ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಿಲನಕ್ರಿಯೆ ವೇಳೆ ಒಟ್ಟಾಗಿ ಕಂಡ ಹಾವುಗಳು, ಬೆಚ್ಚಿಬಿದ್ದ ಜನ

|
Google Oneindia Kannada News

ಉಡುಪಿ, ಆಗಸ್ಟ್ 31: ಹತ್ತಾರು ಹಾವುಗಳು ಒಂದೆಡೆ ಸೇರಿ ಸಭೆ ನಡೆಸಿದರೆ ಹೇಗಿರುತ್ತದೆ? -ಹೀಗೊಂದು ಅಪರೂಪದ ದೃಶ್ಯಾವಳಿ ಉಡುಪಿಯಲ್ಲಿ ಕಂಡುಬಂದಿದೆ. ಈ ದೃಶ್ಯವನ್ನು ಕಂಡ ಅಲ್ಲಿದ್ದವರು ಆಶ್ಚರ್ಯ ಚಕಿತರಾಗಿದ್ದರು. ಒಂದಷ್ಟು ಹಾವುಗಳು ಒಂದೆಡೆ ಸೇರಿದ್ದವು. ಆದರೆ ಇದು ಹಾವುಗಳ ಸಭೆಯಲ್ಲ ಹಾವುಗಳ "ಮಿಲನಕ್ರಿಯೆ" ನಡೆಯುತ್ತಿರುವ ದೃಶ್ಯ.

ನಾಗದೋಷ, ದೋಷದ ಕಾರಣಗಳು, ಮನೆಗೆ ಹಾವು ಬಂದರೆ ಏನು ಫಲ?ನಾಗದೋಷ, ದೋಷದ ಕಾರಣಗಳು, ಮನೆಗೆ ಹಾವು ಬಂದರೆ ಏನು ಫಲ?

ಉಡುಪಿಯ ಪುತ್ತೂರಿನಲ್ಲಿ ಈ ದೃಶ್ಯಾವಳಿ ಕಂಡು ಬಂದಿದೆ. ಹಾವುಗಳನ್ನು ಕಂಡೊಡನೆ ಜನರು ಭಯಗೊಂಡರು. ಇದನ್ನು ಗಮನಿಸಿದ ಸ್ಥಳೀಯ ಉರಗ ತಜ್ನ ಗುರುರಾಜ್ ಸನಿಲ್ ಸ್ಥಳೀಯರಿಗೆ ಅತ್ಯಂತ ಸಾಧು ಸ್ವಭಾವದ ಈ ಹಾವುಗಳ ಬಗ್ಗೆ ಮಾಹಿತಿ ನೀಡಿದರು.

Have a look at Mating ritual of snakes in Udupi

ಈ ಹಾವುಗಳನ್ನು ಎಲ್ಲರೂ ಆಗಾಗ ಕಾಣುತ್ತಿರುತ್ತಾರೆ. ಕನ್ನಡದಲ್ಲಿ ಇದನ್ನು ಹಳದಿ ರೇಖೆಯ ಹುಲ್ಲು ಹಾವು, ಹಗಲಮರಿ, ನೈಬಾ, ತೊಡಂಬಳಕ ಎಂದು ಕರೆಯುತ್ತಾರೆ. ಇಂಗ್ಲಿಷ್ ನಲ್ಲಿ ಬಫ್ ಸ್ಟ್ರೈಪ್ಡ್ ಕೀಲ್ ಬ್ಯಾಕ್ ಎನ್ನುತ್ತಾರೆ. ವೈಜ್ಞಾನಿಕವಾಗಿ ಆಂಫಿಯೆಸ್ಮ ಸ್ಟೊಲಾಟ (amphiesma stolata) ಎಂದು ಗುರುತಿಸಲಾಗುತ್ತದೆ.

ಗುಂಡ್ಲುಪೇಟೆಗೆ ಬಂದ ಅಪರೂಪದ ಬಿಳಿ ಹಾವು: ಅಚ್ಚರಿಯಲ್ಲಿ ಜನತೆಗುಂಡ್ಲುಪೇಟೆಗೆ ಬಂದ ಅಪರೂಪದ ಬಿಳಿ ಹಾವು: ಅಚ್ಚರಿಯಲ್ಲಿ ಜನತೆ

ಇವು ವಿಷರಹಿತ ಹಾವುಗಳು ಮತ್ತು ತುಂಬಾ ಪಾಪದ ಹಾವುಗಳು. ಕೋಮಲವಾಗಿ ಹಿಡಿದರೆ ಕಚ್ಚುವುದೂ ಇಲ್ಲ. ಸಾಮಾನ್ಯವಾಗಿ ತೋಟ, ಹೊಲಗದ್ದೆ ಮತ್ತು ಮನೆಯಂಗಳದ ಆಸುಪಾಸುಗಳಲ್ಲಿ ಹೆಚ್ಚಾಗಿ ವಾಸಿಸುತ್ತವೆ. ವಿಶೇಷ ಸಂಗತಿಯೆಂದರೆ, ಈ ಹಾವು ಘಾಸಿಗೊಂಡ ತಕ್ಷಣ "ಫೆರೋಮೋನ್" ಎಂಬ ಒಂದು ಬಗೆಯ ವಾಸನಾ ದ್ರವ್ಯವನ್ನು ಸ್ರವಿಸುತ್ತದೆ.

Have a look at Mating ritual of snakes in Udupi

ಆಗ ಆ ವಾಸನೆಗೆ ಆಕರ್ಷಿತವಾಗಿ ಅದೇ ಜಾತಿಯ ಹಲವಾರು ಹಾವುಗಳು ಆ ಜಾಗಕ್ಕೆ ಬಂದು ಸುತ್ತಾಡುತ್ತವೆ. ಆದರೆ ಯಾರಿಗೂ ಹಾನಿ ಮಾಡುವುದಿಲ್ಲ.

ಹೈದರಾಬಾದಿನಲ್ಲಿ ಪತ್ತೆಯಾಯ್ತು ಹಳದಿ ಕಂಠದ ಅಪರೂಪದ ಹಾವುಹೈದರಾಬಾದಿನಲ್ಲಿ ಪತ್ತೆಯಾಯ್ತು ಹಳದಿ ಕಂಠದ ಅಪರೂಪದ ಹಾವು

ಮಾರ್ಚ್ ನಿಂದ ನವೆಂಬರ್ ವರೆಗೆ ಇವುಗಳ ಸಂತಾನೋತ್ಪತ್ತಿ ಕಾಲ. ಸೆಪ್ಟೆಂಬರ್ ತಿಂಗಳು ಅವುಗಳ ಮಿಲನ ಕಾಲವಾಗಿರುವುದರಿಂದ ಒಂದು ಹೆಣ್ಣಿನೊಂದಿಗೆ ಹಲವು ಗಂಡು ಹಾವುಗಳು ಕಂಡು ಬರುತ್ತವೆ. ಈ ಹಾವುಗಳು ನಮ್ಮ ಸುತ್ತಮುತ್ತ ಅಧಿಕ ಸಂಖ್ಯೆಯಲ್ಲಿ ವಾಸಿಸುವುದರಿಂದ ಆಯಾ ಪರಿಸರದ ಸೂಕ್ಷ್ಮ ಜೀವರಾಶಿಗಳ ಸಂತಾನೋತ್ಪತ್ತಿ ಹತೋಟಿಯಲ್ಲಿರುತ್ತದೆ.

ಆ ಮೂಲಕ ಮಾನವರಿಗೆ ಸೋಕುವ ಅನೇಕ ರೋಗಗಳಿಂದ ಈ ಹಾವುಗಳು ನಮ್ಮನ್ನು ಸದಾ ರಕ್ಷಿಸುತ್ತವೆ ಎಂದು ಗುರುರಾಜ್ ಸನಿಲ್ ಹೇಳುತ್ತಾರೆ.

English summary
What happens if tens of snakes meet together? Here is a rare scenery mixing of snakes mating in Udupi, where more than ten snakes mate together.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X