ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರತಿಷ್ಠೆಗೆ ಕಾರಣವಾದ ಕೊಲ್ಲೂರು ದೇವಾಲಯದ ಅಧ್ಯಕ್ಷರ ಆಯ್ಕೆ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಏಪ್ರಿಲ್ 26; ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದ ಬಹು ನಿರೀಕ್ಷಿತ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಆಯ್ಕೆ ಸೋಮವಾರ ನಡೆದಿದೆ. ಸಂಘ ಪರಿವಾರದ ಹಿನ್ನಲೆಯ ಕೆರಾಡಿ ಚಂದ್ರಶೇಖರ ಶೆಟ್ಟಿ ಅಧ್ಯಕ್ಷರಾಗಿ ಆಯ್ಕೆಯಾದರು.

ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸ್ಥಳೀಯ ಶಾಸಕ ಸುಕುಮಾರ ಶೆಟ್ಟಿ ನಡುವೆ ಮುಸುಕಿನ ಗುದ್ದಾಟದ ಹಿನ್ನಲೆಯಲ್ಲಿ ಆಡಳಿತ ಮಂಡಳಿ ಆಯ್ಕೆ ನಡೆದು ತಿಂಗಳುಗಳು ಕಳೆದಿದ್ದರೂ, ಅಧ್ಯಕ್ಷರ ಆಯ್ಕೆ ಮಾತ್ರ ಆಗಿರಲಿಲ್ಲ.

 ಬಿಜೆಪಿ ಶಾಸಕರ ವಿರುದ್ದ ಅದೇ ಪಕ್ಷದ ಮುಖಂಡನಿಂದ ಕೊಲ್ಲೂರು ಮೂಕಾಂಬಿಕೆಗೆ ದೂರು! ಬಿಜೆಪಿ ಶಾಸಕರ ವಿರುದ್ದ ಅದೇ ಪಕ್ಷದ ಮುಖಂಡನಿಂದ ಕೊಲ್ಲೂರು ಮೂಕಾಂಬಿಕೆಗೆ ದೂರು!

ಕೊನೆಗೂ ಸಾಕಷ್ಟು ಗೊಂದಲಗಳ ನಡುವೆ ಸೋಮವಾರ ನೂತನ ಅಧ್ಯಕ್ಷರ ಆಯ್ಕೆ ನಡೆಯಿತು. ಆದರೆ, ಸ್ಥಳೀಯ ಶಾಸಕ ಸುಕುಮಾರ ಶೆಟ್ಟಿ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಗೈರು ಹಾಜರಾಗಿದ್ದು ,ಶಾಸಕರು ಮತ್ತು ಸಚಿವರ ನಡುವಿನ ಭಿನ್ನಮತ ಮತ್ತೆ ಬಹಿರಂಗಗೊಂಡಿದೆ.

ಕೊಲ್ಲೂರು ದೇವಾಲಯದಲ್ಲಿ ಕೋಟಿ-ಕೋಟಿ ಲೂಟಿ?ಕೊಲ್ಲೂರು ದೇವಾಲಯದಲ್ಲಿ ಕೋಟಿ-ಕೋಟಿ ಲೂಟಿ?

 Keradi Chandrashekar Shetty Elected As President Of Kolluru Temple Board

ಚಂದ್ರಶೇಖರ ಶೆಟ್ಟಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಬಣದ ಅಭ್ಯರ್ಥಿಯಾಗಿದ್ದೇ ಈ ಎಲ್ಲಾ ಅಸಮಾಧಾನಕ್ಕೆ ಮೂಲ ಕಾರಣ ಎನ್ನಲಾಗಿದೆ. ಹೀಗಾಗಿ ಚಂದ್ರಶೇಖರ ಶೆಟ್ಟಿ ಅವರನ್ನು ಅಧ್ಯಕ್ಷರನ್ನಾಗಿಸಿದ್ದಕ್ಕೆ ಶಾಸಕ ಸುಕುಮಾರ್ ಶೆಟ್ಟಿ ಬಣದಿಂದ ತೀವ್ರ ವಿರೋಧ ವ್ಯಕ್ತವಾಯಿತು.

 ಕೊಲ್ಲೂರು: ರೋಪ್ ವೇ ಯೋಜನೆ ಡಿಪಿಆರ್ ತಯಾರಿಗೆ ಚಾಲನೆ ಕೊಲ್ಲೂರು: ರೋಪ್ ವೇ ಯೋಜನೆ ಡಿಪಿಆರ್ ತಯಾರಿಗೆ ಚಾಲನೆ

Recommended Video

#Covid19Updates ಕರ್ನಾಟಕ: ರಾಜ್ಯದಲ್ಲಿ ಇಂದು 29744 ಜನರಿಗೆ ಸೋಂಕು | Oneindia Kannada

ಅಧ್ಯಕ್ಷರ ಆಯ್ಕೆ ನಡೆದ ಬಳಿಕ ಹೊರ ಬಂದು ಆಕ್ರೋಶ ಹೊರ ಹಾಕಿದ ಶಾಸಕರ ಬಣದವರು, ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸರಿಯಿಲ್ಲ ಎಂದರು. ಈ ಹಂತದಲ್ಲಿ ಬೆಂಬಲಿಗರು ಕೈ ಕೈ ಮಿಲಾಯಿಸಲು ಹೋದ ಪ್ರಸಂಗವೂ ನಡೆದಿದೆ. ಈ ವೇಳೆ ಪೊಲೀಸರು‌ ಮಧ್ಯ ಪ್ರವೇಶಿಸಿ ಮುಂದೆ ನಡೆಯಬಹುದಾದ ಸಂಘರ್ಷವನ್ನು ತಪ್ಪಿಸಿದರು.

English summary
Keradi Chandrashekar Shetty elected as the president of the Kollur Mookambika temple board.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X