ಕರುಣಿಸುತ್ತಾಳೆ ಈ ತಾಯಿ. ವೈದ್ಯಕೀಯ ರಂಗವನ್ನೇ ಬೆರಗಾಗಿಸುವ ಮಕ್ಕಳು ಈ ಊರಿನಲ್ಲಿ ಇದ್ದಾರೆ. ಅಂತಹ ಹಲವು ಮಕ್ಕಳ ತಾಯಿಯ ವಿಶೇಷ ಜಾತ್ರೋತ್ಸವ ಕೊರೊನಾ ಆತಂಕದ ನಡುವೆಯೂ ಸರಳವಾಗಿ ಸಂಪನ್ನಗೊಂಡಿದೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅಭಿವೃದ್ಧಿ ಪರ್ವ; 300 ಕೋಟಿ ರೂ. ಯೋಜನೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅಭಿವೃದ್ಧಿ ಪರ್ವ; 300 ಕೋಟಿ ರೂ. ಯೋಜನೆ

ಉಡುಪಿ ಜಿಲ್ಲೆಯ ಕೋಟಾ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನ. ಇಲ್ಲಿನ ಲಿಂಗಾಕೃತಿಯ ಕಲ್ಲುಗಳೇ ಇಲ್ಲಿನ ಚಮತ್ಕಾರಿ ಮಕ್ಕಳು. ಅಮೃತೇಶ್ವರಿಯ ಪುಣ್ಯ ಕೃಪೆಯಿಂದ ಈ ಲಿಂಗಾಕೃತಿ ಅಮೃತೇಶ್ವರಿಯ ಮಕ್ಕಳೆಂದೇ ಖ್ಯಾತಿಗಳಿಸಿದೆ. ಅಮೃತೇಶ್ವರಿಯ ಮಡಿಲಿಗೆ ಸಂತಾನ ಭಾಗ್ಯದ ಮೊರೆಯನ್ನು ಕೇಳಿ ಬಂದ ಭಕ್ತರಿಗೆ ತಾಯಿ ಅಭಯಹಸ್ತ ‌ನೀಡಿದ್ದಾರೆ.

ಅಯೋಧ್ಯೆ ದೇವಾಲಯ ಬಳಿ ಭೂ ವಹಿವಾಟು: ಯುಪಿ ಸರ್ಕಾರದಿಂದ ತನಿಖೆಗೆ ಆದೇಶಅಯೋಧ್ಯೆ ದೇವಾಲಯ ಬಳಿ ಭೂ ವಹಿವಾಟು: ಯುಪಿ ಸರ್ಕಾರದಿಂದ ತನಿಖೆಗೆ ಆದೇಶ

ಈ ಲಿಂಗಾಕೃತಿಯ ಕಲ್ಲುಗಳು ಮಹಿಮಾನ್ವಿತ ಶಕ್ತಿಯನ್ನು ಹೊಂದಿದೆ. ಇವುಗಳನ್ನು ಸ್ಪರ್ಶ ಮಾಡಿದರೆ, ಇವುಗಳಿಗೆ ತೈಲ ಹಚ್ಚಿದರೆ ಚಮತ್ಕಾರ ನಡೆಯುತ್ತದೆ. ಮಕ್ಕಳಿಲ್ಲದವರಿಗೆ ಮಕ್ಕಳಾಗುತ್ತದೆ. ವೈದ್ಯಕೀಯ ಲೋಕಕ್ಕೆ ಸವಾಲಾಗಿದ್ದ ಪ್ರಕರಣಗಳು ಇಲ್ಲಿ ಬಗೆಹರಿದಿದೆ, ಬಗೆಹರಿಯುತ್ತದೆ.

ದೇವಾಲಯ ಸ್ವಾಯತ್ತತೆ: ಮುಜರಾಯಿ ದೇವರ ಜವಾಬ್ದಾರಿ ಭಕ್ತರಿಗೆ, ತಪ್ಪು, ಒಪ್ಪುಗಳುದೇವಾಲಯ ಸ್ವಾಯತ್ತತೆ: ಮುಜರಾಯಿ ದೇವರ ಜವಾಬ್ದಾರಿ ಭಕ್ತರಿಗೆ, ತಪ್ಪು, ಒಪ್ಪುಗಳು

ದೂರದಲ್ಲೇ ಇದ್ದು ಈ ಮಕ್ಕಳನ್ನು ಕರುಣಿಸು ಅಂತ ತಾಯಿಯನ್ನು ನೆನೆದರೆ ಸಮಸ್ಯೆಗಳು ನಿವಾರಣೆಯಾಗುತ್ತದೆ. ಇಲ್ಲಿನ ಈ ಹಲವು ಮಕ್ಕಳನ್ನು ಸ್ಪರ್ಶ ಮಾಡಿದರೆ ಸಂತಾನ ಭಾಗ್ಯದ ಸಮಸ್ಯೆ ನಿವಾರಣೆಯಾಗುತ್ತದೆ. ಮಾನವನ ಊಹೆಗೂ ಮೀರಿದ ಅಚ್ಚರಿಗಳು ನಡೆದಿದೆ. ಸಹಸ್ರಾರು ಜನರು ಒಳಿತನ್ನು ಕಂಡಿದ್ದಾರೆ, ಕಾಣುತಿದ್ದಾರೆ.

ಇನ್ನೂ ಜಾತ್ರಾ ಸಂದರ್ಭ ಮಕ್ಕಳನ್ನು ನೋಡಿ, ಮಕ್ಕಳನ್ನು ಸ್ಪರ್ಶಿಸಿ, ಅಚ್ಚರಿ ಅದ್ಭುತವನ್ನು ಕಾಣುತ್ತಿದ್ದಾರೆ. ಮಕ್ಕಳಿಂದ ಫಲವನ್ನು ಕಂಡವರೂ ಇಂದಿಗೂ ಕೂಡ ಆ ಮಕ್ಕಳನ್ನು ಸ್ಮರಿಸುತ್ತಾರೆ. ಜೀವನೋತ್ಸಾಹವನ್ನು ತಂದುಕೊಟ್ಟಿದಕ್ಕೆ ಕೃತಾಘ್ನರಾಗುತ್ತಾರೆ. ಮಕ್ಕಳಾದ ಬಳಿಕ ಮೊದಲಿಗೆ ಈ ಕಾರಣಿಕ ಮಕ್ಕಳ ದರ್ಶನವನ್ನು ಪಡೆಯುತ್ತಾರೆ. ಮಕ್ಕಳಾಗುವುದಿಲ್ಲ ಎಂದು ವರದಿ ನೀಡಿದ್ದ ವೈದ್ಯರಿಗೂ ಈ ಲಿಂಗಾಕೃತಿಯ ಮಕ್ಕಳ ಪ್ರಭಾವಕ್ಕೊಳಕ್ಕಾಗಿ ಚಕಿತಗೊಳ್ಳುತ್ತಾರೆ. ತನ್ನ ಕಾರಣಿಕ ಶಕ್ತಿಯಿಂದಲೇ ಇಲ್ಲಿನ ಈ ಹಲವು ಮಕ್ಕಳು ಖ್ಯಾತಿಯನ್ನು ಪಡೆದಿದ್ದಾರೆ.

Know About Shree Amruteshwari Temple At Kota, Udupi

ಇನ್ನು ಈ ಮಕ್ಕಳ ಕಾರಣಿಕಕ್ಕೆ ಒಳಗಾಗಿ ಹಲವು ಮಂದಿ ಸಂತಾನ ಭಾಗ್ಯ ಪಡೆದಿದ್ದಾರೆ. ಹೀಗಾಗಿ ತಮ್ಮ ಮಕ್ಕಳನ್ನು ಈ ಕ್ಷೇತ್ರಕ್ಕೆ ಕರೆತಂದು ತುಲಾಭಾರ ಸೇವೆಯನ್ನು ಒಪ್ಪಿಸುತ್ತಾರೆ. ಅದರಲ್ಲೂ ಜಾತ್ರೆಯ ಸಂದರ್ಭದಲ್ಲಿ ಈ ದೇವಸ್ಥಾನ ಸಂಪೂರ್ಣ ಮಕ್ಕಳಿಂದಲೇ ತುಂಬಿ ಹೋಗೋದು ಕ್ಷೇತ್ರದ ಕಾರಣಿಕ ಶಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ.

   ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ ಪಡೆದು ನೀವೂ ಪುನೀತರಾಗಿ | Oneindia Kannada

   ಒಟ್ಟಿನಲ್ಲಿ ಅಮೃತೇಶ್ವರಿಯು ಮಕ್ಕಳು ಕರುಣಿಸುವ ಮಹಾತಾಯಿ ಎಂಬ ಬಿರುದನ್ನು ಪಡೆದಿದ್ದಾಳೆ. ಭಕ್ತ ಜನರಿಂದ ಹಲವು ಮಕ್ಕಳ ತಾಯಿ ಎಂದು ಕರೆಸಿಕೊಂಡಿದ್ದಾಳೆ. ಈಕೆಯ ಅನುಗ್ರಹದಿಂದ ಅದೆಷ್ಟೋ ಮಂದಿ ಒಳಿತನ್ನು ಕಂಡಿರುವುದು ಮಾತ್ರ ಸುಳ್ಳಲ್ಲ.

   English summary
   Shree Amruteshwari temple at Kota Udupi popularly know as Kota Halavu Makkala Tayi temple.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X