ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಲೆಗಳ ಮೇಲೆ ವಾಂಕಿಂಗ್; ಮಲ್ಪೆಯ ತೇಲುವ ಸೇತುವೆ ವಿಶೇಷ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಮೇ 06; ಭೋರ್ಗರೆಯುವ ಕಡಲ ಅಲೆ ನೋಡೋಕೆ ಚಂದ. ಹತ್ತಿರ ಹೋದರೆ ರೌದ್ರ ಭಯಂಕರ. ಆದರೆ ಇನ್ನು ಮುಂದೆ ಕಡಲ ಅಲೆಗೆ ಹೆದರಬೇಕಾಗಿಲ್ಲ. ಅಲೆಗಳ ಮೇಲೆಯೇ ನಡೆದುಕೊಂಡೇ ಹೋಗಬಹುದು.

ಹೌದು ಇಂತಹ ಅದ್ಭುತ ಅವಕಾಶ ಉಡುಪಿ ಮಲ್ಪೆ ಕಡಲ ಕಿನಾರೆಯಲ್ಲಿ ಕಲ್ಪಿಸಲಾಗಿದೆ. ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ಇಂತಹ ಪ್ರಯೋಗಕ್ಕೆ ಉಡುಪಿ ಸಾಕ್ಷಿಯಾಗಿದೆ. ಹೊಸ ಪ್ರಯೋಗ ಸಾಹಸಿಗಳನ್ನು ಸೆಳೆಯುತ್ತಿದೆ.

ಮಲ್ಪೆ ಬಂದರಿನಲ್ಲಿ ತುಂಬಿದ ಹೂಳು; ಮೀನುಗಾರರ ಜೀವಕ್ಕಿಲ್ವಾ ಬೆಲೆ?ಮಲ್ಪೆ ಬಂದರಿನಲ್ಲಿ ತುಂಬಿದ ಹೂಳು; ಮೀನುಗಾರರ ಜೀವಕ್ಕಿಲ್ವಾ ಬೆಲೆ?

ಉಡುಪಿಯ ಮಲ್ಪೆ ಬೀಚಿಗೆ ಹೊಸ ಆಕರ್ಷಣೆ ಸೇರ್ಪಡೆಯಾಗಿದೆ. ಈ ಸೇರ್ಪಡೆ ಕಡಲ ತಡಿಯ ಮೆರುಗು ಹೆಚ್ಚಿಸಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಸಮುದ್ರದ ಅಲೆಗಳ ಮೇಲೆ ನಡೆದು ಸಾಗುವಂತಹ ತೇಲುವ ಸೇತುವೆ ಉದ್ಘಾಟನೆಯಾಗಿದೆ.

 ಮಲ್ಪೆ ಕಡಲಕಿನಾರೆಯಲ್ಲಿ ರೂಬಿಕ್ಸ್ ಕ್ಯೂಬ್‌ನಲ್ಲಿ ಅರಳಿದ ಅಪ್ಪು ಚಿತ್ರ ಮಲ್ಪೆ ಕಡಲಕಿನಾರೆಯಲ್ಲಿ ರೂಬಿಕ್ಸ್ ಕ್ಯೂಬ್‌ನಲ್ಲಿ ಅರಳಿದ ಅಪ್ಪು ಚಿತ್ರ

Karnatakas First Floating Bridge Inaugurated In Udupi

ಕೇರಳದ ಬೇಕೂರು ಕಡಲ ತೀರದಲ್ಲಿ ಹಾಕಲಾದ ತೇಲುವ ಸೇತುವೆ ಮಾದರಿಯಲ್ಲೇ ರಾಜ್ಯದ ಉಡುಪಿಯ ಮಲ್ಪೆಯಲ್ಲಿ ತೇಲುವ ಸೇತುವೆ ನಿರ್ಮಾಣವಾಗಿದೆ. 100 ಮೀಟರ್ ಉದ್ದ ಮತ್ತು 3.5 ಮೀಟರ್ ಅಗಲವಿರುವ ತೇಲುವ ಸೇತುವೆ ಇದಾಗಿದ್ದು, ಸಮುದ್ರದ ಅಲೆಗಳ ಮೇಲೆ ನಡೆದು ಸಾಗುವ ಅನುಭವವನ್ನು ಇದು ನೀಡುತ್ತದೆ.

ಮಲ್ಪೆ ಮೀನುಗಾರರ ಬಲೆಗೆ ಬಿದ್ದ ಅಪರೂಪದ ಹೆಲಿಕಾಪ್ಟರ್ ಫಿಶ್!ಮಲ್ಪೆ ಮೀನುಗಾರರ ಬಲೆಗೆ ಬಿದ್ದ ಅಪರೂಪದ ಹೆಲಿಕಾಪ್ಟರ್ ಫಿಶ್!

ತೇಲುವ ಸೇತುವೆ ವಿಶೇಷ; ಸಮುದ್ರದ ದಡದಿಂದ ತೆರೆಗಳ ನಡುವೆ ನಿರ್ಮಾಣವಾಗಿರುವ ಈ ಸೇತುವೆ, ನೀರಿನಲ್ಲಿ ತೇಲುವ ಮಾದರಿಯಲ್ಲಿ ನಿರ್ಮಾಣವಾಗಿದೆ. ಇದರ ಮೇಲೆ ನಡೆದು ಸಮುದ್ರದಲ್ಲಿ ನೂರು ಮೀಟರ್ ವರೆಗೂ ನಡೆದು ಸಾಗುವ ಮೂಲಕ ತೇಲುವ ಸೇತುವೆ ಅನುಭವವನ್ನು ಪ್ರವಾಸಿಗರು ಪಡೆದುಕೊಳ್ಳಬಹುದಾಗಿದೆ.

ಈ ಸೇತುವೆಯ ಮೇಲೆ ನಡೆದು ಸಾಗುವ ಪ್ರವಾಸಿಗರು ಅಲೆಗಳ ರಭಸಕ್ಕೆ ಸಮುದ್ರಕ್ಕೆ ಬೀಳದಂತೆ ತಡೆಯಲು ಸೇತುವೆಯ ಎರಡು ಬದಿಗಳಲ್ಲಿ ರೇಲಿಂಗ್ಸ್ ಕೂಡ ಅಳವಡಿಸಲಾಗಿದೆ. ಮಲ್ಪೆಯ ಈ ಸೇತುವೆಗೆ ಧನಂಜಯ ಕಾಂಚನ್, ಶೇಖರ್ ಪುತ್ರನ್, ಸುದೇಶ್ ಶೆಟ್ಟಿ ಎಂಬ ಮೂರು ಮಂದಿ ಪಾಲುದಾರರಿದ್ದು 80 ಲಕ್ಷ ಖರ್ಚು ಮಾಡಲಾಗಿದೆ.

Karnatakas First Floating Bridge Inaugurated In Udupi

ಈ ಸೇತುವೆಗೆ ಹೆಚ್ಚಿನ ಸಾಂಧ್ರತೆಯ ಪೊಂಟೋನ್ಸ್ ಬಾಕ್ಸ್‌ಗಳನ್ನು ಹಾಕಲಾಗಿದೆ. ಒಂದೇ ಬಾರಿ ನೂರು ಜನರು ಈ ಸೇತುವೆ ಮೇಲೆ ಸಾಗಬಹುದಾಗಿದೆ. ಒಬ್ಬರಿಗೆ 15 ನಿಮಿಷ ಗಳ‌ ಕಾಲ ಕಳೆಯಲು ಅವಕಾಶ ನೀಡಲಾಗಿದೆ. ಒಬ್ಬರು 100 ರೂ. ಟಿಕೆಟ್‌ಗೆ ಪಾವತಿ ಮಾಡಬೇಕು.

ಸೇತುವೆ ಇಕ್ಕೆಲಗಳಲ್ಲಿ 10 ಮಂದಿ ಲೈಫ್ ಗಾರ್ಡ್ ಗಳಿದ್ದು ಅವಘಡಗಳಾದರೂ ರಕ್ಷಣೆಗೆ ಸರ್ವ ಸನ್ನದ್ಧರಾಗಿರುತ್ತಾರೆ. ಈ ಸೇತುವೆಯ ಮೇಲೆ ಉಡುಪಿ ಶಾಸಕ ರಘುಪತಿ ಭಟ್, ಉದ್ಯಮಿ ಜಿ. ಶಂಕರ್ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ವಾಕ್ ಮಾಡಿ ಸೇತುವೆಗೆ ಚಾಲನೆ ನೀಡಿದರು.

ಒಟ್ಟಿನಲ್ಲಿ ರಾಜ್ಯದಲ್ಲಿ ಮೊದಲ ಫ್ಲೋಟಿಂಗ್ ಬ್ರಿಡ್ಜ್ ನಿರ್ಮಾಣ ಆಗಿದ್ದು ಮಳೆಗಾಲ ಆರಂಭವಾಗುವ ಮೊದಲು ಉಡುಪಿಗೆ ಹೋದರೆ ಮಲ್ಪೆಯ ಈ ಸೇತುವೆ ಮೇಲೆ ಹೋಗಲು ಮಾತ್ರ ಮರಿಯಬೇಡಿ.

English summary
Karnataka's first floating bridge inaugurated in Malpe beach Udupi. Tourist can feel the sea wave movement and enjoy walk in the bridge.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X