ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ; ಈ ಮನೆಯಲ್ಲಿದೆ 2500ಕ್ಕೂ ಅಧಿಕ ಹಳೆಯ ವಸ್ತುಗಳು!

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ನವೆಂಬರ್ 30; ಸ್ವಂತ ಮನೆ ಕಟ್ಟಬೇಕು ಅನ್ನೋದು ಎಲ್ಲರ ಕನಸು. ಆ ಮನೆ ಸುಂದರವಾಗಿರಬೇಕು. ಎಲ್ಲಾ ಸೌಕರ್ಯಗಳಿರಬೇಕು. ಸುಸಜ್ಜಿತ ವಾಗಿ ನಾಲ್ಕು ಮಂದಿ ಮನೆ ಅಂದರೆ ಹೀಗಿರಬೇಕು ಅಂತಾ ಹೇಳಬೇಕೆನ್ನೋದು ಬಹುಜನರ ಆಸೆಯಾಗಿದೆ‌‌.

ಅದರಲ್ಲೂ ಬಹುಮಡಿಯ ಮನೆಗಳು ಈಗ ಸಂಪೂರ್ಣ ನೂತನ ತಂತ್ರಜ್ಞಾನವನ್ನು ಹೊಂದಿರುತ್ತದೆ. ಎಲ್ಲವೂ ಸೆನ್ಸಾರ್ ಒಳಗೊಂಡಿರುತ್ತದೆ.‌ ಆದರೆ ಉಡುಪಿಯ ಈ ಮನೆಯಲ್ಲಿ ಮಾತ್ರ ಸಂಪೂರ್ಣ ಹಳೆಯ ವಸ್ತುಗಳೇ ತುಂಬಿಕೊಂಡಿದೆ.

ಎಸಿಬಿ ದಾಳಿ; 28 ಮನೆ, 16 ನಿವೇಶನದ ಒಡೆಯ ವಾಸುದೇವ್ ಬಂಧನ ಎಸಿಬಿ ದಾಳಿ; 28 ಮನೆ, 16 ನಿವೇಶನದ ಒಡೆಯ ವಾಸುದೇವ್ ಬಂಧನ

ಮಾಡರ್ನ್ ಮನೆಗೆ ಹಳೆಯ ವಸ್ತುಗಳು ಹೊಸ ಮೆರುಗನ್ನು ನೀಡಿದೆ. ಮನೆಯನ್ನು ನೋಡಿದರೆ ಮಿನಿ ಮ್ಯೂಸಿಯಂ ನೋಡಿದ ಅನುಭವವಾಗುತ್ತದೆ. ಮನೆಯನ್ನು ಸುತ್ತಾಡಿದರೆ 2,500ಕ್ಕೂ ಅಧಿಕ ಹಳೆ ಕಾಲದ ವಸ್ತುಗಳು ಸಿಗುತ್ತದೆ.

ಗುಜರಿ ವಸ್ತು ಬಳಸಿ ಮೋದಿ ಪ್ರತಿಮೆ; ಬೆಂಗಳೂರಲ್ಲಿ ಸ್ಥಾಪನೆಗುಜರಿ ವಸ್ತು ಬಳಸಿ ಮೋದಿ ಪ್ರತಿಮೆ; ಬೆಂಗಳೂರಲ್ಲಿ ಸ್ಥಾಪನೆ

ಹಳೆ ಕಾಲದ ತಾಮ್ರದ ಪಾತ್ರಗಳು, ಗಡಿಯಾರಗಳು, ರಾಜರು ಬಳಸುತ್ತಿದ್ದ ದೇವರ ವಿಗ್ರಹಳು, ಸುಣ್ಣದ ಡಬ್ಬಿ, ಕಾಲುದೀಪ ದೇವರ ಪೂಜೆಯ ವಿಶಿಷ್ಠ ಬಗೆಯ ವಸ್ತುಗಳು. ಹೀಗೆ ಮನೆ ತುಂಬಾ ಹಳೆಯ ಕಾಲದ ವಸ್ತುಗಳು ಒಂದಲ್ಲ ಎರಡಲ್ಲ ಸುಮಾರು 2500ಕ್ಕೂ ಮಿಕ್ಕಿ ಹಳೆಯ ಕಾಲದ ವಸ್ತುಗಳು ಇಲ್ಲಿವೆ.

 ಉಡುಪಿ: ಫ್ಯಾಷನ್‌ಗಾಗಿ ಬಿಟ್ಟಿದ್ದ ಕೂದಲನ್ನು ದಾನ ಮಾಡಿ ಮಾದರಿಯಾದ ವಿದ್ಯಾರ್ಥಿ ಉಡುಪಿ: ಫ್ಯಾಷನ್‌ಗಾಗಿ ಬಿಟ್ಟಿದ್ದ ಕೂದಲನ್ನು ದಾನ ಮಾಡಿ ಮಾದರಿಯಾದ ವಿದ್ಯಾರ್ಥಿ

ಉಡುಪಿಯಲ್ಲಿದೆ ಈ ವಿಶೇಷ ಮನೆ

ಉಡುಪಿಯಲ್ಲಿದೆ ಈ ವಿಶೇಷ ಮನೆ

ಹೀಗೆ ಪ್ರಾಚ್ಯ ವಸ್ತುಗಳೇ ತುಂಬಿರುವ ಈ ಮನೆ ಇರೋದು ಉಡುಪಿ ಜಿಲ್ಲೆಯಿಂದ 17 ಕಿಲೋಮೀಟರ್ ದೂರದಲ್ಲಿರುವ ಬಾರ್ಕೂರು ಎಂಬಲ್ಲಿ. ಮನೆ ಯಜಮಾನ ವೆಂಕಟರಮಣ ಭಂಡಾರ್ಕರ್ ಪ್ರಾಚ್ಯ ವಸ್ತುಗಳನ್ನು ಸಂಗ್ರಹಿಸುತ್ತಾ, ಅಂದಿನ ಜನಜೀವನದಲ್ಲಿ ಉಪಯೋಗಿಸುತ್ತಿದ್ದ ವಸ್ತುಗಳನ್ನು ಇಂದಿನ-ಮುಂದಿನ ಪೀಳಿಗೆಗೆ ಪರಿಚಯಿಸುವ ದೃಷ್ಠಿಯಿಂದ ಬಾರ್ಕೂರಿನ ವೆಂಕಟರಮಣ ಭಂಡಾರ್ಕಾರ್, ಇಂತಹ ಒಂದು ಅದ್ಭುತ ಪ್ರಯತ್ನ ಕೈ ಹಾಕಿ ಸೈ ಎನಿಸಿಕೊಂಡಿದ್ದಾರೆ.

ಹಳೆಯ ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸ

ಹಳೆಯ ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸ

ಎಲ್ಲಾದರೂ ಹಳೆದ ವಸ್ತುಗಳು ಕಂಡು ಬಂದರೆ ಅದನ್ನು ಕೇಳಿ ತಂದು ಮನೆಯಲ್ಲಿ ಸಂಗ್ರಹಿಸುವ ಒಳ್ಳೆಯ ಹವ್ಯಾಸ ಇವರದ್ದಾಗಿದ್ದು, ಮನೆಯ ತುಂಬಾ ಸುಮಾರು‌ 2,500ಕ್ಕೂ ಅಧಿಕ ಹಳೆಯ ವಸ್ತುಗಳನ್ನು ಕಾಣಬಹುದಾಗಿದೆ. ಮನೆಯ ಪ್ರವೇಶ ದ್ವಾರದಿಂದ ಹಿಡಿದು ಚಾವಡಿ, ಪಡಸಾಲೆ, ಅಡುಗೆ ಮನೆ ಹಾಗೂ ಕೋಣೆಗಳಲ್ಲಿ ಅಚ್ಚುಕಟ್ಟಾಗಿ ಸುಂದರವಾಗಿ ವಸ್ತುಗಳನ್ನು ಜೋಡಿಸಿ ಇಡಲಾಗಿದೆ. ತನ್ನ ಪತ್ನಿ ಮತ್ತು ಮಕ್ಕಳ ಸಹಕಾರದಿಂದ ಸಂಗ್ರಹಾಲಯ ಸ್ವಚ್ಚವಾಗಿ ಆಕರ್ಷಣೀಯವಾಗಿರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಡುಗೆ ಕೋಣೆಯಲ್ಲೂ ಹಳೇ ವಸ್ತುಗಳನ್ನು ಸಂಗ್ರಹಿಸಿಡಲಾಗಿದ್ದು ವಿವಿಧ ರೀತಿಯ ಅಡುಗೆ ಪರಿಕರಗಳು, ಬಟ್ಟಲುಗಳನ್ನು ಕೂಡ ಕಾಣಬಹುದಾಗಿದೆ.

ವಸ್ತುಗಳ ಪರಿಚಯ ಮಾಡಿಸುತ್ತಾರೆ

ವಸ್ತುಗಳ ಪರಿಚಯ ಮಾಡಿಸುತ್ತಾರೆ

ಮುಂದಿನ ಪೀಳಿಗೆಗೆ, ಹಳೆಯ ವಸ್ತುಗಳ ಅಧ್ಯಯನಕ್ಕೆ ಅನುಕೂಲ ವಾತಾವರಣ ನಿರ್ಮಿಸಿಕೊಟ್ಟ ಭಂಡಾರ್ಕರ್ ಇವರ ಪ್ರಾಚ್ಯ ವಸ್ತು ಸಂಗ್ರಹಾಲಯಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ನೂರಾರು ಮಂದಿ ಗಣ್ಯರು ಭೇಟಿ ನೀಡಿ ನೀಡಿದ್ದಾರೆ. ಯಾರೇ ಬಂದರೈ ಮನೆಯನ್ನು ಸುತ್ತಾಡಿಸಿ ವಸ್ತುಗಳ ಬಗ್ಗೆ ಭಂಡಾರ್ಕರ್ ವಿವರಣೆ ನೀಡುತ್ತಾರೆ.

ತಮ್ಮ‌ ವಿಶೇಷ ಆಸಕ್ತಿಯ ಬಗ್ಗೆ ಮಾತನಾಡಿದ ವೆಂಕಟರಮಣ ಭಂಡಾರ್ಕರ್, "ನನಗೆ ಈ ವಸ್ತುಗಳನ್ನು ಸಂಗ್ರಹಿಸಿ ಇಡೋದಕ್ಕೆ ಸ್ಫೂರ್ತಿಯಾದವರು ಧರ್ಮಸ್ಥಳ ದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು. ಧರ್ಮಸ್ಥಳದ ಮಂಜೂಷಾ ವಸ್ತು ಸಂಗ್ರಹಾಲಯ ದಲ್ಲಿ ಹಲವು ವಸ್ತುಗಳನ್ನು ನೋಡಿದ ಬಳಿಕ ನನಗೂ ಈ ಮಾದರಿಯಲ್ಲಿ ಮಾಡಬೇಕು ಅಂತಾ ಆಸೆಯಾಯಿತು" ಎಂದು ಹೇಳಿದ್ದಾರೆ.

Recommended Video

13 ರಾಷ್ಟ್ರಗಳಿಗೆ ಒಮಿಕ್ರಾನ್ ಲಗ್ಗೆ ! | Oneindia Kannada
ಸುಮಾರು 20 ಸಾವಿರ ಜನರ ಭೇಟಿ

ಸುಮಾರು 20 ಸಾವಿರ ಜನರ ಭೇಟಿ

"ಹಳೆಯ ವಸ್ತುಗಳನ್ನು ಕೆಲವೊಂದನ್ನು ದುಡ್ಡು ಕೊಟ್ಟು ಖರೀದಿಸಿದ್ದೇನೆ. ಇನ್ನೂ ಕೆಲವನ್ನು ಕಾಡಿ-ಬೇಡಿ ತಂದಿದ್ದೇನೆ. ನಮ್ಮಲ್ಲಿ ಹಳೆಯ ಗಡಿಯಾರ,1841ಇಸವಿಯ ಇಂಗ್ಲೆಂಡ್‌ನ ಬೈನಾಕ್ಯುಲರ್ ಕೂಡಾ ಇದೆ. ಈ ವರೆಗೆ ಸುಮಾರು 20,000 ಜನರು ಈ ಸಂಗ್ರಹಾಲಯವನ್ನು ವೀಕ್ಷಿಸಿ ಮೆಚ್ಚುಗೆ ನೀಡಿದ್ದಾರೆ" ಎಂದು ವೆಂಕಟರಮಣ ಭಂಡಾರ್ಕರ್ ಹೇಳಿದ್ದಾರೆ.‌

ಒಟ್ಟಿನಲ್ಲಿ ಆಧುನಿಕ ಕಾಲದಲ್ಲಿದ್ದರೂ, ನಶಿಸಿ ಅಸ್ತಿಪಟಲದಿಂದ ಅಳಿಸಿ ಹೋಗುತ್ತಿದ್ದ ವಸ್ತುಗಳನ್ನು ತಂದು ಅದಕ್ಕೆ ವೆಂಕಟರಮಣ ಭಂಡಾರ್ಕರ್ ಕಾಯಕಲ್ಪ ನೀಡಿದ್ದಾರೆ. ಭಂಡಾರ್ಕರ್ ಈ ಹವ್ಯಾಸದಿಂದ ಹಿರಿಯರಿಗೆ ತಮ್ಮ ಕಾಲದ ವಸ್ತುಗಳನ್ನು ನೋಡಿದ ಖುಷಿಯಾದರೆ ಕಿರಿಯರಿಗೆ ಹೀಗೂ ಇತ್ತಾ ಅನ್ನುವ ವಿಶೇಷ ಜ್ಞಾನ ಸಿಗುತ್ತದೆ.

English summary
Know about antique things museum at Ududpi district Barkur. More than 2,500 antique tings available in house.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X