ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೂರಾರು ಕಾರ್ಮಿಕರು ಅತಂತ್ರ: ಉಡುಪಿ ಜಿಲ್ಲಾಡಳಿತದಿಂದ ಆಶ್ರಯ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಮಾರ್ಚ್ 29: ಕೊರೊನಾ ಎರ್ಮಜೆನ್ಸಿ ಹಿನ್ನೆಲೆಯಲ್ಲಿ ಕೆಲಸವಿಲ್ಲದೇ, ಊರಿಗೆ ಹೋಗಲು ಅಸಾಧ್ಯವಾಗಿ ಅತಂತ್ರ ಸ್ಥಿತಿಯಲ್ಲಿದ್ದ ಸುಮಾರು 224 ಮಂದಿ ವಲಸೆ ಕಾರ್ಮಿಕರಿಗೆ ಸರ್ಕಾರಿ ಕಾಲೇಜಿನಲ್ಲಿ ತಾತ್ಕಾಲಿಕ ವಸತಿ ಕಲ್ಪಿಸಲಾಗಿದೆ.

ಉಡುಪಿ ಜಿಲ್ಲಾಡಳಿತದ ವತಿಯಿಂದ ಬ್ರಹ್ಮಾವರ ತಾಲ್ಲೂಕು ವ್ಯಾಪ್ತಿಯ ಬಾರಕೂರು ರುಕ್ಮಿಣಿ ಶೆಡ್ತಿ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾತ್ಕಾಲಿಕವಾಗಿ ನೆಲೆ ಕಲ್ಪಿಸಲಾಯಿತು.

Hundreds of Labours Are Risked In Udupi

ಉಡುಪಿ ಜಿಲ್ಲಾಡಳಿತ ವತಿಯಿಂದ ಸಂತ್ರಸ್ಥರಿಗೆ ಊಟ ವ್ಯವಸ್ಥೆ ಮಾಡಿದರೆ, ಸ್ಥಳೀಯ ಉತ್ಸಾಹಿ ಸಮಾಜ ಸೇವಕರು, ದಾನಿಗಳು ಮುಂಜಾನೆ ತಿಂಡಿ ಚಹಾದ ವ್ಯವಸ್ಥೆ ಮಾಡಿದರು.

Hundreds of Labours Are Risked In Udupi

ಹನೆಹಳ್ಳಿ ಪಂಚಾಯತ್ ಹಾಗೂ ಸ್ವಸ್ತಿಕ್ ಸ್ಪೋರ್ಟ್ಸ್ ಕ್ಲಬ್ ಅವರು ಕಾರ್ಮಿಕರಿಗೆ ರಾತ್ರಿ ಉಳಿದುಕೊಳ್ಳಲು ಬೆಳಕಿನ ವ್ಯವಸ್ಥೆ ಮಾಡಿದ್ದಾರೆ. ಉತ್ತರ ಕರ್ನಾಟಕದಿಂದ ಕೂಲಿಯಾಳುಗಳಾಗಿ ಸಾವಿರಾರು ಜನರು ಇಲ್ಲಿಗೆ ಬಂದು ಜಿಲ್ಲೆಯಾದ್ಯಾಂತ ಸಿಲುಕಿಕೊಂಡಿದ್ದಾರೆ.

English summary
About 224 migrant workers, who were unable to move to the Native, were provided with temporary housing at Udupi government college.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X