ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಾನಪದ ಅಕಾಡೆಮಿ ಪ್ರಶಸ್ತಿ ಪ್ರಕಟ; ಇಲ್ಲಿದೆ ಪ್ರಶಸ್ತಿ ಪುರಸ್ಕೃತರ ಪಟ್ಟಿ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಫೆಬ್ರವರಿ 26: ಕರ್ನಾಟಕ ಜಾನಪದ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಯನ್ನು ಇಂದು ಉಡುಪಿಯಲ್ಲಿ ಪ್ರಕಟಿಸಲಾಗಿದೆ. ಉಡುಪಿಯ ಪ್ರೆಸ್ ಕ್ಲಬ್ ನಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಮಂಜಮ್ಮ ಜೋಗತಿಯವರು ಪಟ್ಟಿ ಬಿಡುಗಡೆಗೊಳಿಸಿದರು.

ರಾಜ್ಯದ ಪ್ರತೀ ಜಿಲ್ಲೆಗೂ ಒಂದೊಂದು ಜನಪದ ಪ್ರಕಾರದಲ್ಲಿ ಪ್ರಶಸ್ತಿ ಘೋಷಣೆಯಾಗಿದ್ದು, ಅರ್ಹರನ್ನು ಆಯ್ಕೆ ಮಾಡಲಾಗಿದೆ ಅಂತ ಜನಪದ ಅಕಾಡೆಮಿ ಅಧ್ಯಕ್ಷರಾದ ಮಂಜಮ್ಮ ಜೋಗತಿ ತಿಳಿಸಿದರು. ಪ್ರಶಸ್ತಿ ಪುರಸ್ಕೃತರ ಪಟ್ಟಿ ಈ ರೀತಿ ಇದೆ.

Janapada Academy Annual Award List

* ಬೆಂಗಳೂರು ನಗರ- ಗೌರಮ್ಮ (ಜಾನಪದ ಗಾಯಕಿ)
* ಬೆಂಗಳೂರು ಗ್ರಾಮಾಂತರ- ಲಕ್ಷ್ಮಮ್ಮ (ಭಜನೆ ಪದಗಳು)
* ರಾಮನಗರ- ಅಂಕನಹಳ್ಳಿ ಶಿವಣ್ಣ (ಪೂಜಾ ಕುಣಿತ)
* ಕೋಲಾರ- ಅಂಗಡಿ ವೆಂಕಟೇಶಪ್ಪ (ತತ್ವಪದ )
* ತುಮಕೂರು-ರಂಗಯ್ಯ (ಜಾನಪದ ಗೀತೆ)
* ದಾವಣಗೆರೆ- ಪಿ ಜಿ ಪರಮೇಶ್ವರಪ್ಪ (ವೀರಗಾಸೆ)
* ಚಿತ್ರದುರ್ಗ- ತಿಪ್ಪಣ್ಣ (ಗೊರವರ ಕುಣಿತ)
* ಚಿಕ್ಕಬಳ್ಳಾಪುರ- ಮುನಿರೆಡ್ಡಿ (ಜಾನಪದ ಗಾಯನ )
* ಶಿವಮೊಗ್ಗ -ಜಿಸಿ ಮಂಜಪ್ಪ (ಡೊಳ್ಳುಕುಣಿತ )
* ಮೈಸೂರು- ಮಾದಶೆಟ್ಟಿ (ಕಂಸಾಳೆ ಕುಣಿತ )
* ಮಂಡ್ಯ- ಸ್ವಾಮಿಗೌಡ (ಬೀಸುವ ಪದಗಳು )
* ಚಾಮರಾಜನಗರ ಗೌರಮ್ಮ (ಸೋಬಾನೆ ಪದ )
* ಕೊಡಗು -ಜಿಕೆ ರಾಮು (ಕೊಡವರ ಕುಣಿತ )
* ಹಾಸನ - ಕಪಿನಿ ಗೌಡ ಕೆ (ಕೋಲಾಟ )
* ಚಿಕ್ಕಮಗಳೂರು- ಡಾಕ್ಟರ್ ಎಚ್ ಸಿ ಈಶ್ವರ ನಾಯಕ (ನಾಟಿವೈದ್ಯ )
* ಉಡುಪಿ- ಸಾಧು ಪಾಣಾರ (ಭೂತ ಕೋಲ )
* ದಕ್ಷಿಣ ಕನ್ನಡ -ರುಕ್ಮಯ ಗೌಡ (ಸಿದ್ದವೇಷ )
* ಬೆಳಗಾವಿ -ಸಂಕಮ್ಮ (ಸಂಪ್ರದಾಯದ ಪದ )
* ಬಾಗಲಕೋಟೆ-ರುಕ್ಮಿಣಿ ಮಲ್ಲಪ್ಪ (ಹರನಾಳ ಮದುವೆ ಹಾಡು )
* ಧಾರವಾಡ-ಮಲ್ಲಯ್ಯ ರಾಚಯ್ಯ (ತೋಟಗಂಟಿ ಜಾನಪದ ಸಂಗೀತ)
* ಹಾವೇರಿ-ಹನುಮಂತಪ್ಪ ಧಾರವಾಡ (ಭಜನೆ ಕೋಲಾಟ)
* ಗದಗ-ನಾಗರಾಜ ನೀ ಜಕ್ಕಮ್ಮ (ನವರ್ ಗೀಗಿ ಪದ)
* ವಿಜಯಪುರ- ನಿಮ್ಮವ್ವ ಕೆಂಚಪ್ಪ ಗುಬ್ಬಿ (ಸೋಬಾನೆ ಪದ )
* ಉತ್ತರಕನ್ನಡ ಶ್ರೀಮತಿ ಹುಸೇನಬಿ ಬುಡನ್ ಸಾಬ್ ಸಿದ್ದಿ ಸಿದ್ದಿ ಡಮಾಮಿ ನೃತ್ಯ
* ಕಲಬುರ್ಗಿ-ಗಂಗಾಧರಯ್ಯ ಅಗ್ಗಿಮಠ (ಪುರುವಂತಿಕೆ )
* ಬೀದರ್ - ತುಳಸಿ ರಾಮ ಭೀಮರಾವ್ ಸುತಾರ್ (ಆಲದ ಎಲೆಯಿಂದ ಸಂಗೀತ)
* ಕೊಪ್ಪಳ- ಶಾಂತವ್ವ ಲಕ್ಷ್ಮಪ್ಪ ಲಮಾಣಿ (ಲಮಾಣಿ ನೃತ್ಯ)
* ರಾಯಚೂರು- ಶ್ರೀ ಸೂಗಪ್ಪ ನಾಗಪ್ಪ (ತತ್ವಪದ )
* ಬಳ್ಳಾರಿ -ವೇಷಗಾರ ಮೋತಿ ರಾಮಣ್ಣ (ಹಗಲುವೇಷ)
* ಯಾದಗಿರಿ - ಶಿವಮೂರ್ತಿ ತನಿಖೆದಾರ (ಗೀಗಿ ಪದ)

ಈ ಬಾರಿಯ ಜನಪದ ತಜ್ಞ ಪ್ರಶಸ್ತಿ
* ರಾಮನಗರದ ಡಾ. ಚಕ್ಕೆರೆ ಶಿವಶಂಕರ್ (ಡಾಕ್ಟರ್ ಜಿ ಶಂ ಪರಮಶಿವಯ್ಯ ಪ್ರಶಸ್ತಿ)
* ಕಲಬುರ್ಗಿಯ ಬಸವರಾಜ ಪೊಲೀಸ್ ಪಾಟೀಲ್ ( ಡಾಕ್ಟರ್ ಬಿ ಎಸ್ ಗದ್ದಗಿಮಠ ತಜ್ಞ ಪ್ರಶಸ್ತಿ)

English summary
The annual award of the Karnataka Janapada Academy has been announced today in Udupi. The list was released by Manjamma Jogati, President of Karnataka janapada Academy
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X