ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ ಜಿಲ್ಲೆಯಾದ್ಯಂತ ಭಾರೀ ಗಾಳಿಮಳೆ: ಜನಜೀವನ ಅಸ್ತವ್ಯಸ್ತ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಸೆಪ್ಟೆಂಬರ್ 5: ಉಡುಪಿಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಮುಂಗಾರಿನ ಕೊನೆಯಲ್ಲೂ ಪ್ರಾರಂಭದ ಮಳೆಯನ್ನು ನೆನಪಿಸುವಂತಿದೆ. ಇಂದು ಬೆಳಿಗ್ಗೆ ಗಾಳಿ ಮಳೆ ಬಿರುಸು ಪಡೆದಿದೆ.

ಕೊಯ್ನಾದಿಂದ ಲಕ್ಷ ಕ್ಯೂಸೆಕ್​ ನೀರು ಬಿಡುಗಡೆ; ಬೆಳಗಾವಿಯಲ್ಲಿ ಮತ್ತೆ ತಲ್ಲಣಕೊಯ್ನಾದಿಂದ ಲಕ್ಷ ಕ್ಯೂಸೆಕ್​ ನೀರು ಬಿಡುಗಡೆ; ಬೆಳಗಾವಿಯಲ್ಲಿ ಮತ್ತೆ ತಲ್ಲಣ

ಕಳೆದ ಐದು ದಿನಗಳಿಂದಲೂ ನಿತ್ಯ ಮಳೆಯಾಗುತ್ತಿದೆ. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ವಾಹನ ಸವಾರರು, ವಿದ್ಯಾರ್ಥಿಗಳು ಮತ್ತು ಪಾದಚಾರಿಗಳು ಈ ಮಳೆಯನ್ನು ನಿರೀಕ್ಷಿಸದೇ ಇದ್ದ ಕಾರಣ ಸಾಕಷ್ಡು ಒದ್ದಾಡಬೇಕಾಯಿತು. ಮಳೆಯ ಕಾರಣದಿಂದ ಕಳೆದ ಐದು ದಿನಗಳಿಂದ ಮೀನುಗಾರಿಕೆ ಚಟುವಟಿಕೆಗೂ ತೊಂದರೆಯಾಗಿದೆ.

Heavy Rain In Udupi Cause Disruption

ಪ್ರಾರಂಭದಲ್ಲಿದ್ದ ಈ ಋತುವಿನ ಮೀನುಗಾರಿಕೆ ಚಟುವಟಿಕೆ ತುಸು ನಿಧಾನಗೊಂಡಿದೆ. ಸಾಮಾನ್ಯವಾಗಿ ಕರಾವಳಿಯಲ್ಲಿ ಅಷ್ಟಮಿ, ಗಣೇಶ ಚತುರ್ಥಿ ಬಳಿಕ ಮಳೆ ಬಹುತೇಕ ಮುಗಿಯುತ್ತದೆ. ಆದರೆ ಈ ಬಾರಿ ಸೆಪ್ಟೆಂಬರ್ ತಿಂಗಳಲ್ಲೂ ಮಳೆ ಮುಂದುವರೆದಿದ್ದು, ಕರಾವಳಿಗರಲ್ಲಿ ಅಚ್ಚರಿಗೆ ಕಾರಣವಾಗಿದೆ.

English summary
There is a heavy rainfall across Udupi since 5 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X