ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಿನಿ ಸಮರದ ಬಳಿಕ ರಾಜಕಾರಣ ಅದಲು-ಬದಲು

|
Google Oneindia Kannada News

ಉಡುಪಿ, ನವೆಂಬರ್.09: ಕಾಂಗ್ರೆಸ್ ಗೆ ಕೈ ಕೊಟ್ಟ ಜೆಡಿಎಸ್ ಬಿಜೆಪಿ ಜೊತೆ ಕೈ ಜೋಡಿಸುತ್ತಾ ಅನ್ನುವ ಅನುಮಾನಗಳು ಹೆಚ್ಚುತ್ತಿವೆ. ಇಂಥದೊಂದು ಅನುಮಾನವನ್ನು ಹುಟ್ಟು ಹಾಕಿದ್ದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರು ನೀಡಿರುವ ಒಂದೇ ಒಂದು ಹೇಳಿಕೆ.
ಅಚ್ಚರಿ ಅನ್ನಿಸಿದ್ರೂ ಇದು ಸತ್ಯ. ರಾಜಕಾರಣದಲ್ಲಿ ದೇವೇಗೌಡರ ತಂತ್ರಗಾರಿಕೆಯನ್ನು ಪತ್ತೆ ಮಾಡುವುದು ಅಷ್ಟು ಸುಲಭದ ಮಾತಲ್ಲ. ಯಾವಾಗ ದೊಡ್ಡಗೌಡರು ಹೇಗೆ ದಾಳ ಉರುಳಿಸುತ್ತಾರೆ ಅನ್ನೋದು ಯಾರಿಗೂ ಅರ್ಥವಾಗದ ಸತ್ಯ. ಸದ್ಯದ ರಾಜಕೀಯ ಬೆಳವಣಿಗೆಗಳ ನಡುವೆ ಅಂಥದ್ದೇ ಮತ್ತೊಂದು ದಾಳ ಉರುಳಿಸಲು ದೇವೇಗೌಡರು ಸ್ಕೆಚ್ ಹಾಕಿದ್ದಾರೆ.

JDS Joints The Hands With Bjp After By-Election
ರಾಜ್ಯದಲ್ಲಿ ಮಿನಿ ಸಮರಕ್ಕೆ ದಿನಗಣನೆ ಶುರುವಾಗಿದೆ. 15 ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯದಿರಲಿ ಅಂತಾ ಅನರ್ಹ ಶಾಸಕರು ದೇವರಲ್ಲಿ ಮೊರೆ ಇಡುತ್ತಿದ್ದಾರೆ. ಸುಪ್ರೀಂಕೋರ್ಟ್ ಹೊಸ್ತಿಲಿನಲ್ಲಿ ಅನರ್ಹಗೊಂಡ ಶಾಸಕರ ಭವಿಷ್ಯವಿದೆ. ಇಂಥ ಸಂದರ್ಭದಲ್ಲಿ ಅನರ್ಹ ಶಾಸಕರ ಆದಿಯಾಗಿ ಎಲ್ಲರೂ ಬೆಚ್ಚಿ ಬೀಳುವಂತಾ ಹೇಳಿಕೆಯೊಂದನ್ನು ದೇವೇಗೌಡರು ನೀಡಿದ್ದಾರೆ.

ನಿಮಗೆ ತಾಕತ್ತಿದ್ರೆ ಚುನಾವಣೆ ಎದುರಿಸಿ: ಸಿದ್ದರಾಮಯ್ಯಗೆ ಬಿಎಸ್‌ವೈ ಸವಾಲುನಿಮಗೆ ತಾಕತ್ತಿದ್ರೆ ಚುನಾವಣೆ ಎದುರಿಸಿ: ಸಿದ್ದರಾಮಯ್ಯಗೆ ಬಿಎಸ್‌ವೈ ಸವಾಲು

ಚುನಾವಣಾಪೂರ್ವ ಮೈತ್ರಿ ಇಲ್ಲವೇ ಇಲ್ಲ

ಚುನಾವಣಾಪೂರ್ವ ಮೈತ್ರಿ ಇಲ್ಲವೇ ಇಲ್ಲ

ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡ ಜೆಡಿಎಸ್ ಅದರಿಂದ ಸರಿಯಾಗಿ ಪೆಟ್ಟು ತಿಂದಿದೆ. ಇದೀಗ ರಾಜ್ಯದಲ್ಲಿ ಎದುರಾಗಿರುವ ಉಪ ಚುನಾವಣೆಯಲ್ಲಿ ಯಾವ ಪಕ್ಷದ ಜೊತೆಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ಏಕಾಂಗಿಯಾಗಿ ಚುನಾವಣೆ ಎದುರಿಸುವುದಾಗಿ ದೇವೇಗೌಡರು ಹೇಳಿದ್ದಾರೆ.

ನಾನೇನು ಸನ್ಯಾಸಿಗಳಲ್ಲ ಎಂದ ಮಾತಿನ ಅರ್ಥವೇನು?

ನಾನೇನು ಸನ್ಯಾಸಿಗಳಲ್ಲ ಎಂದ ಮಾತಿನ ಅರ್ಥವೇನು?

ಉಪ ಚುನಾವಣೆ ಬಳಿಕ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಬಿರುಗಾಳಿ ಬೀಳುತ್ತೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಆದರೆ, ಮಿನಿ ಸಮರಕ್ಕೂ ಮೊದಲೇ ದೇವೇಗೌಡರು ಬದಲಾವಣೆ ಬಗ್ಗೆ ಸುಳಿವು ನೀಡಿದ್ದಾರೆ. ಅನರ್ಹ ಶಾಸಕರ ವಿರುದ್ಧ ಕೆರಳಿರುವ ಹೆಚ್ ಡಿಡಿ, ಅಗತ್ಯಬಿದ್ದರೆ ಯಾರೊಂದಿಗಾದರೂ ಕೈ ಜೋಡಿಸುವ ಬಗ್ಗೆ ಮಾತನಾಡಿದ್ದಾರೆ.

ಸಿದ್ದು ವಿರುದ್ಧ ಸೇಡು ತೀರಿಸಿಕೊಳ್ಳುತ್ತಾರಾ ದಳಪತಿ?

ಸಿದ್ದು ವಿರುದ್ಧ ಸೇಡು ತೀರಿಸಿಕೊಳ್ಳುತ್ತಾರಾ ದಳಪತಿ?

ಶತ್ರುವಿನ ಶತ್ರು ಮಿತ್ರ ಎನ್ನುವುದು ಸಾರ್ವಕಾಲಿಕ ಯುದ್ಧತಂತ್ರ. ಭಾರತವನ್ನು ಇದೇ ತಂತ್ರಗಾರಿಕೆ ಮೇಲೆ ಬ್ರಿಟಿಷರು 200 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದರು. ಈಗದೇ ತಂತ್ರವನ್ನು ಕಾಂಗ್ರೆಸ್ ವಿರುದ್ಧ ಪ್ರಯೋಗಿಸಲು ಜೆಡಿಎಸ್ ಸ್ಕೆಚ್ ಹಾಕಿಕೊಂಡಿದೆ. ಈ ಹಿಂದೆ ಕುಮಾರಸ್ವಾಮಿ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರೇ ಕಾರಣ ಎಂಬುದು ಜೆಡಿಎಸ್ ಪಾಳಯದಲ್ಲಿರುವ ನಾಯಕರ ಆರೋಪ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದಿರುವ ಜೆಡಿಎಸ್ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದೆ. ಅದೇ ಸಮಯಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದೆ.

'ಕೈ' ಕೊಟ್ಟ 'ತೆನೆ ಹೊತ್ತ ಮಹಿಳೆ' ಮುಡಿಯುತ್ತಾಳಾ 'ಕಮಲ'?

'ಕೈ' ಕೊಟ್ಟ 'ತೆನೆ ಹೊತ್ತ ಮಹಿಳೆ' ಮುಡಿಯುತ್ತಾಳಾ 'ಕಮಲ'?

ಸಿದ್ದರಾಮಯ್ಯ ವಿರುದ್ಧ ಕೆರಳಿರುವ ದಳಪತಿಗಳು ಈಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಚಾರದಲ್ಲಿ ಮೃದು ಧೋರಣೆ ತೆಳೆದಂತೆ ಕಾಣುತ್ತಿದೆ. ಇದಕ್ಕೆ ಕಾರಣವಾಗಿದ್ದು ದೇವೇಗೌಡರು ಇಂದೇ ನೀಡಿರುವ ಸ್ಫೋಟಕ ಹೇಳಿಕೆ. ರಾಜ್ಯ ರಾಜಕಾರಣದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು. ಉಪ ಚುನಾವಣೆ ನಂತರ ಬಿಜೆಪಿಗೆ ನಾವು ಬೆಂಬಲ ನೀಡುವ ಮಾತೇ ಇಲ್ಲ. ಆದರೆ, ಅಂಥದ ಸಂದರ್ಭ ಎದುರಾದರೆ ನಾವೇನೂ ಸನ್ಯಾಸಿಗಳಲ್ಲ. ಜಾತ್ಯಾತೀತ ಪಕ್ಷದ ನೆಲೆಯಲ್ಲಿ ಪ್ರಯತ್ನ ಮಾಡುತ್ತೇವೆ ಎಂದು ಹೆಚ್.ಡಿ.ದೇವೇಗೌಡರು ಹೇಳಿದ್ದಾರೆ.

English summary
JDS Joints The Hands With Bjp After By-Election. Ex-Prime Minister H.D.Devegowda Give The Hint.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X