ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಸಂಖ್ಯಾತ ಕಂಬಳಪ್ರಿಯರನ್ನು ಅಗಲಿದ ಕರಾವಳಿಯ ರಾಕೇಟ್ ಮೋಡ್

|
Google Oneindia Kannada News

ಉಡುಪಿ, ನವೆಂಬರ್ 21: ರಾಕೇಟ್ ಮೋಡ್...ಈ ಹೆಸರನ್ನು ಕೇಳದ ಕಂಬಳ ಪ್ರಿಯರಿಲ್ಲ ಅನಿಸುತ್ತದೆ. ಕರಾವಳಿಯ ಕಂಬಳದಲ್ಲಿ ತನ್ನ ಮಿಂಚಿನ ಓಟದಿಂದ ವಿಜೃಂಭಿಸಿದ್ದ ರಾಕೇಟ್ ಮೋಡ್ ಇನ್ನು ನೆನಪು ಮಾತ್ರ . ಕಂಬಳ ಸ್ಪರ್ಧೆಯಲ್ಲಿ ಪದಕಗಳ ಮೇಲೆ ಪದಕ ಬಾಚಿ ಸಾಧನೆ ಮಾಡಿದ್ದ ರಾಕೆಟ್ ಮೋಡ್ ಖ್ಯಾತಿಯ ಕಂಬಳದ ಕೋಣ ಇನ್ನಿಲ್ಲ.

ಕಂಬಳದಲ್ಲಿ ಕಳೆದ ಸುಮಾರು 15 ವರ್ಷಗಳಿಂದ ಅನಭಿಷಿಕ್ತ ಓಟದ ದೊರೆಯಾಗಿ ಮೆರೆದ ರಾಕೇಟ್ ಮೋಡ್ ಓಟ ನಿಲ್ಲಿಸಿದ್ದಾನೆ. ವಯೋ ಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ರಾಕೇಟ್ ಮೋಡ್ ನಿನ್ನೆ (ನವೆಂಬರ್ 20) ಮೃತಪಟ್ಟಿದ್ದಾನೆ.

ಶಿರಸಿ ಶ್ರೀಮಾರಿಕಾಂಬಾ ದೇವಾಲಯದ ಕೋಣ ಇನ್ನಿಲ್ಲಶಿರಸಿ ಶ್ರೀಮಾರಿಕಾಂಬಾ ದೇವಾಲಯದ ಕೋಣ ಇನ್ನಿಲ್ಲ

ಮೃತ ಕೋಣದ ಅಂತ್ಯ ಸಂಸ್ಕಾರವನ್ನು ಶಾಸ್ತ್ರಬದ್ಧವಾಗಿ ನಿನ್ನೆ ನೆರವೇರಿಸಲಾಯಿತು. ಕರಾವಳಿಯ ಯಾವುದೇ ಭಾಗದಲ್ಲಿ ಕಂಬಳ ಕೋಣಗಳು ಮೃತಪಟ್ಟರೆ ಗೌರವಾದರಗಳಿಂದಲೇ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ. ಆದರೆ ರಾಕೆಟ್ ಮೋಡ್ ಖ್ಯಾತಿಯ ಈ ಕೋಣದ ಅಂತ್ಯಸಂಸ್ಕಾರಕ್ಕೆ ನೂರಾರು ಕಂಬಳಪ್ರಿಯರು ಆಗಮಿಸಿ ಕಂಬನಿ ಮಿಡಿದದ್ದು ವಿಶೇಷವಾಗಿತ್ತು.

ಪರ ಊರುಗಳ ಜನರಿಗೆ ಕಂಬಳ ಎಂಬುದು ಕೇವಲ ಕೋಣಗಳ ಓಟದ ಅಖಾಡ ಆಗಿರಬಹುದು. ಆದರೆ ಕರಾವಳಿಯ ಜನರಿಗೆ ಕಂಬಳ ಎನ್ನುವುದು ಮನುಷ್ಯ ಮತ್ತು ಕೋಣಗಳ ನಡುವಿನ ಸಂವಹನ. ಕಂಬಳ ಕೋಣಗಳನ್ನು ಅತ್ಯಂತ ಪ್ರೀತಿ ಮತ್ತು ಕಾಳಜಿಯಿಂದ ವರ್ಷಪೂರ್ತಿ ನೋಡಿಕೊಳ್ಳಲಾಗುತ್ತದೆ. ರೈತಾಪಿ ಜನ ಇದನ್ನು ಅತ್ಯಂತ ಶ್ರದ್ಧೆಯಿಂದ ಸಾಕುತ್ತಾರೆ.

ರಾಕೆಟ್ ಮೋಡ್ ಖ್ಯಾತಿಯ ಕೋಣವೂ ಇದಕ್ಕೆ ಹೊರತಲ್ಲ. ಮುಂದೆ ಓದಿ...

 ಬಹುಮಾನಗಳಿಗೆ ಲೆಕ್ಕವಿಲ್ಲ

ಬಹುಮಾನಗಳಿಗೆ ಲೆಕ್ಕವಿಲ್ಲ

ಕರಾವಳಿಯ ಕಂಬಳ ಕ್ಷೇತ್ರದಲ್ಲಿ ತನ್ನ ಓಟದಿಂದ ಹುಸೇನ್ ಬೋಲ್ಟ್ ನಷ್ಟು ಫೇಮಸ್ಸಾಗಿದ್ದ ಕೋಣ ಇದು. ಕೊಂಡೊಟ್ಟು ಮೋಡ, ರಾಕೆಟ್ ಮೋಡ್ ಎಂಬ ಹೆಸರಿನಿಂದಲೇ ಕಂಬಳ ಪ್ರಿಯರು ಇದನ್ನು ಗುರುತಿಸುತ್ತಿದ್ದರು. ಇದು ಬಾಚಿಕೊಂಡ ಬಹುಮಾನಗಳಿಗೂ ಲೆಕ್ಕವಿಲ್ಲ. ಕಂಬಳ ಕ್ಷೇತ್ರದಲ್ಲಿ ಕಿರಿಯ ಮತ್ತು ಹಿರಿಯ ವಿಭಾಗದಲ್ಲಿ ನೂರಾರು ಬಹುಮಾನಗಳನ್ನು ಗೆದ್ದ ಹೆಗ್ಗಳಿಕೆ ರಾಕೇಟ್ ಮೋಡ್ ಕೋಣನದ್ದಾಗಿತ್ತು.

 ಕಂಬಳ ಪ್ರಿಯರಿಗೆ ನಿರಾಸೆ ಮಾಡಿಲ್ಲ

ಕಂಬಳ ಪ್ರಿಯರಿಗೆ ನಿರಾಸೆ ಮಾಡಿಲ್ಲ

ರಾಕೆಟ್ ಮೋಡ್ ಗಂತ್ ನಲ್ಲಿ ತಲೆ ಎತ್ತಿ ನಿಂತನೆಂದರೆ ಆ ಗತ್ತು ಗೈರತ್ತು ಬೇರೆಯೇ. ನಿಶಾನೆ ಹಾರಿಸುತ್ತಿದ್ದಂತೆ ರಾಕೇಟ್ ಮೋಡ್ ಓಟ ಕಿತ್ತನೆಂದರೆ ಮಿಂಚಿನ ವೇಗದಲ್ಲಿ ಗುರಿ ತಲುಪಿ ಜಯಮಾಲೆ ಧರಿಸುತ್ತಿದ್ದ. ಕಂಬಳ ಪ್ರಿಯರು ಈ ಕೋಣದ ಹೆಸರಿನಲ್ಲಿ ಅಳುಕಿಲ್ಲದೆ ಬಾಜಿ ಕಟ್ಟುತ್ತಿದ್ದರು. ಯಾವತ್ತೂ ಈ ಕೋಣ ಕಂಬಳ ಪ್ರಿಯರಿಗೆ ನಿರಾಸೆ ಮಾಡಿದ್ದೇ ಇಲ್ಲ.

ನವೆಂಬರ್ ತಿಂಗಳಾಂತ್ಯಕ್ಕೆ ಕರಾವಳಿಯಲ್ಲಿ ಕಂಬಳ ಪರ್ವ ಆರಂಭ: ಭರದಿಂದ ಸಾಗಿದ ಸಿದ್ಧತೆನವೆಂಬರ್ ತಿಂಗಳಾಂತ್ಯಕ್ಕೆ ಕರಾವಳಿಯಲ್ಲಿ ಕಂಬಳ ಪರ್ವ ಆರಂಭ: ಭರದಿಂದ ಸಾಗಿದ ಸಿದ್ಧತೆ

 ಶಾಸ್ತ್ರಬದ್ಧವಾಗಿ ನೆರವೇರಿತು

ಶಾಸ್ತ್ರಬದ್ಧವಾಗಿ ನೆರವೇರಿತು

ಕಂಬಳ ಮನೆತನದ ಕೊಳಕೆ ಇರ್ವತ್ತೂರು ಭಾಸ್ಕರ ಕೋಟ್ಯಾನ್ ಮನೆಯಲ್ಲಿದ್ದ ಈ ಓಟದ ರಾಕೇಟ್ ಮೋಡ್ ಬಳಿಕ ಕೊಳಚ್ಚೂರು ಕೊಂಡೆಟ್ಟು ಸುಕುಮಾರ್ ಶೆಟ್ಟಿ ಅವರ ಮನೆಯಲ್ಲಿತ್ತು. ಈಗ ಹಲವು ಸಮಯದಿಂದ ನಂದಳಿಕೆ ಶ್ರೀಕಾಂತ್ ಭಟ್ ಆರೈಕೆಯಲ್ಲಿದ್ದ ಕೋಣ ನಿನ್ನೆ ಅಸೌಖ್ಯದಿಂದ ಮೃತಪಟ್ಟಿದೆ. ಮೃತ ಕೋಣದ ಅಂತ್ಯ ಸಂಸ್ಕಾರವನ್ನು ಶಾಸ್ತ್ರಬದ್ಧವಾಗಿ ಮಾಡಲಾಯಿತು. ಈ ವೇಳೆ ನೂರಾರು ಜನ ಕಂಬಳ ಪ್ರಿಯರು ರಾಕೇಟ್ ಮೋಡ್ ಗೆ ಕಂಬನಿ ಮಿಡಿದರು.

 ದುಡ್ಡಿಗಿಂತ ಕೋಣಗಳ ಆರೋಗ್ಯ ಮುಖ್ಯ

ದುಡ್ಡಿಗಿಂತ ಕೋಣಗಳ ಆರೋಗ್ಯ ಮುಖ್ಯ

ಕಂಬಳ ಕೋಣಗಳ ಮಾಲೀಕರಿಗೆ ದುಡ್ಡಿಗಿಂತ ಕೋಣಗಳ ಆರೋಗ್ಯ ಮುಖ್ಯ. ಹೀಗೆ ಸಿಬ್ಬಂದಿಗಳ ಮೂಲಕ ಕೋಣಗಳನ್ನು ಸಾಕಿ ಅವುಗಳನ್ನು ಕಂಬಳಗಳಿಗೆ ತಯಾರು ಮಾಡುವುದೂ ಕೂಡ ಒಂದು ಕಲೆ. ಹೀಗೆ ಅನೇಕ ಮಂದಿಯ ಆರೈಕೆಗೆ ಒಳಗಾಗಿದ್ದ ,ಉಡುಪಿ ,ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ಕಂಬಳ ಪ್ರಿಯರ ಮನೆಮಾತಾಗಿದ್ದ ಈ ಓಟದ ಸರದಾರ ಅಸಂಖ್ಯ ಕಂಬಳಪ್ರಿಯರನ್ನು ಅಗಲಿದ್ದಾನೆ.

ಕಂಬಳಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಕಾರಕಂಬಳಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಕಾರ

English summary
Very famous Kambala buffalo Roket mod died on November 21 in Karkala
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X