ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಯು ಫಲಿತಾಂಶ: ವಿಜ್ಞಾನ ವಿಭಾಗದಲ್ಲಿ ಉಡುಪಿಯ ಅಭಿಜ್ಞಾ ರಾವ್ ರಾಜ್ಯಕ್ಕೆ ಪ್ರಥಮ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜುಲೈ 14: ಕೊರೊನಾ ವೈರಸ್ ಸೋಂಕಿನಿಂದ ವಿಳಂಬವಾಗಿದ್ದ ಬಹು ನಿರೀಕ್ಷಿತ ದ್ವಿತೀಯ ಪಿಯುಸಿ ಫಲಿತಾಂಶವು ಮಂಗಳವಾರ ಮಧ್ಯಾಹ್ನ ಪ್ರಕಟವಾಗಿದ್ದು, ವಿಜ್ಞಾನ ವಿಭಾಗದಲ್ಲಿ ಉಡುಪಿಯ ಅಭಿಜ್ಞಾ ರಾವ್ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾಳೆ.

Recommended Video

Swathi Radar ಎಂದರೇನು ? | Oneindia Kannada

ಉಡುಪಿಯ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿರುವ ಅಭಿಜ್ಞಾ ರಾವ್, ಒಟ್ಟು ೬೦೦ ಅಂಕಗಳಿಗೆ 596 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಟಾಪರ್ ಆಗಿದ್ದಾಳೆ.

ದ್ವಿತೀಯ ಪಿಯು ಫಲಿತಾಂಶ: ಸ್ಪಂದನಾ ಮೈಸೂರು ಜಿಲ್ಲೆಗೆ ಪ್ರಥಮದ್ವಿತೀಯ ಪಿಯು ಫಲಿತಾಂಶ: ಸ್ಪಂದನಾ ಮೈಸೂರು ಜಿಲ್ಲೆಗೆ ಪ್ರಥಮ

ಅಭಿಜ್ಞಾ ರಾವ್ ಅವರು ಭೌತಶಾಸ್ತ್ರ ವಿಷಯದಲ್ಲಿ 100 ಅಂಕ, ರಸಾಯನಶಾಸ್ತ್ರ ವಿಷಯದಲ್ಲಿ 100 ಅಂಕ, ಗಣಿತ ವಿಷಯದಲ್ಲಿ 100 ಅಂಕ, ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ 100 ಅಂಕ, ಭಾಷಾ ವಿಷಯಗಳಾದ ಇಂಗ್ಲೀಷ್ ವಿಷಯದಲ್ಲಿ 96 ಅಂಕ ಮತ್ತು ಸಂಸ್ಕೃತದಲ್ಲಿ 100 ಅಂಕ ಪಡೆದಿದ್ದಾಳೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಶಾ ಮತ್ತು ವಿಠಲ್ ರಾವ್ ದಂಪತಿ ಪುತ್ರಿ ಅಭಿಜ್ಞಾ ರಾವ್, ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನ ಗಳಿಸಿದ್ದು ತುಂಬಾ ಖುಷಿಯಾಗಿದೆ. ನನ್ನ ಸಾಧನೆಗೆ ಶಿಕ್ಷಕರು ಹಾಗೂ ಪೋಷಕರು ತುಂಬಾ ಸಹಕಾರ ನೀಡಿದ್ದಾರೆ. ಈ ಸಲ ಲಾಕ್ ಡೌನ್ ಇದ್ದ ಕಾರಣ ಓದಲು ತುಂಬ ಸಮಯ ಸಿಕ್ಕಿತು. ಹೀಗಾಗಿ ತುಂಬಾ ಸಮಯ ಓದಲು ಅನುಕೂಲವಾಯಿತು ಎಂದಳು.

Karnataka 2nd PUC Result 2020: Udupi girl Abhigna Rao Gets 1st Place In Science Section

ಮುಂದೆ ಇಂಜಿನಿಯರಿಂಗ್ ಓದಬೇಕು ಅಂದುಕೊಂಡಿದ್ದೇನೆ ಎಂದು ತಮ್ಮ ಮನದಾಸೆಯನ್ನು ವ್ಯಕ್ತಪಡಿಸಿದ್ದಾರೆ. ಮಗಳ ಫಲಿತಾಂಶ ಬರುತ್ತಲೇ ಹೆತ್ತವರು ತುಂಬಾ ಖುಷಿಗೊಂಡರು. ಮಗಳಿಗೆ ಸಿಹಿ ತಿನ್ನಿಸಿ ಸಂಭ್ರಮಪಟ್ಟರು.

ಜಿಲ್ಲಾವಾರು ಫಲಿತಾಂಶದಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದೆ ಈ ಎರಡು ಜಿಲ್ಲೆಗಳಲ್ಲಿ ಶೇ. 90.75 ರಷ್ಟು ಫಲಿತಾಂಶ ಬಂದಿದೆ. ವಿಜಯಪುರ ಜಿಲ್ಲೆ ಕೊನೆಯ ಸ್ಥಾನ ಪಡೆದುಕೊಂಡಿದೆ.

ದ್ವಿತೀಯ ಪಿಯುಸಿ ಫಲಿತಾಂಶ: ಉಡುಪಿ ಫಸ್ಟ್, ಉಳಿದ ಜಿಲ್ಲೆಗಳ ಕಥೆಯೇನು?ದ್ವಿತೀಯ ಪಿಯುಸಿ ಫಲಿತಾಂಶ: ಉಡುಪಿ ಫಸ್ಟ್, ಉಳಿದ ಜಿಲ್ಲೆಗಳ ಕಥೆಯೇನು?

ಕಲಾ ವಿಭಾಗದಲ್ಲಿ ಶೇಕಡಾ 41.27ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದರೆ, ವಿಜ್ಞಾನ ವಿಭಾಗದಲ್ಲಿ ಶೇಕಡಾ 76.02ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇಕಡಾ 65.53ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಪಿಯುಸಿ ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಿದೆ. ಜೊತೆಗೆ ವಿದ್ಯಾರ್ಥಿಗಳ ಮೊಬೈಲ್‌ಗೂ ಫಲಿತಾಂರ ಬರಲಿದೆ.

English summary
The much-anticipated secondary PUC result was announced on Tuesday afternoon, with Udupi's Abhigna Rao topper to the state in the Science category.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X