ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈಗಿನ ಚಿತ್ರರಂಗದ ಬಗ್ಗೆ ಗೊತ್ತಿಲ್ಲ, ಆದರೆ ಅರ್ಜುನ್ ಸರ್ಜಾ ಸರಳ ಸಜ್ಜನ : ಜಯಮಾಲಾ

|
Google Oneindia Kannada News

ಉಡುಪಿ, ಅಕ್ಟೋಬರ್.25: ಮೀ ಟೂ ಅಭಿಯಾನ ಹೆಣ್ಣನ್ನು ಹರಾಜು ಹಾಕುವ ಅಭಿಯಾನ ಆಗದಿರಲಿ. ಹೆಣ್ಣು ಮುಕ್ತವಾಗಿ ಬಂದಾಗ ಬೆಂಬಲ ನೀಡಬೇಕು. ಹೆಣ್ಣಿಗೆ ರಕ್ಷಣೆ ಕೊಡುವ ನೆಪದಲ್ಲಿ ಗಂಡಸನ್ನು ದೂಷಿಸುವುದು ತಪ್ಪು ಎಂದು ಸಚಿವೆ ಜಯಮಾಲಾ ಹೇಳಿದರು.

ಬೈಂದೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಮೀ ಟೂ ಬಲ ತಂದುಕೊಟ್ಟಿದೆ. ನಾವು ಡಾ.ರಾಜ್ ಕುಮಾರ್ ಕಾಲದಲ್ಲಿ ಬೆಳೆದವರು. ಅಂದು ಚಿತ್ರರಂಗದಲ್ಲಿ ಸುವರ್ಣ ಯುಗವಿತ್ತು. ಇಂತಹ ದಿನಗಳನ್ನೇ ನಾನು ನೋಡಿಲ್ಲ .46 ವರ್ಷದಲ್ಲಿ 75 ಸಿನಿಮಾ ಮಾಡಿದ್ದೇನೆ. ಒಂದೇ ಒಂದು ಕಹಿ ಘಟನೆ ನನ್ನ ಜೀವನದಲ್ಲಿ ನಡೆದಿಲ್ಲ.

ಶ್ರುತಿ ವಿರುದ್ಧ ಅರ್ಜುನ್ 5 ಕೋಟಿ ರು. ಆಗ್ರಹಿಸಿ ಮಾನನಷ್ಟ ಮೊಕದ್ದಮೆಶ್ರುತಿ ವಿರುದ್ಧ ಅರ್ಜುನ್ 5 ಕೋಟಿ ರು. ಆಗ್ರಹಿಸಿ ಮಾನನಷ್ಟ ಮೊಕದ್ದಮೆ

ಈಗಿನ ಚಿತ್ರರಂಗದ ಬಗ್ಗೆ ನನಗೆ ಗೊತ್ತಿಲ್ಲ. ನಟ ಅರ್ಜುನ್ ಸರ್ಜಾ ಸರಳ, ಸಜ್ಜನ ಹುಡುಗ. ಸರ್ಜಾ ತಂದೆಯ ಜೊತೆಯೂ ಅಭಿನಯಿಸಿದ್ದೆ ಎಂದು ಸರ್ಜಾ ಫ್ಯಾಮಿಲಿ ಕುರಿತು ಜಯಮಾಲಾ ಪ್ರಶಂಸಿಸಿದರು.

Jayamala Says Arjun Sarja is a Good boy

ಶ್ರುತಿ ಅವಕಾಶವಾದಿಯಲ್ಲ, ಅರ್ಜುನ್ ಅಪರಾಧಿ ಎನ್ನಲಾರೆ: ಪ್ರಕಾಶ್ ರಾಜ್ಶ್ರುತಿ ಅವಕಾಶವಾದಿಯಲ್ಲ, ಅರ್ಜುನ್ ಅಪರಾಧಿ ಎನ್ನಲಾರೆ: ಪ್ರಕಾಶ್ ರಾಜ್

ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡರು ಸಭೆ ಕರೆದಿದ್ದಾರೆ.ಯಾವ ಹೆಣ್ಣಿಗೂ ಸಮಸ್ಯೆ ಆಗಬಾರದು. ಯಾವ ಪುರುಷನಿಗೂ ಅನ್ಯಾಯ ಆಗಬಾರದು. ಚಿತ್ರರಂಗವನ್ನು ಮೀ ಟೂ ಇಬ್ಭಾಗ ಮಾಡಲು ಸಾಧ್ಯವಿಲ್ಲ. ಸ್ಯಾಂಡಲ್ ವುಡ್ ಗೆ 85 ವರ್ಷಗಳ ಇತಿಹಾಸ ಇದೆ ಎಂದು ಜಯಮಾಲಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

English summary
Minister Jayamala Said that i do not know about the current cinema industry. But Arjun Sarja is a Good boy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X