ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ: ಎಂಬಿಎ ಪದವೀಧರೆಯ ಕೈಯಲ್ಲಿ ಮತ್ತೆ ಅರಳುತ್ತಿವೆ ಕೈಮಗ್ಗದ ಸೀರೆಗಳು

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಸೆಪ್ಟೆಂಬರ್ 28: ಒಂದು ಕಾಲದಲ್ಲಿ ಬಹು ಬೇಡಿಕೆ ಇದ್ದ ಉಡುಪಿ ಸೀರೆ ಇದೀಗ ಬೇಡಿಕೆ ಕಳೆದುಕೊಂಡಿದ್ದರೂ, ಬೆರಳೆಣಿಕೆಯ ಮಂದಿಯ ಕೈಯಲ್ಲಿ ಮರು ಜೀವ ಪಡೆದುಕೊಳ್ಳುತ್ತಿದೆ.

ಉಡುಪಿ ಜಿಲ್ಲೆ ಮಣಿಪಾಲದ ಎಂಬಿಎ ಪದವೀಧರೆಯೊಬ್ಬರು ತಮ್ಮದೇ ಆಸಕ್ತಿಯಿಂದ ಕೈಮಗ್ಗವನ್ನು ಕಲಿಯುತ್ತಿದ್ದು, ಕೈಮಗ್ಗದಿಂದ ಉಡುಪಿ ಸೀರೆಗಳ ಮಾರುಕಟ್ಟೆ ಮತ್ತು ಮಾರಾಟಕ್ಕಾಗಿ ಪ್ರಯತ್ನ ಪಡುತ್ತಿದ್ದಾರೆ.

ಎಸ್.ಎಲ್ ಭೈರಪ್ಪರಿಗೆ ಒಲಿದು ಬಂದ ಡಾ.ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಎಸ್.ಎಲ್ ಭೈರಪ್ಪರಿಗೆ ಒಲಿದು ಬಂದ ಡಾ.ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ

ಮಣಿಪಾಲದ ಟ್ಯಾಪ್ಮಿ ಸಂಸ್ಥೆಯಲ್ಲಿ ಎಂಬಿಎ ಪದವಿ ಪಡೆದ ಮಹಾಲಸಾ ಕಿಣಿ, ಪುಣೆಯ ಕಂಪನಿ ಒಂದರಲ್ಲಿ ಉದ್ಯೋಗ ಮಾಡುತಿದ್ದರು. ಆದರೆ ಅಲ್ಲಿಯ ಕೆಲಸಕ್ಕೆ ರಾಜೀನಾಮೆ ನೀಡಿ ಉಡುಪಿಯ ಕೈಮಗ್ಗದ ಸೀರೆಗಳ ಮೇಲಿನ ಆಸಕ್ತಿಯಿಂದ ಊರಿಗೆ ಮರಳಿದರು.

Udupi Handloom Sarees Are Making By MBA Graduate Woman

ಉಡುಪಿಯ ನೇಕಾರರೊಂದಿಗೆ ಬೆರೆತು ಈಗ ಉಡುಪಿ ಸೀರೆಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರಪಡಿಸಲು ಯೋಜನೆಯನ್ನು ಹಾಕಿಕೊಂಡಿದ್ದಾರೆ.

ಸದ್ಯ ಉಡುಪಿಯ ನೇಕಾರರು ನೇಯ್ದ ಸೀರೆಗಳನ್ನು ಮಹಾಲಸಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಆಸಕ್ತ ಖರೀದಿದಾರರಿಗೆ ಮಾರಾಟ ಮಾಡುತ್ತಿದ್ದಾರೆ.

Udupi Handloom Sarees Are Making By MBA Graduate Woman

""ಉಡುಪಿ ಸೀರೆಗೆ ಸದ್ಯ ಬೇಡಿಕೆ ಕಡಿಮೆಯಾಗುತ್ತಿದೆ. ನಾನು ನನ್ನ ಕಲ್ಪನೆಯ ಡಿಸೈನ್ ಗಳನ್ನು ನೇಕಾರರಿಗೆ ನೀಡಿದಾಗ ಅವರು ತೀವ್ರ ಉತ್ಸಾಹದಿಂದ ಈ ಡಿಸೈನ್ ಗಳನ್ನು ಮಗ್ಗದ ಸೀರೆಗಳಲ್ಲಿ ಅಳವಡಿಸುತ್ತಿದ್ದಾರೆ. ಸದ್ಯ ನಾನು ಸಾಮಾಜಿಕ ಜಾಲತಾಣಗಳ ಮೂಲಕ ಈ ಸೀರೆಗಳನ್ನು ಮಾರಾಟ ಮಾಡುತ್ತಿದ್ದೇವೆ'' ಎಂದು ಮಹಾಲಸಾ ಹೇಳಿದರು .

Recommended Video

ರೈತರ ಪ್ರತಿಭಟನೆ ಕುರಿತು C.M BSY ಹೇಳಿದ್ದೇನು | Oneindia Kannada

""ದೇಶ-ವಿದೇಶದ ಹಲವಾರು ಮಂದಿ ಆಸಕ್ತರು ಈಗಾಗಲೇ ಖರೀದಿ ಮಾಡಲು ಮುಂದೆ ಬಂದಿದ್ದಾರೆ. ಉಡುಪಿ ಸೀರೆಗಳು ಈಗಿನ ಯುವಜನರಿಗೆ ಇಷ್ಟವಾಗುವ ಡಿಸೈನ್ ಗಳಲ್ಲಿ ಲಭ್ಯವಾಗಲು ಉಡುಪಿಯ ನೇಕಾರರು ಕೂಡಾ ಶ್ರಮಪಡುತ್ತಿದ್ದಾರೆ'' ಎನ್ನುತ್ತಾರೆ ಎಂಬಿಎ ಪದವೀಧರೆ ಮಹಾಲಸಾ ಕಿಣಿ.

English summary
An MBA graduate woman from Udupi district Manipal, is learning handloom with hes own interest and is trying to sell Udupi sarees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X