ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕ ಬಜೆಟ್ 2021: ಉಡುಪಿ ಜಿಲ್ಲೆಯ ಜನರ ನಿರೀಕ್ಷೆಗಳು

By ರಹೀಂ ಉಜಿರೆ
|
Google Oneindia Kannada News

ಉಡುಪಿ, ಮಾರ್ಚ್ 2: ಮಾರ್ಚ್ 8ರಂದು ಕರ್ನಾಟಕ ರಾಜ್ಯ ಬಜೆಟ್‌ನ್ನು ಸಿಎಂ ಬಿ.ಎಸ್ ಯಡಿಯೂರಪ್ಪ ಮಂಡಿಸಲಿದ್ದಾರೆ. ಕಳೆದ ವರ್ಷ ಕೊರೊನಾ ಮಹಾಮಾರಿಯಿಂದಾಗಿ ಸರಕಾರ ಆರ್ಥಿಕ ಸಂಕಷ್ಟದ ಕಾರಣದಿಂದಾಗಿ ಅಳೆದು, ತೂಗಿ ಬಜೆಟ್ ಮಂಡಿಸಿತ್ತು. ಹೀಗಾಗಿ, ಈ ವರ್ಷದ ರಾಜ್ಯ ಬಜೆಟ್ ನಲ್ಲಿ ಕರಾವಳಿ ಜನ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಉಡುಪಿ ಜಿಲ್ಲೆ ಮಟ್ಟಿಗೆ ಹೇಳುವುದಾದರೆ, ಇಲ್ಲಿ ಹೆಚ್ಚಿನ ಜನ ಮೀನುಗಾರಿಕೆ ಮತ್ತು ಅದರ ಉಪಕಸುಬನ್ನು ನಂಬಿಕೊಂಡಿದ್ದಾರೆ. ಹೀಗಾಗಿ ಬಜೆಟ್ ಬಂತೆಂದರೆ ಮೀನುಗಾರರು ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳುವುದು ಸಹಜ.

ಕರ್ನಾಟಕ ಬಜೆಟ್ 2021: ಪ್ರವಾಸಿ ಜಿಲ್ಲೆ ಕೊಡಗು ಜನತೆಯ ನಿರೀಕ್ಷೆಗಳೇನು?ಕರ್ನಾಟಕ ಬಜೆಟ್ 2021: ಪ್ರವಾಸಿ ಜಿಲ್ಲೆ ಕೊಡಗು ಜನತೆಯ ನಿರೀಕ್ಷೆಗಳೇನು?

ಕಳೆದ ಈ ಹಿಂದಿನ ಬಜೆಟ್‌ನಲ್ಲಿ ಕುಳಾಯಿ ಹೊಸ ಮೀನುಗಾರಿಕಾ ಬಂದರನ್ನು ಸಾಗರಮಾಲಾ ಯೋಜನೆಯಡಿ ರಾಜ್ಯ ಸಹಭಾಗಿತ್ವದಲ್ಲಿ ಅಭಿವೃದ್ಧಿಗೆ 12.50 ಕೋಟಿ ರೂ. ಘೋಷಣೆ ಮಾಡಿತ್ತು. ಹೆಜಮಾಡಿ ಬಂದರು ಅಭಿವೃದ್ಧಿಗೆ 181 ಕೋಟಿ ರೂ. ಮೀಸಲಿಟ್ಟಿತ್ತು. ಇತ್ತೀಚೆಗೆ ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸಿ, ಹೆಜಮಾಡಿ ಬಂದರಿಗೆ ಶಿಲಾನ್ಯಾಸ ಮಾಡಿ ಹೋಗಿದ್ದಾರೆ.

ಕರ್ನಾಟಕ ಬಜೆಟ್ 2021: ಪ್ರವಾಸಿ ಜಿಲ್ಲೆ ಕೊಡಗು ಜನತೆಯ ನಿರೀಕ್ಷೆಗಳೇನು?ಕರ್ನಾಟಕ ಬಜೆಟ್ 2021: ಪ್ರವಾಸಿ ಜಿಲ್ಲೆ ಕೊಡಗು ಜನತೆಯ ನಿರೀಕ್ಷೆಗಳೇನು?

ಮರವಂತೆ ಬಂದರು 2ನೇ ಹಂತಕ್ಕೆ 85 ಕೋಟಿ ರೂ.

ಮರವಂತೆ ಬಂದರು 2ನೇ ಹಂತಕ್ಕೆ 85 ಕೋಟಿ ರೂ.

ಹಂಗಾರಕಟ್ಟೆ ಬಂದರು ಅಭಿವೃದ್ಧಿಗೆ 140 ಕೋಟಿ ರೂ., ಮರವಂತೆ ಹೊರ ಬಂದರು 2ನೇ ಹಂತಕ್ಕೆ 85 ಕೋಟಿ ರೂ., ಮೀನುಗಾರ ಮಹಿಳೆಯರ ಸಬಲೀಕರಣ ನಿಟ್ಟಿನಲ್ಲಿ 1,000 ದ್ವಿಚಕ್ರ ವಾಹನದಲ್ಲಿ ಮೀನು ಮಾರಾಟಕ್ಕೆ 5 ಕೋಟಿ ರೂ., ಮುಲ್ಕಿ ಹಿನ್ನೀರು ಮೀನು ಮರಿ ಉತ್ಪಾದನಾ ಕೇಂದ್ರಕ್ಕೆ 2 ಕೋಟಿ ರೂ., ಮತ್ಸ್ಯ ವಿಕಾಸ ಯೋಜನೆಗೆ 1.50 ಕೋಟಿ ರೂ. ಪ್ರಕಟಿಸಿತ್ತು. ಈ ಪೈಕಿ ಅನುದಾನದ ಕೊರತೆಯಿಂದ ಒಂದೆರಡು ಯೋಜನೆಗಳು ಅರ್ಧಂಬಂರ್ಧ ಆಗಿರುವುದು ಬಿಟ್ಟರೆ ಪೂರ್ತಿ ಈಡೇರಿಲ್ಲ.

ಉಡುಪಿ ಸೀರೆಗೆ ಪ್ರಿಯದರ್ಶಿನಿ ಬ್ರ್ಯಾಂಡ್ ಮಾರುಕಟ್ಟೆ

ಉಡುಪಿ ಸೀರೆಗೆ ಪ್ರಿಯದರ್ಶಿನಿ ಬ್ರ್ಯಾಂಡ್ ಮಾರುಕಟ್ಟೆ

ಇನ್ನು ವಿಶ್ವಕರ್ಮ ನಿಗಮಕ್ಕೆ 25 ಕೋಟಿ ರೂ., ಕುಂಬಾರ ಸಮುದಾಯ ಅಭಿವೃದ್ಧಿಗೆ 20 ಕೋಟಿ ರೂ., ಅಲೆವೂರು ಪ್ರಗತಿ ನಗರದಲ್ಲಿ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಕೇಂದ್ರಕ್ಕೆ 1 ಕೋಟಿ ರೂ., ಕಾರ್ಕಳದಲ್ಲಿ ನೂತನ ಜವಳಿ ಪಾರ್ಕ್, ಮನೆ ಮನೆಗೆ ಗಂಗೆ ಯೋಜನೆ, ಸ್ವರ್ಣಾ-ವಾರಾಹಿ ನೀರು 2022ರೊಳಗೆ ಪೂರೈಕೆ ಭರವಸೆ ನೀಡಿತ್ತು. ಕಳೆದ ಬಜೆಟ್ ನ ಈ ಘೋಷಣೆಗಳು ಈಡೇರಿಲ್ಲ.

ಇನ್ನು ಕೈಮಗ್ಗ ನೇಕಾರಿಕೆಯ ಉಡುಪಿ ಸೀರೆಗೆ ಪ್ರಿಯದರ್ಶಿನಿ ಬ್ರ್ಯಾಂಡ್ ಮಾರುಕಟ್ಟೆ ಸೌಲಭ್ಯ ಯೋಜನೆ. ಇದು ಸ್ವಲ್ಪ ಮಟ್ಟಿಗೆ ಈಡೇರಿದೆ. ಸಮಗ್ರ ಮೀನುಗಾರಿಕಾ ನೀತಿಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಸ್ತಾಪ ಇನ್ನೂ ಜಾರಿಯಾಗಿಲ್ಲ.

ಈ ಬಾರಿ ಮೀನುಗಾರರ ಪ್ರಮುಖ ನಿರೀಕ್ಷೆಗಳು

ಈ ಬಾರಿ ಮೀನುಗಾರರ ಪ್ರಮುಖ ನಿರೀಕ್ಷೆಗಳು

ಇನ್ನು ಬಸವಣ್ಣ‌ ಪ್ರತಿಮೆ, ಭೈರಪ್ಪ‌ ಹುಟ್ಟೂರ ಅಭಿವೃದ್ಧಿಗೆ ನಿಧಿ ನೀಡಿದಂತೆ ಪೇಜಾವರ ಹುಟ್ಟೂರ ಅಭಿವೃದ್ಧಿ, ಪ್ರತಿಮೆ, ಸ್ಮಾರಕ ಮ್ಯೂಸಿಯಂಗೆ ದುಡ್ಡು ಕೊಟ್ಟಿಲ್ಲ. ಬ್ರಹ್ಮಾವರ ಕೃಷಿ ಕಾಲೇಜು, ಸರಕಾರಿ ವೈದ್ಯಕೀಯ ಕಾಲೇಜು‌ ಭರವಸೆಯಾಗಿಯೇ ಉಳಿದಿದೆ. ನಾಡದೋಣಿ ಸೀಮೆಎಣ್ಣೆ ಪ್ರಮಾಣ ಏರಿಕೆಯಾಗಿಲ್ಲ. ಈ ಬಾರಿಯ ಬಜೆಟ್ ನಲ್ಲಿ ಮೀನುಗಾರಿಕೆಗೆ ಪ್ರತ್ಯೇಕ ಕೈಗಾರಿಕಾ ವಲಯ ಸ್ಥಾಪನೆ, ರಾಜ್ಯಗಳ ನಡುವೆ ಸಮುದ್ರ ಮೀನುಗಾರಿಕೆ ಗಡಿ ಸಹಿತ ನಾನಾ ಸಮಸ್ಯೆಗೆ ಸಮನ್ವಯ ಸಮಿತಿ ರಚನೆ, ದೋಣಿಗಳಿಗೆ ಸೀಮೆಎಣ್ಣೆ, ಡೀಸೆಲ್ ಕೋಟಾ ಹೆಚ್ಚಳ, ಮಾರಾಟ ತೆರಿಗೆ ವಿನಾಯಿತಿ ಈ ಬಾರಿ ಮೀನುಗಾರರ ಪ್ರಮುಖ ನಿರೀಕ್ಷೆಗಳಾಗಿವೆ.

Recommended Video

ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಫೋಟ ವಿಚಾರ-ಡಿಕೆಶಿ -ಸಿದ್ದು ಜೊತೆ ಮಧು ಯಕ್ಷಿ ಗೌಡ ಪ್ರತ್ಯೇಕ ಸಮಾಲೋಚನೆ | Oneindia Kannada
ಟೂರ್ ಆಪರೇಟರ್‌ಗಳಿಗೆ ಪ್ರೋತ್ಸಾಹ

ಟೂರ್ ಆಪರೇಟರ್‌ಗಳಿಗೆ ಪ್ರೋತ್ಸಾಹ

ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶವಿದೆ. ಬೀಚ್ ಟೂರಿಸಂ, ಬೋಟ್ ಹೌಸ್‍, ಧಾರ್ಮಿಕ ಪ್ರವಾಸೋದ್ಯಮ ಜತೆಗೆ ಹೆಲ್ತ್ ಟೂರಿಸಂ ಮತ್ತು ವೆಲ್‍ನೆಸ್ ಟೂರಿಸಂಗೂ ವಿಶೇಷ ಆದ್ಯತೆ ನೀಡಬೇಕು. ಯೋಗ, ಪ್ರಾಣಾಯಾಮ, ಸೈಕ್ಲಿಂಗ್, ಉತ್ತಮ ಆಹಾರ, ವಸತಿ ಸೌಕರ್ಯ ಪ್ಯಾಕೇಜ್ ಘೋಷಣೆ ಮಾಡಬೇಕು. ಸಾರ್ವಜನಿಕ, ಖಾಸಗಿ ಸಹಭಾಗಿತ್ವದ ಜತೆಗೆ ಟೂರ್ ಆಪರೇಟರ್‌ಗಳಿಗೆ ಪ್ರೋತ್ಸಾಹ ನೀಡಬೇಕು ಎಂಬುದು ಉಡುಪಿ ಜಿಲ್ಲೆಯ ಜನರ ನಿರೀಕ್ಷೆಯಾಗಿದೆ.


ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನಶ್ಚೇತನ ಪ್ರತಿ ವರ್ಷದ ನಿರೀಕ್ಷೆಗಳಲ್ಲೊಂದಗಿದ್ದು, ಈ ವರ್ಷವಾದರೂ ಆಗಬಹುದು ಎಂಬ ಆಶಾವಾದ ಜಿಲ್ಲೆಯ ಜನರದ್ದಾಗಿದೆ.

English summary
Most people in the Udupi district believe in fisheries and its sub-crops. Fishermen have high expectations on this time Karnataka budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X