ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲ್ಪೆ ಮೀನುಗಾರರಿಗೆ ತಮಿಳುನಾಡು ಮೀನುಗಾರರಿಂದ ಗೂಂಡಾಗಿರಿ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಅಕ್ಟೋಬರ್ 22: ಉಡುಪಿ ಜಿಲ್ಲೆಯ ಮಲ್ಪೆಯ ಬಳಿ ತಮಿಳುನಾಡು ಮೀನುಗಾರರು ಕರ್ನಾಟಕ ಮೀನುಗಾರರ ಮೇಲೆ ಗೂಂಡಾಗಿರಿ ಮಾಡಿದ್ದಾರೆ. ಮಲ್ಪೆಯಿಂದ ತೆರಳಿ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರರ ಬೋಟ್ ಅನ್ನು ಹಾನಿಗೊಳಿಸಿದ್ದಾರೆ.

ತಮಿಳುನಾಡು ಮೀನುಗಾರರು ಕಾನೂನುಬಾಹಿರವಾಗಿ ಮೀನುಗಾರಿಕೆ ನಡೆಸುತ್ತಿದ್ದರು ಎನ್ನಲಾಗಿದ್ದು, ಲೈಟ್ ಅಳವಡಿಸಿ ಮೀನು ಹಿಡಿಯುತ್ತಿದ್ದರು. ಇದಕ್ಕೆ ಮಲ್ಪೆಯ ಮೀನುಗಾರರು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ತಮಿಳು ಮೀನುಗಾರರು ಮಲ್ಪೆಯಿಂದ ತೆರಳಿದ್ದ ಬೋಟಿಗೆ ಹಾನಿ ಮಾಡಿದ್ದಾರೆ.

ಮಲ್ಪೆ ಮೀನುಗಾರರ ಬಲೆಗೆ 750 ಕೆ.ಜಿ ತೂಕದ ಫಿಶ್ ಮಲ್ಪೆ ಮೀನುಗಾರರ ಬಲೆಗೆ 750 ಕೆ.ಜಿ ತೂಕದ ಫಿಶ್

ಆಳ ಸಮುದ್ರಕ್ಕೆ ತೆರಳಿದ್ದ ಎಲ್ಲಾ ಮೀನುಗಾರಿಕಾ ಬೋಟುಗಳು ಮಲ್ಪೆ ಬಂದರಿಗೆ ವಾಪಸ್ ಬಂದು ಮಲ್ಪೆ ಮೀನುಗಾರರು ಪ್ರತಿಭಟನೆ ನಡೆಸಿದರು. ಬೋಟಿಗೆ ಹಾನಿ ಮಾಡಿದ ತಮಿಳು ಮೀನುಗಾರರನ್ನು ಕರೆತಂದು ಮುತ್ತಿಗೆ ಹಾಕಿದ್ದಾರೆ.

Udupi: Rowdyism From Tamil Nadu Fishermen In Malpe

ತಮಿಳುನಾಡು ಬೋಟ್ ಗಳಿಗೆ ಮಲ್ಪೆ ಸ್ಥಳೀಯ ಮೀನುಗಾರರು ತರಾಟೆ ತೆಗೆದುಕೊಂಡಿದ್ದಾರೆ. ಸ್ಥಳಕ್ಕೆ ಕರಾವಳಿ‌ ಕಾವಲು ಪಡೆ ಪೊಲೀಸರು ಬಂದಿದ್ದಾರೆ.

Recommended Video

Mohammed Siraj ಬೆಳೆದು ಬಂದ ಹಾದಿ , ಹಾಗು IPLಗೆ ಪ್ರವೇಶ ಹೇಗಿತ್ತು | Oneindia Kannada

ತಮಿಳುನಾಡು ಮೀನುಗಾರರರು ಆಗಾಗ ಕರ್ನಾಟಕದ ಮೀನುಗಾರರಿಗೆ ಕಿರುಕುಳ ಕೊಡುತ್ತಿರುತ್ತಾರೆ. ಅಲ್ಲದೇ ಅವರು ಕಾನೂನು ನಿಯಮ ಮೀರಿ ಮೀನುಗಾರಿಕೆ ನಡೆಸುತ್ತಿರುವುನ್ನು ಮೀನುಗಾರಿಕಾ ಇಲಾಖೆ ಹಾಗೂ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಕರ್ನಾಟಕ ಮೀನುಗಾರರು ಒತ್ತಾಯಿಸಿದ್ದಾರೆ.

English summary
Rowdyism From Tamil Nadu Fishermen on Karnataka fishermen near Malpe in Udupi district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X