ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ; ಬಿ. ಆರ್. ಶೆಟ್ಟಿ ಆಸ್ಪತ್ರೆ ಸರ್ಕಾರದ ಸುರ್ಪದಿಗೆ

|
Google Oneindia Kannada News

ಉಡುಪಿ, ಆಗಸ್ಟ್ 11; ಕರ್ನಾಟಕ ಸರ್ಕಾರ ಉಡುಪಿಯ ಬಿ. ಆರ್‌. ಎಸ್ ಆಸ್ಪತ್ರೆಯನ್ನು ತನ್ನ ಸುರ್ಪದಿಗೆ ತೆಗೆದುಕೊಳ್ಳಲಿದೆ. ಕಳೆದ 6 ತಿಂಗಳಿನಿಂದ ವೈದ್ಯರು ಮತ್ತು ಸಿಬ್ಬಂದಿ ಆಸ್ಪತ್ರೆ ನಿರ್ವಹಣೆ ಬಗ್ಗೆ ಆರೋಪಗಳನ್ನು ಮಾಡುತ್ತಿದ್ದರು. ವೇತನ ಸಹ ಸರಿಯಾಗಿ ಆಗುತ್ತಿರಲಿಲ್ಲ.

ಬೆಂಗಳೂರಿನಲ್ಲಿ ಬುಧವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಆಸ್ಪತ್ರೆಯನ್ನು ಸುರ್ಪದಿಗೆ ತೆಗೆದುಕೊಳ್ಳುವ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಸುಧಾಕರ್ ಹೇಳಿಕೆ ನೀಡಿದ್ದಾರೆ.

ಆರ್ಥಿಕ ಪತನ ನಿಜ, ಆದರೆ ನಾನೆಲ್ಲಿಗೂ ಓಡಿ ಹೋಗಿಲ್ಲ, ಹೋಗೋದು ಇಲ್ಲ: ಉದ್ಯಮಿ ಬಿ.ಆರ್ ಶೆಟ್ಟಿ ಆರ್ಥಿಕ ಪತನ ನಿಜ, ಆದರೆ ನಾನೆಲ್ಲಿಗೂ ಓಡಿ ಹೋಗಿಲ್ಲ, ಹೋಗೋದು ಇಲ್ಲ: ಉದ್ಯಮಿ ಬಿ.ಆರ್ ಶೆಟ್ಟಿ

ಸಚಿವರು ಮಾತನಾಡಿ, "ಆಸ್ಪತ್ರೆಯನ್ನು ಸರ್ಕಾರವೇ ಮುನ್ನಡೆಸುತ್ತದೆ. ಕೆಲವು ಪತ್ರ ವ್ಯವಹಾರಗಳು ನಡೆದ ಮೇಲೆ ಎಲ್ಲಾ ಖರ್ಚು, ವೆಚ್ಚವನ್ನು ಸರ್ಕಾರವೇ ಭರಿಸಲಿದೆ" ಎಂದು ಹೇಳಿದ್ದಾರೆ.

Karnataka Government To Under Take Udupi BRS Hospital

ಇದರಿಂದಾಗಿ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಉಚಿತ ಆಸ್ಪತ್ರೆಯಲ್ಲಿ ಹಲವು ತಿಂಗಳಿನಿಂದ ಉಂಟಾಗಿದ್ದ ಗೊಂದಲಕ್ಕೆ ತೆರೆ ಬೀಳಲಿದೆ. ಆಸ್ಪತ್ರೆ ನಿರ್ವಹಣೆಯೂ ಸರಿಯಾಗಿ ನಡೆಯಲಿದೆ ಎಂಬ ನಿರೀಕ್ಷೆ ಇದೆ.

ಕೊರೊನಾ ಚಿಕಿತ್ಸೆಗೆ 15 ಲಕ್ಷ ರೂ ಶುಲ್ಕ: ಪ್ರತಿಷ್ಠಿತ ಆಸ್ಪತ್ರೆ ವಿರುದ್ಧ ಎಫ್ಐಆರ್ಕೊರೊನಾ ಚಿಕಿತ್ಸೆಗೆ 15 ಲಕ್ಷ ರೂ ಶುಲ್ಕ: ಪ್ರತಿಷ್ಠಿತ ಆಸ್ಪತ್ರೆ ವಿರುದ್ಧ ಎಫ್ಐಆರ್

ಉಚಿತ ಆಸ್ಪತ್ರೆಯಲ್ಲಿ ಕೆಲವು ತಿಂಗಳುಗಳಿಂದ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂಬ ಆರೋಪವಿದೆ. ವೈದ್ಯರಿಗೆ ಮತ್ತು ಸಿಬ್ಬಂದಿಗೆ ಸರಿಯಾಗಿ ವೇತನ ಪಾವತಿಯಾಗಿಲ್ಲ ಎಂಬ ದೂರು ಸಹ ಇದೆ.

ವೈದ್ಯರು, ಸಿಬ್ಬಂದಿಗಳು ಈ ಕುರಿತು ಹಲವಾರು ಬಾರಿ ಆಕ್ರೋಶ ಹೊರಹಾಕಿದ್ದರು. ವೇತನ ನೀಡದಿದ್ದರೆ ಪ್ರತಿಭಟನೆಯನ್ನು ಮಾಡುವುದಾಗಿಯೂ ಎಚ್ಚರಿಕೆಯನ್ನು ಕೊಟ್ಟಿದ್ದರು. ಇದರಿಂದಾಗಿ ರೋಗಿಗಳಿಗೆ ಸಂಕಷ್ಟ ಎದುರಾಗಿತ್ತು.

ರಾತ್ರೋರಾತ್ರಿ ಬಸ್ ತುಂಬಾ ಮಹಿಳೆಯರನ್ನು ಸಾಗಿಸಿದ ಮಂಗಳೂರಿನ ಆಸ್ಪತ್ರೆರಾತ್ರೋರಾತ್ರಿ ಬಸ್ ತುಂಬಾ ಮಹಿಳೆಯರನ್ನು ಸಾಗಿಸಿದ ಮಂಗಳೂರಿನ ಆಸ್ಪತ್ರೆ

ಆಸ್ಪತ್ರೆ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಉಡುಪಿ ಬಿಜೆಪಿ ಶಾಸಕ ರಘುಪತಿ ಭಟ್ ಸರ್ಕಾರವನ್ನು ಆಗ್ರಹಿಸಿದ್ದರು. ಸಚಿವ ಡಾ. ಕೆ. ಸುಧಾಕರ್ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಶಾಸಕರ ಜೊತೆ ಈ ಕುರಿತು ಮಾಹಿತಿ ಪಡೆದಿದ್ದರು.

ದುಬೈನಲ್ಲಿ ಉದ್ಯಮಿಯಾಗಿದ್ದ ಉಡುಪಿ ಮೂಲದ ಬಿ. ಆರ್. ಶೆಟ್ಟಿ ತಂದೆ-ತಾಯಿಯ ಹೆಸರಿನಲ್ಲಿ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ನಿರ್ಮಿಸಿದ್ದರು. ಉಚಿತವಾಗಿ ಚಿಕಿತ್ಸೆಯನ್ನು ನೀಡುತ್ತಿದ್ದರು.

ಉದ್ಯಮದಲ್ಲಿ ನಷ್ಟ ಉಂಟಾದ ಬಳಿಕ ಬಿ. ಆರ್. ಶೆಟ್ಟಿ ಆಸ್ಪತ್ರೆಯನ್ನು ಸರ್ಕಾರವೇ ಮುನ್ನಡೆಸಬೇಕು ಎಂದು ಮನವಿಯನ್ನು ಮಾಡಿದ್ದರು. ಈಗ ಕೆಲವು ಪತ್ರ ವ್ಯವಹಾರಗಳು ಪೂರ್ಣಗೊಂಡ ಬಳಿಕ ಆಸ್ಪತ್ರೆಯನ್ನು ಸರ್ಕಾರದ ಸುರ್ಪದಿಗೆ ತೆಗೆದುಕೊಳ್ಳಲು ತೀರ್ಮಾನ ಕೈಗೊಳ್ಳಲಾಗಿದೆ.

ಕುಸಿದ ಬಿ. ಆರ್. ಶೆಟ್ಟಿ ಸಾಮ್ರಾಜ್ಯ; ಉಡುಪಿಯ ಬಾವಗುತ್ತು ರಘುರಾಮ ಶೆಟ್ಟಿ 1973ರಲ್ಲಿ ಅಬುಧಾಬಿಗೆ ತೆರಳಿದ್ದರು. ಮೊದಲು ಮೆಡಿಕಲ್ ರೆಪ್ರೆಸೆಂಟೆಟೀವ್ ಆಗಿದ್ದ ಅವರು ಬಳಿಕ ಕೋಟ್ಯಾಧಿಪತಿಗಳಾದರು. ಬಿಲೇನಿಯರ್‌ಗಳ ಪಟ್ಟಿಯಲ್ಲಿದ್ದ ಬಿ. ಆರ್. ಶೆಟ್ಟಿ ಉದ್ಯಮದಲ್ಲಿ ತೀವ್ರ ನಷ್ಟವನ್ನು ಅನುಭವಿಸಿದ್ದಾರೆ. ಸಾಮ್ರಾಜ್ಯವೇ ಕುಸಿದು ಬಿದ್ದು ಆರ್ಥಿಕ ನಷ್ಟಕ್ಕೆ ಸಿಲುಕಿದ್ದಾರೆ.

ಎನ್‌ಎಂಸಿ ಹೆಲ್ತ್ ಎನ್ನುವ ಬೃಹತ್ ಖಾಸಗಿ ಆರೋಗ್ಯ ಸಂಸ್ಥೆಯನ್ನು ಯುಎಇಯಲ್ಲಿ ಕಟ್ಟಿದ ಬಿ. ಆರ್. ಶೆಟ್ಟಿ ತಮ್ಮ ತವರು ನೆಲ ಉಡುಪಿಯಲ್ಲಿಯೂ ತಂದೆ-ತಾಯಿ ಹೆಸರಿನಲ್ಲಿ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಿದರು. ಉಚಿತವಾಗಿ ಚಿಕಿತ್ಸೆ ನೀಡಲು ಆರಂಭಿಸಿದರು.

ಆಸ್ಪತ್ರೆ, ಶಿಕ್ಷಣ, ಔಷಧ ಸೇರಿದಂತೆ ವಿವಿಧ ಉದ್ಯಮದಲ್ಲಿ ಹಣ ಹೂಡಿಕೆಯನ್ನು ಬಿ. ಆರ್. ಶೆಟ್ಟಿ ಮಾಡಿದ್ದರು. 2017ರಲ್ಲಿ ಮಹಾಭಾರತ ಆಧರಿಸಿದ ಕನ್ನಡ ಸಿನಿಮಾವನ್ನು ಸಹ ದೊಡ್ಡ ಬಜೆಟ್‌ನಲ್ಲಿ ನಿರ್ಮಾಣ ಮಾಡುತ್ತೇನೆ ಎಂದು ಘೋಷಣೆ ಮಾಡಿದ್ದರು.

ಬಿ. ಆರ್. ಶೆಟ್ಟಿ ಹೂಡಿಕೆ ಮಾಡಿದ ಸಂಸ್ಥೆಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಅಮೆರಿಕದ ಸಂಸ್ಥೆ ಮುಡ್ಡಿ ವಾಟರ್ಸ್ ಆರೋಪ ಮಾಡಿತ್ತು. 2019ರಲ್ಲಿ ಎಂಎನ್‌ಸಿ ಹೆಲ್ತ್‌ನ ಷೇರುಗಳಲ್ಲಿ ಭಾರೀ ಕುಸಿತ ಉಂಟಾಗಿತ್ತು. ಯುಎಇಯ ಕೇಂದ್ರಿಯ ಬ್ಯಾಂಕ್ ಬಿ. ಆರ್. ಶೆಟ್ಟಿ ಮತ್ತು ಅವರ ಕುಟುಂಬ ಸದಸ್ಯರ ಒಡೆತನದ ಬ್ಯಾಂಕ್‌ಗಳ ಎಲ್ಲಾ ಖಾತೆಯನ್ನು ತಡೆಹಿಡಿದಿತ್ತು.

Recommended Video

Virat Kohli ಅದೃಷ್ಟ ನೋಡಿ Rootಗೆ ನಗು ಬಂತು | Oneindia Kannada

English summary
Karnataka government to under take Koosamma Shambhu Shetty Memorial Haji Abdullah Mother and Child hospital Udupi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X