ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಎಂಸಿಯ ಟಿಎಂಎಪೈ ಆಸ್ಪತ್ರೆ ಇನ್ನು ಕೋವಿಡ್ ಆಸ್ಪತ್ರೆ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಮಾರ್ಚ್ 30: ಕೊರೊನಾ ಮಹಾಮಾರಿ ವಿರುದ್ಧ ಹೋರಾಡಲು ಜಿಲ್ಲಾಡಳಿತದ ಜೊತೆಗೆ ಕೆಎಂಸಿ ಆಸ್ಪತ್ರೆ ಕೈ ಜೋಡಿಸಿದೆ. ಉಡುಪಿ ನಗರದಲ್ಲಿರುವ, ತನ್ನ ನೂರು ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಮೀಸಲಿಡಲು ಸಂಸ್ಥೆ ಮುಂದಾಗಿದೆ.

ಇಷ್ಟೇ ಅಲ್ಲದೆ ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಕಂಡು ಬಂದರೆ ಅವರಿಗೆ ಉಚಿತವಾಗಿ ಚಿಕಿತ್ಸೆ ನೀಡಲು ಮಣಿಪಾಲ ಸಂಸ್ಥೆ ತಯಾರಿ ನಡೆಸಿದೆ. ಉಡುಪಿಯ ಟಿ ಎಂ ಎ ಪೈ ಆಸ್ಪತ್ರೆಯನ್ನು ಕೋವಿಡ್ 19 ಆಸ್ಪತ್ರೆಯಾಗಿ ಪರಿವರ್ತನೆ ಮಾಡಲಾಗಿದೆ.

ಉಡುಪಿಯಲ್ಲಿ ಮತ್ತೆ 2 ಪಾಸಿಟಿವ್, ಒಟ್ಟು 3 ಜನಕ್ಕೆ ಕೊರೊನಾಉಡುಪಿಯಲ್ಲಿ ಮತ್ತೆ 2 ಪಾಸಿಟಿವ್, ಒಟ್ಟು 3 ಜನಕ್ಕೆ ಕೊರೊನಾ

ಒಟ್ಟು ನೂರು ಹಾಸಿಗೆ ಸಾಮರ್ಥ್ಯವಿರುವ ಈ ಆಸ್ಪತ್ರೆಯಲ್ಲಿ 11 ಹಾಸಿಗೆಗಳಿರುವ ತೀವ್ರ ನಿಗಾ ಘಟಕ, 15 ಹೈ ಡಿಪೆಂಡೆನ್ಸಿವ್ ಯುನಿಟ್, 36 ಸಿಂಗಲ್ ರೂಮ್ ಐಸೋಲೇಷನ್ ವಾರ್ಡ್, 43 ಹಾಸಿಗೆಗಳ ಸಾಮಾನ್ಯ ವಾರ್ಡುಗಳು ಈಗಾಗಲೇ ಸಿದ್ಧಗೊಂಡಿದೆ.

KMC Tma Pai Hospital Is Now Covid Hospital

ಇಲ್ಲಿ ಕೇವಲ ಪಾಸಿಟಿವ್ ಕೇಸುಗಳಿಗೆ ಚಿಕಿತ್ಸೆ ಸಿಗಲಿದ್ದು, ಶಂಕಿತ ಪ್ರಕರಣಗಳು ಬಂದರೆ ಅವರನ್ನು ಉದ್ಯಾವರ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಗದೀಶ್ ಹೇಳಿದ್ದಾರೆ. ರಾಜ್ಯದಲ್ಲೇ ಅತ್ಯಂತ ಸುಸಜ್ಜಿತ ವೈದ್ಯಕೀಯ ವ್ಯವಸ್ಥೆ ಇರುವ ಮಣಿಪಾಲ್ ಆಸ್ಪತ್ರೆ ಕೊರೊನಾ ವಿರುದ್ಧ ಹೋರಾಡಲು ಅಣಿಯಾಗಿರುವ ಕಾರಣ ಜಿಲ್ಲೆಯ ಜನರು ನಿಟ್ಟುಸಿರುಬಿಟ್ಟಿದ್ದಾರೆ.

English summary
kmc hospital has joined its hands to fight against corona. it has kept its 100 beds tma pai hospital for corona infected patients
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X