ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಗುವಿಗೆ "ಸೈನ್ಯ" ಎಂದು ನಾಮಕರಣ ಮಾಡಿದ ಹೆಬ್ರಿಯ ಸೈನಿಕ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಅಕ್ಟೋಬರ್ 10: ಮೊನ್ನೆಯಷ್ಟೇ, ಉಡುಪಿ ಜಿಲ್ಲೆಯ ಕುಂದಾಪುರದ ಕನ್ನಡಾಭಿಮಾನಿಯೊಬ್ಬರು ತಮ್ಮ ಮುದ್ದು ಮಗಳಿಗೆ "ಕನ್ನಡ ಶೆಟ್ಟಿ' ಎಂದು ನಾಮಕರಣ ಮಾಡುವ ಮೂಲಕ ಕನ್ನಡಾಭಿಮಾನ ಮೆರೆದಿದ್ದರು. ಕುಂದಾಪುರದ ಪ್ರತಾಪ್ ಅವರು ಭಾಷಾ ಪ್ರೀತಿಯಿಂದ ತಮ್ಮ ಮಗಳಿಗೂ ಕನ್ನಡ ಎಂದು ಹೆಸರಿಟ್ಟಿದ್ದಕ್ಕೆ ಸ್ಥಳೀಯರಿಂದ ಪ್ರಶಂಸೆಯೂ ವ್ಯಕ್ತವಾಗಿತ್ತು. ಇದೀಗ ಇದೇ ಜಿಲ್ಲೆಯ ಮತ್ತೋರ್ವ ದಂಪತಿ ದೇಶಾಭಿಮಾನ ಮತ್ತು ಸೈನ್ಯದ ಬಗೆಗಿನ ಪ್ರೀತಿ, ಗೌರವದ ಪ್ರತೀಕವಾಗಿ ತಮ್ಮ ಮಗುವಿಗೆ ಸೈನ್ಯ ಎಂದು ಹೆಸರಿಟ್ಟಿದ್ದಾರೆ.

ಉಡುಪಿ: ಕನ್ನಡಾಭಿಮಾನಿಯ ಪುತ್ರಿಯ ಹೆಸರು 'ಕನ್ನಡ ಶೆಟ್ಟಿ'!ಉಡುಪಿ: ಕನ್ನಡಾಭಿಮಾನಿಯ ಪುತ್ರಿಯ ಹೆಸರು 'ಕನ್ನಡ ಶೆಟ್ಟಿ'!

ಈ ಹೆಣ್ಣು ಮಗುವಿನ ತಂದೆ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದ್ದರಿಂದ ತಮ್ಮ ಮಗುವಿಗೂ ಸೈನ್ಯ ಎಂದು ಹೆಸರಿಡುವ ಮೂಲಕ ತಮ್ಮ ವೃತ್ತಿಯೆಡೆಗಿನ ಗೌರವ, ಅಭಿಮಾನವನ್ನು ಮೆರೆದಿದ್ದಾರೆ.

Udupi: Hebri Couple Name their baby girl after Sainya

ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಆಶಾ- ಪ್ರಶಾಂತ್ ಪೂಜಾರಿ ಅವರು ತಮ್ಮ ಮಗುವಿಗೆ ಸೈನ್ಯ ಅಂತ ಹೆಸರಿಟ್ಟು ಗಮನ ಸೆಳೆದವರು. ಹಲವು ವರ್ಷಗಳಿಂದ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಮಗುವಿನ ತಂದೆ ಪ್ರಶಾಂತ್ ಅವರು ಪ್ರಸ್ತುತ ಜಮ್ಮು ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಈ ನಾಮಕರಣದ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ.

English summary
Asha- Prashant Poojary couple of Hebri taluk in Udupi district has named their baby girl after Sainya as a love towards army,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X