ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೊದಲು ಉತ್ತಮ ಆರೋಗ್ಯ, ನಂತರ ಹಬ್ಬ ಆಚರಣೆ: ಸಚಿವ ಸುನಿಲ್ ಕುಮಾರ್

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಆಗಸ್ಟ್ 30: "ರಾಜ್ಯದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಜನರು ಬೇಡಿಕೆ ಇಟ್ಟಿದ್ದಾರೆ. ಸಾರ್ವಜನಿಕರ, ಭಕ್ತ ಜನರ ಬೇಡಿಕೆ ಸರಿಯಾಗಿದೆ. ಆದರೆ ಜನರ ಆರೋಗ್ಯ ಕಾಪಾಡುವುದು ಸರ್ಕಾರದ ಮೊದಲ ಕರ್ತವ್ಯವಾಗಿದೆ," ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಹೇಳಿದರು.

ಸೋಮವಾರ ಉಡುಪಿ ಪತ್ರಿಕಾಭವನದಲ್ಲಿ ನಡೆದ ಮಾಸಿಕ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಸುನಿಲ್ ಕುಮಾರ್, "ಕೇಂದ್ರ ಸರ್ಕಾರ ನೀಡಿರುವ ಕೋವಿಡ್ ಸೂಚನೆ ನೋಡಬೇಕು. ತಜ್ಞರು ಹೇಳಿರುವ ವಿಚಾರಗಳನ್ನು ಗಮನಿಸಬೇಕು. ತಜ್ಞರ ಅಭಿಪ್ರಾಯ ನೋಡಿ ಗಣೇಶ ಹಬ್ಬ ಆಚರಣೆಗೆ ಅವಕಾಶ ನೀಡುತ್ತೇವೆ. ಇದನ್ನು ಅರ್ಥ ಮಾಡಿಕೊಂಡು ಜನರೂ ಸಹಕರಿಸಬೇಕು," ಎಂದು ಅಭಿಪ್ರಾಯಪಟ್ಟರು.

"ಉಡುಪಿ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಹೆಚ್ಚಿದ್ದ ಕಾರಣಕ್ಕೆ ಶಾಲಾ- ಕಾಲೇಜು ತರಗತಿಗಳು ಆರಂಭವಾಗಿರಲಿಲ್ಲ. ಈಗ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಸೋಂಕು ಹತೋಟಿಗೆ ಬರುತ್ತಿದೆ. ಇದೊಂದು ಆಶಾದಾಯಕ ಬೆಳವಣಿಗೆ. ಕಳೆದ ಮೂರು ದಿನಗಳಲ್ಲಿ ಪಾಸಿಟಿವಿಟಿ ರೇಟ್ ಶೇ.1.4 ಇದೆ. ಈ ಹಿನ್ನೆಲೆಯಲ್ಲಿ ಶಾಲಾರಂಭ ಮಾಡುತ್ತೇವೆ," ಎಂದು ತಿಳಿಸಿದರು.

Health Is First Priority Than Festival Celebrations Says Minister Sunil Kumar

"9ನೇ ತರಗತಿಯಿಂದ ದ್ವಿತೀಯ ಪಿಯುವರೆಗೆ ಶಾಲಾರಂಭ ಮಾಡುತ್ತೇವೆ. ಈ ಬಗ್ಗೆ ಜಿಲ್ಲಾಡಳಿತ ನಿರ್ಣಯ ಕೈಗೊಂಡಿದೆ. ಸೆಪ್ಟೆಂಬರ್ 1ರಿಂದ ತರಗತಿಗಳು ಆರಂಭವಾಗಲಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಎಚ್ಚರಿಕೆಯಿಂದ ಮುನ್ನಡೆಯಬೇಕು. ಹಾಜರಾಗುವ ಶಿಕ್ಷಕರಿಗೆ ಲಸಿಕೆ ಕಡ್ಡಾಯ ಮಾಡಬೇಕು. ಕೋವಿಡ್ ನಿಯಮಾವಳಿ ಅರ್ಥೈಸಿಕೊಂಡು ತರಗತಿ ಆರಂಭಿಸಿ," ಎಂದು ಹೇಳಿದ್ದಾರೆ.

ಕೇಂದ್ರದ ಸೂಚನೆಯಂತೆ ಗಣೇಶ ಹಬ್ಬ ಆಚರಣೆ
"ಸಾರ್ವಜನಿಕ ಗಣೇಶೋತ್ಸವ ಆಚರಣೆಗಾಗಿ ಹಿಂದೂಪರ ಸಂಘಟನೆಗಳ, ಜನರ ಬೇಡಿಕೆಯಾಗಿದೆ. ಅವರ ಬೇಡಿಕೆಯೂ ಸರಿಯಾಗಿದೆ. ಆದರೆ ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಭೀತಿ ಇರುವ ಹಿನ್ನೆಲೆಯಲ್ಲಿ ಸದ್ಯ ಸಾರ್ವಜನಿಕ ಹಬ್ಬ ಬೇಡ ನಮ್ಮ ಸರ್ಕಾರದ ಅಭಿಪ್ರಾಯ."

"ಮೊದಲು ಜನರ ಆರೋಗ್ಯ ಕಾಪಾಡುವುದು ಸರಕಾರದ ಆದ್ಯ ಕರ್ತವ್ಯ. ಕೇಂದ್ರ ಸರಕಾರದ ಸೂಚನೆ ಗಮನಿಸಬೇಕು. ಸಾರ್ವಜನಿಕ ಹಬ್ಬ ಅಚರಣೆಯಿಂದ ಕೋವಿಡ್ ಸೋಂಕು ಏರಿಕೆಯಾಗಲಿದೆ," ಎಂದು ತಜ್ಞರು ಹೇಳಿದ್ದಾರೆ. ಆ ವಿಚಾರಗಳನ್ನು ಗಮನಿಸಬೇಕು ಎಂದರು.

"ತಜ್ಞರ ಅಭಿಪ್ರಾಯವನ್ನು ಪರಿಗಣಿಸಿ ನಂತರ ಹಬ್ಬ ಆಚರಣೆಗೆ ಅವಕಾಶ ನೀಡುತ್ತೇವೆ. ಇದನ್ನು ಅರ್ಥ ಮಾಡಿಕೊಂಡು ಸಾರ್ವಜನಿಕರು ಸಹಕರಿಸಿ," ಎಂದು ಸಚಿವ ಸುನೀಲ್ ಕುಮಾರ್ ಉಡುಪಿಯಲ್ಲಿ ತಿಳಿಸಿದರು.

ಗಣೇಶೋತ್ಸವಕ್ಕೆ ಅವಕಾಶ ನೀಡದಿದ್ದರೆ ಚುನಾವಣೆ ಬಹಿಷ್ಕಾರ
"ರಾಜ್ಯ ಸರ್ಕಾರ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡದಿದ್ದರೆ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಬಹಿಷ್ಕಾರ ಮಾಡುತ್ತೇವೆ," ಎಂದು ಶ್ರೀರಾಮಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ ಹೇಳಿದರು.

Recommended Video

Cricket ಲೋಕಕ್ಕೆ ಧನ್ಯವಾದ ತಿಳಿಸಿದ ಕನ್ನಡಿಗ! | Oneindia Kannada

ಶ್ರೀರಾಮಸೇನೆ ನೇತೃತ್ವದಲ್ಲಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್ ಹಾಗೂ ಗ್ರಾಮೀಣ ಶಾಸಕ ಅಮೃತ ದೇಸಾಯಿ ಮನೆಗೆ ಹೋಗಿ ಈ ಬಗ್ಗೆ ಮನವಿ ಸಲ್ಲಿಸಿದ ನಂತರ ಧಾರವಾಡ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, "ಬಿಜೆಪಿ ನೇತೃತ್ವದ ಸರ್ಕಾರ ಹಿಂದೂಗಳ ಆರಾಧ್ಯ ವಿಘ್ನ ವಿನಾಶಕ ಗಣಪತಿ ತಂಟೆಗೆ ಬಂದರೆ ಅಧಿಕಾರ ಕಳೆದುಕೊಳ್ಳಬೇಕಾಗುತ್ತೆ," ಎಂದು ಎಚ್ಚರಿಕೆ ನೀಡಿದರು.

ಇದೇ ವೇಳೆ ಗಣೇಶೋತ್ಸವ ಆಚರಣೆ ನಿಷೇಧ ಮಾಡಿದ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಶ್ರೀರಾಮಸೇನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

English summary
The first duty of the government is to take care of the health of the people, then festivals celebrations says Kannada and Culture Minister Sunil Kumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X