ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಯಿಂದ ಉತ್ತರ ಪ್ರದೇಶಕ್ಕೆ ವಿಶೇಷ ರೈಲಿಗಾಗಿ ಪತ್ರ

|
Google Oneindia Kannada News

ಉಡುಪಿ, ಮೇ 28 : ಕರ್ನಾಟಕದ ಉಡುಪಿಯಿಂದ ಉತ್ತರ ಪ್ರದೇಶಕ್ಕೆ ವಿಶೇಷ ರೈಲನ್ನು ಓಡಿಸಬೇಕು ಎಂದು ಕರ್ನಾಟಕ ಸರ್ಕಾರ ಕೊಂಕಣ ರೈಲ್ವೆಗೆ ಪತ್ರವನ್ನು ಬರೆದಿದೆ. ಲಾಕ್ ಡೌನ್ ಪರಿಣಾಮ ವಿವಿಧ ಜಿಲ್ಲೆಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು ಈ ರೈಲಿನ ಮೂಲಕ ತವರು ರಾಜ್ಯಕ್ಕೆ ವಾಪಸ್ ಆಗಲಿದ್ದಾರೆ.

ಕಂದಾಯ ಇಲಾಖೆಯ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್ ಗುರುವಾರ ಕೊಂಕಣ ರೈಲ್ವೆಗೆ ಈ ಕುರಿತು ಪತ್ರ ಬರೆದಿದ್ದಾರೆ. ಮೇ 30ರಂದು ಉಡುಪಿಯಿಂದ ಉತ್ತರ ಪ್ರದೇಶದ ಗೋರಖ್‌ಪುರಕ್ಕೆ ರೈಲು ಓಡಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

3 ಸಾವಿರ ಶ್ರಮಿಕ್ ರೈಲು ಸಂಚಾರ; ತವರಿಗೆ ಸೇರಿದ್ದು 40 ಲಕ್ಷ ಜನರು 3 ಸಾವಿರ ಶ್ರಮಿಕ್ ರೈಲು ಸಂಚಾರ; ತವರಿಗೆ ಸೇರಿದ್ದು 40 ಲಕ್ಷ ಜನರು

ಈ ಪತ್ರದ ಪ್ರತಿಯನ್ನು ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೂ ಕಳಿಸಲಾಗಿದೆ. ತಮ್ಮ-ತಮ್ಮ ಜಿಲ್ಲೆಯಲ್ಲಿ ವಲಸೆ ಕಾರ್ಮಿಕರು ಇದ್ದರೆ ಅವರು ರೈಲಿನಲ್ಲಿ ಪ್ರಯಾಣ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚಿಸಲಾಗಿದೆ.

ವಿಡಿಯೋ: ರೈಲು ನಿಲ್ದಾಣದ ಆಹಾರದ ವಾಹನವನ್ನೇ ದೋಚಿದ ಕಾರ್ಮಿಕರುವಿಡಿಯೋ: ರೈಲು ನಿಲ್ದಾಣದ ಆಹಾರದ ವಾಹನವನ್ನೇ ದೋಚಿದ ಕಾರ್ಮಿಕರು

Karnataka Govt Seeks Special Train From Udupi To Uttar Pradesh

ಕರ್ನಾಟಕ ಸರ್ಕಾರ ಬೆಂಗಳೂರು ನಗರದಿಂದ ವಿವಿಧ ರಾಜ್ಯಗಳಿಗೆ ಈಗಾಗಲೇ ರೈಲುಗಳನ್ನು ಓಡಿಸಿದೆ. ಈಗ ಮೇ 30ರದು ಉಡುಪಿಯಿಂದ ಲಕ್ನೋ ಮೂಲಕ ಗೋರಖ್‌ಪುರಕ್ಕೆ ವಿಶೇಷ ರೈಲು ಓಡಿಸಬೇಕು ಎಂದು ಕೊಂಕಣ ರೈಲ್ವೆಗೆ ಮನವಿ ಮಾಡಲಾಗಿದೆ.

ರೈಲು ಸಂಚಾರ; ಟಿಕೆಟ್‌ ಬುಕ್ ಮಾಡಲು ಕೌಂಟರ್ ಆರಂಭ ರೈಲು ಸಂಚಾರ; ಟಿಕೆಟ್‌ ಬುಕ್ ಮಾಡಲು ಕೌಂಟರ್ ಆರಂಭ

ರಾಜ್ಯ ಸರ್ಕಾರ ರೈಲು ಓಡಿಸಲು ತಗಲುವ ವೆಚ್ಚವನ್ನು ಭರಿಸಲು ಸಿದ್ಧವಿದೆ ಎಂದು ಪತ್ರದಲ್ಲಿ ವಿವರಣೆ ನೀಡಲಾಗಿದೆ. ರೈಲು ಓಡಿಸುವ ಬಗ್ಗೆ ಕೊಂಕಣ ರೈಲ್ವೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

ಲಾಕ್ ಡೌನ್ ಪರಿಣಾಮ ವಿವಿಧ ರಾಜ್ಯದಲ್ಲಿ ಸಿಲುಕಿದ ವಲಸೆ ಕಾರ್ಮಿಕರು ತವರು ರಾಜ್ಯಕ್ಕೆ ವಾಪಸ್ ಆಗಲು ಭಾರತೀಯ ರೈಲ್ವೆ ಶ್ರಮಿಕ್ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಇದಕ್ಕೆ ತಗಲುವ ಶೇ 85ಷ್ಟು ಖರ್ಚನ್ನು ಕೇಂದ್ರ ಸರ್ಕಾರ ಶೇ 15ರಷ್ಟು ಖರ್ಚನ್ನು ರಾಜ್ಯ ಸರ್ಕಾರ ಭರಿಸಲಿದೆ.

English summary
Karnataka revenue department principal secretary Manjunath Prasad has written a letter to Konkan railway and requested for run special train to Uttar Pradesh from Udupi on May 30, 2020 for migrant workers movement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X