ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೋಕೆ...ಮಲ್ಪೆ ಬೀಚ್ ನಲ್ಲಿ ಮತ್ತೆ ಕಾಣಿಸಿಕೊಂಡಿವೆ ಜೆಲ್ಲಿ ಫಿಶ್ ಗಳು, ನೀರಿಗಿಳಿಯುವ ಮುನ್ನ ಯೋಚಿಸಿ

|
Google Oneindia Kannada News

Recommended Video

ಉಡುಪಿಯ ಮಲ್ಪೆ ಬೀಚ್ ನಲ್ಲಿ ನೀರಿಗೆ ಇಳಿಯುವ ಮುನ್ನ ಯೋಚಿಸಿ | Oneindia kannada

ಉಡುಪಿ, ಅಕ್ಟೋಬರ್. 23: ಕರಾವಳಿಯಲ್ಲಿ ಜೆಲ್ಲಿ ಫಿಶ್ ಗಳ ದಾಳಿ ಆರಂಭವಾಗಿದ್ದು, ಸಮುದ್ರದಲ್ಲಿ ನೀರಾಟಕ್ಕೆ ಇಳಿಯುವವರ ಮೇಲೆ ಜೆಲ್ಲಿ ಫಿಶ್ ದಾಳಿ ಮಾಡುತ್ತಿವೆ. ಸಮುದ್ರ ನೀರಿನಲ್ಲಿ ಸ್ನಾನ ಮಾಡುತ್ತಿದ್ದ ಆರು ಮಂದಿ ಪ್ರವಾಸಿಗರ ಮೇಲೆ ಜೆಲ್ಲಿ ಫಿಶ್ ದಾಳಿ ನಡೆಸಿದ ಘಟನೆ ಇದೀಗ ಉಡುಪಿಯಲ್ಲಿ ಬೆಳಕಿಗೆ ಬಂದಿದೆ.

ಮಲ್ಪೆ ಕಡಲ ಕಿನಾರೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ಜೆಲ್ಲಿ ಫಿಶ್ ದಾಳಿಗೆ ಒಳಗಾದವರಿಗೆ ಸ್ಥಳದಲ್ಲಿಯೇ ಚಿಕಿತ್ಸೆ ನೀಡಿ ಕಳುಹಿಸಿಕೊಡಲಾಗಿದೆ. ಸಮುದ್ರದಲ್ಲಿ ಜೆಲ್ಲಿ ಫಿಶ್ ಗಳು ಹೇರಳವಾಗಿ ಬಂದಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು ಕಡಲಿಗೆ ಇಳಿಯದಂತೆ ಎಚ್ಚರ ವಹಿಸಲಾಗುತ್ತಿದೆ.

ಎರ್ಮಾಳು ಕಡಲತೀರದಲ್ಲಿ ರಾಶಿ ರಾಶಿ ಮೀನು:ಕರಾವಳಿಗರಿಗೆ ಹಬ್ಬವೋ ಹಬ್ಬಎರ್ಮಾಳು ಕಡಲತೀರದಲ್ಲಿ ರಾಶಿ ರಾಶಿ ಮೀನು:ಕರಾವಳಿಗರಿಗೆ ಹಬ್ಬವೋ ಹಬ್ಬ

ಪ್ರತಿವರ್ಷ ಈ ಜೆಲ್ಲಿ ಫಿಶ್ ಹಾಗೂ ತೊರಕೆ ಮೀನುಗಳು, ಮರಿಗಳು ಕಿನಾರೆಗೆ ಬರುತ್ತವೆ. ಆದರೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಬಂದಿವೆ. ಇವುಗಳು ಕಡಲ ಕಿನಾರೆಗೆ ಬಂದಾಗ ಈ ರೀತಿಯ ದಾಳಿಗಳನ್ನು ನಡೆಸುತ್ತವೆ. ಅವುಗಳು ಕಿನಾರೆ ಬಳಿ ಬಂದರೆ ಕೆಲವೊಮ್ಮೆ ಎರಡು ಅಥವಾ ಮೂರು ದಿನಗಳವರೆಗೆ ಇರುತ್ತವೆ.

Jellyfish problem has returned in Malpe beach

ಜೆಲ್ಲಿ ಫಿಶ್ ಅಪಾಯಕಾರಿ ಅಲ್ಲ. ಆದರೆ ಅದರ ಸ್ಪರ್ಶದಿಂದ ವಿಪರೀತ ಉರಿ ಹಾಗೂ ಅದು ಸ್ಪರ್ಶಿಸಿದ ಭಾಗ ಊದಿ ಕೊಳ್ಳುತ್ತದೆ. ಜೆಲ್ಲಿ ಫಿಶ್ ಗಳಲ್ಲಿ ಎರಡು ಬಗೆ ಇದೆ. ಒಂದು ಬಿಳಿ ಹಾಗೂ ಇನ್ನೊಂದು ನಸುಗೆಂಪು ಬಣ್ಣದ್ದು. ಕೆಂಪು ಜಲ್ಲಿ ಫಿಶ್ ಸ್ಪರ್ಶಿಸಿದರೆ ಉರಿ ಹೆಚ್ಚು . ಮಲ್ಪೆ ಸೆಂಟ್ ಮೇರಿಸ್ ದ್ವೀಪದ ಒಂದು ಬದಿಯಲ್ಲಿ ಈ ರೀತಿಯ ಮೀನು ಸಾಮಾನ್ಯವಾಗಿ ಕಂಡು ಬರುತ್ತದೆ.

ಮತ್ತಷ್ಟು ಕಳೆಗಟ್ಟಿದ ಉಡುಪಿಯ ಬೋಟ್ ಹೌಸ್: ಏನುಂಟು, ಏನಿಲ್ಲಮತ್ತಷ್ಟು ಕಳೆಗಟ್ಟಿದ ಉಡುಪಿಯ ಬೋಟ್ ಹೌಸ್: ಏನುಂಟು, ಏನಿಲ್ಲ

ಈ ಹಿನ್ನೆಲೆಯಲ್ಲಿ ಆ ಪ್ರದೇಶಕ್ಕೆ ಯಾರೂ ಹೋಗದಂತೆ ತಡೆಯಲಾಗುತ್ತದೆ. ಕಳೆದ 2 ದಿನಗಳಿಂದ ಉಡುಪಿಯ ಮಲ್ಪೆ ಕಡಲಕಿನಾರೆಗೆ ಜೆಲ್ಲಿ ಫಿಶ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿವೆ.

ಕಾಪು ಕಡಲ ಕಿನಾರೆಯಲ್ಲಿ ರಾಶಿ ರಾಶಿ ಬೊಲೆಂಜಿರ್ ಮೀನುಗಳು!ಕಾಪು ಕಡಲ ಕಿನಾರೆಯಲ್ಲಿ ರಾಶಿ ರಾಶಿ ಬೊಲೆಂಜಿರ್ ಮೀನುಗಳು!

ಮಂಗಳೂರಿನ ಪಣಂಬೂರು ಕಡಲ ಕಿನಾರೆ ಬಳಿಯೂ ಕೂಡ ಈ ಜೆಲ್ಲಿ ಫಿಶ್ ಗಳು ಕಂಡು ಬಂದಿವೆ. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಬೀಚ್ ನಲ್ಲಿ ಕಳೆದ ಭಾನುವಾರ ಜೆಲ್ಲಿಫಿಶ್ ದಾಳಿ ನಡೆಸಿದ್ದವು. ಇದರಿಂದ ಕೆಲವರು ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿಯೂ ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಎಚ್ಚರವಹಿಸಲಾಗಿದೆ .

Jellyfish problem has returned in Malpe beach

ಕಳೆದ ಸೆಪ್ಟೆಂಬರ್ ನಲ್ಲಿ ಮಲ್ಪೆ ಬೀಚ್ ನಲ್ಲಿ ಸ್ಟಿಂಗ್ ರೇ ಮೀನುಗಳು ಪ್ರವಾಸಿಗರ ಮೇಲೆ ದಾಳಿ ನಡೆಸಿದ್ದವು. ಈ ಮೀನುಗಳು ಬಾಲದಲ್ಲಿರುವ ಮುಳ್ಳಿನಿಂದ ನೀರಿಗಿಳಿಯುವ ಪ್ರವಾಸಿಗರನ್ನು ಚುಚ್ಚಿ ಗಾಯಗೊಳಿಸಿದ್ದವು.

English summary
Jellyfish problem has returned in Malpe beach at Udupi. Several people were injured and left in pain after Jellyfish attack them in Malpe beach.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X