ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಯಲ್ಲಿ ಕರ್ನಾಟಕದ ಮೊದಲ ತೇಲುವ ಸೇತುವೆ ಇಂದು ಲೋಕಾರ್ಪಣೆ

|
Google Oneindia Kannada News

ಉಡುಪಿ ಮೇ 6: ಪ್ರವಾಸೋದ್ಯಮಕ್ಕೆ ಹೆಸರಾದ ಉಡುಪಿಯಲ್ಲಿ ಕರ್ನಾಟಕದ ಮೊದಲ ತೇಲುವ ಸೇತುವೆ ಇಂದು ಲೋಕಾರ್ಪಣೆಗೊಳ್ಳಲಿದೆ. ಈ ಸೇತುವೆಯ ಮೇಲೆ ಇರುವಾಗ, ಸಂದರ್ಶಕನು ಸಮುದ್ರದ ಅಲೆಗಳ ಚಲನೆಯನ್ನು ಅನುಭವಿಸಬಹುದು ಮತ್ತು ಅದರ ಮೇಲೆ ನಡಿಗೆಯನ್ನು ಆನಂದಿಸಬಹುದು.

ಇದರ ಅನುಭವ ಅಲೆಗಳ ಮೇಲೆ ಸವಾರಿ ಮಾಡಿದಂತೆ ಇರುತ್ತದೆ. ಈ ತೇಲುವ ಸೇತುವೆ ಒಂದು ರೀತಿಯಲ್ಲಿ ಸಾಹಸ ಕ್ರೀಡೆಯಾಗಿದ್ದು, ಗಟ್ಟಿ ಗುಂಡಿಗೆ ಇರುವ ಯಾರು ಬೇಕಾದರೂ ಇದರ ಮೇಲೆ ನಡೆಯಬಹುದು. ಇದರ ಕೆಳಗೆ ಬರುವ ಸಣ್ಣ ಮತ್ತು ದೊಡ್ಡ ಅಲೆಗಳು ಸೇತುವೆಯನ್ನು ಮೇಲಕ್ಕೆತ್ತಿ ಕೆಳಕ್ಕಿಳಿಸುತ್ತವೆ. ಅಲೆಯ ರಭಸದ ನವನವೀನ ಅನುಭ ಇದು ನೀಡಲಿದ್ದು ಜಿಲ್ಲೆಯ ಮಲ್ಪೆ ಸಮುದ್ರ ತೀರದಲ್ಲಿ ಇನ್ನಷ್ಟು ಪ್ರವಾಸಿಗರನ್ನು ಸೆಳೆಯುತ್ತಿದೆ.

ರಾಜ್ಯದ ಮೊದಲ ತೇಲುವ ಸೇತುವೆ ಶುಕ್ರವಾರ (ಮೇ 6) ಉಡುಪಿಯ ಮಲ್ಪೆ ಬೀಚ್‌ನಲ್ಲಿ ಲೋಕಾರ್ಪಣೆಗೊಳ್ಳಲಿದೆ. ಉಡುಪಿ ಶಾಸಕ ಕೆ.ರಘುಪತಿ ಭಟ್ ಮತ್ತು ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಅವರ ಸಮ್ಮುಖದಲ್ಲಿ ಸಂಜೆ 5ಗಂಟೆಗೆ ಸೇತುವೆ ಉದ್ಘಾಟನೆಗೊಳ್ಳಲಿದೆ ಎಂದು ಮಲ್ಪೆ ಬೀಚ್‌ನ ಗುತ್ತಿಗೆದಾರ ಸುದೇಶ್ ಶೆಟ್ಟಿ ತಿಳಿಸಿದ್ದಾರೆ.

Karnataka’s first floating bridge in Udupi to be inaugurated today

ಉಡುಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿಸಲು ಸೇತುವೆ ಹೆಚ್ಚುವರಿ ಆಕರ್ಷಣೆಯಾಗಲಿದೆ. ಸ್ಥಳೀಯ ಮೂವರು ಉದ್ಯಮಿಗಳು ಸೇರಿ 80 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಈ ಸೇತುವೆ 100 ಮೀ. ಉದ್ದವಿದೆ. 3.5 ಮೀಟರ್ ಅಗಲ ವಿಸ್ತೀರ್ಣವನ್ನು ಹೊಂದಿದೆ.

Karnataka’s first floating bridge in Udupi to be inaugurated today

ಈ ತೇಲುವ ಸೇತುವೆ ಮೇಲೆ ಹೋಗಲು ಪ್ರತಿ ವ್ಯಕ್ತಿ 100 ಪಾವತಿಸಬೇಕು ಮತ್ತು ಲೈಫ್ ಜಾಕೆಟ್ ಧರಿಸಿ 15 ನಿಮಿಷಗಳ ಕಾಲ ಸೇತುವೆಯ ಮೇಲೆ ನಡೆಯಬಹುದು. ಪ್ರವಾಸಿಗರ ಸುರಕ್ಷತೆಗಾಗಿ ಸೇತುವೆಯ ಮೇಲೆ 10 ಲೈಫ್ ಗಾರ್ಡ್‌ಗಳು ಮತ್ತು 30 ಲೈಫ್‌ಬಾಯ್ ರಿಂಗ್‌ಗಳು ಇರುತ್ತವೆ. ಸೇತುವೆಯ ಮೇಲೆ ಇರುವಾಗ ಸಮುದ್ರದ ಅಲೆಗಳ ಚಲನೆಯನ್ನು ಅನುಭವಿಸಬಹುದು ಮತ್ತು ಅವನ ನಡಿಗೆಯನ್ನು ಆನಂದಿಸಬಹುದು. ಅಲೆಗಳ ಮೇಲೆ ಸವಾರಿ ಮಾಡಿದಂತೆ ಅನುಭವವಾಗುತ್ತದೆ.

Recommended Video

ಏಟು-ಎದುರೇಟು: ಸಿದ್ದರಾಮಯ್ಯನವರ ರಾಜಕೀಯ ಭವಿಷ್ಯ ನುಡಿದ ಬಿಜೆಪಿ | Oneindia Kannada

English summary
The State’s first floating bridge will be inaugurated on Malpe Beach in Udupi on Friday. bridge will be inaugurated in the presence of Udupi MLA K. Raghupati Bhat and Deputy Commissioner M. Kurma Rao.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X