ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರಗಳು; ಕೊಲ್ಲೂರು ದೇವಾಲಯಕ್ಕೆ ರಾಜ್ಯಪಾಲರ ಭೇಟಿ

|
Google Oneindia Kannada News

ಉಡುಪಿ, ಡಿಸೆಂಬರ್ 03; ಕರಾವಳಿ ಜಿಲ್ಲೆಗಳ ಪ್ರವಾಸದಲ್ಲಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಶುಕ್ರವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿದರು. ದೇವಾಲಯದ ವತಿಯಿಂದ ರಾಜ್ಯಪಾಲರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು.

ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ರಾಜ್ಯಪಾಲರು ತುಪ್ಪದ ದೀಪದಿಂದ ಆರತಿ ಬೆಳಗಿದರು. ಬ್ರಹ್ಮಾರ್ಪಣ ನೆರವೇರಿಸಿದರು ಹಾಗೂ ಅರ್ಚನೆ ಮಾಡಿಸಿದರು. ದೇವಾಲಯದ ಆವರಣದಲ್ಲಿ ವೀರಭದ್ರಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿ, ದೇವಾಲಯಕ್ಕೆ ಪ್ರದಕ್ಷಿಣೆ ಮಾಡಿ ದೇವರ ಚಿನ್ನದ ರಥ ವೀಕ್ಷಿಸಿದರು.

 ಕನ್ನಡ ಭಾಷೆ ಕಲಿಕೆ ಹಾದಿಯಲ್ಲಿ ಹೊರಟ ರಾಜ್ಯಪಾಲ ಥಾವರ್‌ಚಂದ್ ಕನ್ನಡ ಭಾಷೆ ಕಲಿಕೆ ಹಾದಿಯಲ್ಲಿ ಹೊರಟ ರಾಜ್ಯಪಾಲ ಥಾವರ್‌ಚಂದ್

ರಾಜ್ಯಪಾಲರ ಜೊತೆ ಬೈಂದೂರು ಶಾಸಕ ಸುಕುಮಾರ ಶೆಟ್ಟಿ, ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಶಿವಮೊಗ್ಗದಲ್ಲಿ ರಾಜ್ಯಪಾಲರು; ಜೋಗ ಜಲಪಾತಕ್ಕೆ ಭೇಟಿ ಶಿವಮೊಗ್ಗದಲ್ಲಿ ರಾಜ್ಯಪಾಲರು; ಜೋಗ ಜಲಪಾತಕ್ಕೆ ಭೇಟಿ

ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ಗುರುವಾರ ಸರ್ವಧರ್ಮ ಸಮ್ಮೇಳನದ ಉದ್ಘಾಟನೆಗೆ ರಾಜ್ಯಪಾಲರು ಆಗಮಿಸಿದ್ದರು. ಧರ್ಮಸ್ಥಳದಲ್ಲಿ ಚಪ್ಪಲಿ ಧರಿಸದೇ ಬರಿಗಾಲಿನಲ್ಲಿಯೇ ನಡೆದು ಗಮನ ಸೆಳೆದಿದ್ದರು.

ಧರ್ಮಸ್ಥಳ; ಬರಿಗಾಲಿನಲ್ಲಿ ನಡೆದ ರಾಜ್ಯಪಾಲ ಥಾವರ್ ಚಂದ್ ಧರ್ಮಸ್ಥಳ; ಬರಿಗಾಲಿನಲ್ಲಿ ನಡೆದ ರಾಜ್ಯಪಾಲ ಥಾವರ್ ಚಂದ್

ಉಡುಪಿ ಮಠಕ್ಕೆ ರಾಜ್ಯಪಾಲರ ಭೇಟಿ

ಉಡುಪಿ ಮಠಕ್ಕೆ ರಾಜ್ಯಪಾಲರ ಭೇಟಿ

ಶುಕ್ರವಾರ ಮುಂಜಾನೆ ರಾಜ್ಯಪಾಲರು ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದರು. ಅದಮಾರು ಪರ್ಯಾಯ ಮಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ರಾಜ್ಯಪಾಲರನ್ನು ಗೌರವಿಸಿದರು. ಪರ್ಯಾಯ ಮಂಗಲೋತ್ಸವದ ಆಮಂತ್ರಣ ಪತ್ರಿಕೆ ನೀಡಿದರು. ಈ ಸಂದರ್ಭದಲ್ಲಿ ಶಾಸಕರಾದ ರಘುಪತಿ ಭಟ್, ಪರ್ಯಾಯ ಮಠದ ವ್ಯವಸ್ಥಾಪಕರಾದ ಗೋವಿಂದರಾಜ್, ಶ್ರೀ ಕೃಷ್ಣಾಸೇವಾ ಬಳಗದ ಪ್ರದೀಪ್ ರಾವ್ ಮೊದಲಾದವರು ಉಪಸ್ಥಿತರಿದ್ದರು.

ಸತ್ಯದೇವತೆಯ ದರ್ಶನ ಮಾಡಿದ್ದರು

ಸತ್ಯದೇವತೆಯ ದರ್ಶನ ಮಾಡಿದ್ದರು

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ದಕ್ಷಿಣ ಕನ್ನಡ ಜಿಲ್ಲೆಯ ಕಾರಣಿಕ ಶಕ್ತಿಯ ದರ್ಶನ ಮಾಡಿದ್ದರು. ಧರ್ಮಸ್ಥಳದಿಂದ ಉಡುಪಿಗೆ ಪ್ರಯಾಣಿಸುವ ವೇಳೆ ಅವರು ಅಳದಂಗಡಿಯ ಸತ್ಯದೇವತೆಯ ದರ್ಶನ ಮಾಡಿದ್ದು, ಕಾರಣಿಕ ಶಕ್ತಿಯ ದರ್ಶನ ಮಾಡಿದ ಗಣ್ಯರ ಪಾಲಿಗೆ ಸೇರಿದ್ದರು. ಧರ್ಮಸ್ಥಳದಲ್ಲಿ ಸರ್ವಧರ್ಮ ಸಮ್ಮೇಳನವನ್ನು ಉದ್ಘಾಟಿಸಿದ ಬಳಿಕ ರಾಜ್ಯಪಾಲರು ಬಳಿಕ ಉಡುಪಿಗೆ ತೆರಳಿದ್ದರು. ಅಳದಂಗಡಿ ಸತ್ಯದೇವತೆ ಕಲ್ಲುರ್ಟಿ ದೈವಸ್ಥಾನಕ್ಕೆ ಭೇಟಿ ನೀಡಿ, ದೈವದ ಕೋಲ ಸೇವೆಯಲ್ಲಿ ಭಾಗಿಯಾಗಿ ಪ್ರಸಾದ ಸ್ವೀಕರಿಸಿದ್ದರು.

ಹಲವು ಗಣ್ಯರ ಆಗಮನ

ಹಲವು ಗಣ್ಯರ ಆಗಮನ

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನಿಂದ 13 ಕಿ. ಮೀ. ದೂರದಲ್ಲಿ ಅಳದಂಗಡಿ ಸತ್ಯದೇವತೆ ಕಲ್ಲುರ್ಟಿ ದೈವಸ್ಥಾನವಿದೆ. ಕಾರಣಿಕ ಶಕ್ತಿಯಿಂದೇ ಪ್ರಸಿದ್ದ ಪಡೆದ ಈ ದೈವ ಕನ್ನಡ ಹಲವು ಖ್ಯಾತನಾಮರ ಇಷ್ಟಾರ್ಥ ಸಿದ್ಧಿ ಮಾಡಿದೆ. ನಟ ದರ್ಶನ್, ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೇರಿದಂತೆ ಹಲವು ಖ್ಯಾತನಾಮರೂ ಈ ಹಿಂದೆ ಕಷ್ಟ ಬಂದಾಗ ದೈವಕ್ಕೆ ಕೋಲ ಸೇವೆಯನ್ನು ಒಪ್ಪಿಸಿ ಹರಕೆ ತೀರಿಸಿದ್ದರು.

Recommended Video

Mirage 2000 Fighter Jet : ಇನ್ನೂ ಏನ್ ಏನ್ ಕಳ್ಳತನ ಮಾಡ್ತಾರೋ! | Oneindia Kannada
ಬರಿಗಾಲಲ್ಲಿ ನಡೆದ ರಾಜ್ಯಪಾಲರು

ಬರಿಗಾಲಲ್ಲಿ ನಡೆದ ರಾಜ್ಯಪಾಲರು

ಧರ್ಮಸ್ಥಳದಲ್ಲಿ ಗುರುವಾರ ಸರ್ವಧರ್ಮ ಸಮ್ಮೇಳನದ ಉದ್ಘಾಟನೆಗೂ ಮುನ್ನ ದೇವಳದಿಂದ ಸಮ್ಮೇಳನ ನಡೆಯುವ ಅಮೃತವರ್ಷಿಣಿ ಸಭಾಭವನದವರೆಗೆ ಅತಿಥಿಗಳನ್ನು ಮೆರವಣಿಗೆಯಲ್ಲಿ ಕರೆತರೋದು ಕ್ಷೇತ್ರದ ವಾಡಿಕೆ. ಆದರೆ ಭಧ್ರತೆ ಕಾರಣಕ್ಕೆ ರಾಜ್ಯಪಾಲರನ್ನು ಕಾರಿನಲ್ಲಿ ಸಭಾ ಭವನಕ್ಕೆ ತೆರಳಲು ವಿನಂತಿಸಿದರೂ ಅದಕ್ಕೊಪ್ಪದ ರಾಜ್ಯಪಾಲರು ನಡೆದುಕೊಂಡೇ ಮೆರವಣಿಗೆಯಲ್ಲಿ ಸಾಗಿದ್ದರು. ಈ ವೇಳೆ ಚಪ್ಪಲಿ ಧರಿಸಲೂ ನಿರಾಕರಿಸಿದ್ದರು.

English summary
Karnataka governor Thawarchand Gehlot visited Kolluru Sri Mookambika temple, Udupi on December 3.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X