ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶೇಷ ಚೇತನ ಅಣ್ಣ-ತಂಗಿಯರ ಹುಬ್ಬೇರಿಸುವ ಸಾಧನೆ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಏಪ್ರಿಲ್ 30: ಸಾಧಿಸುವ ಛಲ ಇದ್ದರೆ ಯಾವುದೇ ಸಾಧನೆಯೂ ಅಸಾಧ್ಯವಲ್ಲ ಎಂಬುದನ್ನು ಇಬ್ಬರು ವಿದ್ಯಾರ್ಥಿಗಳು ಸಾಧಿಸಿ ತೋರಿಸಿದ್ದಾರೆ. ಇವರಿಬ್ಬರು ಒಂದೇ ಮನೆಯ ಮಕ್ಕಳು; ಸೊಂಟದ ಕೆಳಗೆ ಇಬ್ಬರಿಗೂ ಬಲ ಇಲ್ಲ; ಹೀಗಾಗಿ ತೆವಳುತ್ತಾ ಆಚೀಚೆ ಹೋಗಬೇಕು. ಆದರೆ ಇವರ ಸಾಧನೆಗೆ ಈ ಅಂಗವೈಕಲ್ಯ ಕಿಂಚಿತ್ತೂ ಅಡ್ಡಿಯಾಗಿಲ್ಲ. ಇಬ್ಬರೂ ಓದಿ ಪಿಯುಸಿಯಲ್ಲಿ ಪಾಸಾಗುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.

ಉಡುಪಿಯ ಕಾರ್ಕಳ ತಾಲೂಕಿನ ನಿಟ್ಟೆಯ ಪ್ರಜ್ವಲ್ ಮತ್ತು ಪ್ರತೀಕ್ಷಾ ಈ ಸಾಧಕರು. ಸೊಂಟದ ಕೆಳಗೆ ಬಲ ಇಲ್ಲದಿದ್ದರೂ ಒಂದನೇ ತರಗತಿಯಿಂದ ಇವತ್ತಿನವರೆಗೂ ಮನೆಗೇ ಉಪನ್ಯಾಸಕರನ್ನು ಕರೆಸಿ ಪಾಠ ಹೇಳಿಸಿದ್ದಾರೆ. ಸ್ವಂತ ಬರೆಯಲೂ ಸಾಧ್ಯವಿಲ್ಲದ ಅಣ್ಣ-ತಂಗಿ ಸಹಾಯಕರ ನೆರವಿನಿಂದ ಪರೀಕ್ಷೆ ಬರೆದು ಪಾಸ್ ಆಗಿದ್ದಾರೆ.

ಕಲೆಯಲ್ಲಿ 2ನೇ rank ಪಡೆದ ರಮೇಶನಿಗೆ, ಅಪ್ಪ ಇಲ್ಲ, ಅಮ್ಮನೇ ಎಲ್ಲ!ಕಲೆಯಲ್ಲಿ 2ನೇ rank ಪಡೆದ ರಮೇಶನಿಗೆ, ಅಪ್ಪ ಇಲ್ಲ, ಅಮ್ಮನೇ ಎಲ್ಲ!

ಪ್ರಜ್ವಲ್ 51%, ಪ್ರತೀಕ್ಷಾ 49% ಅಂಕ ಪಡೆದಿದ್ದಾರೆ. ಹೊರಗಿನವರೊಂದಿಗೆ ಬೆರೆಯದ ಇವರಿಗೆ ಈ ಸಲ ಪರೀಕ್ಷೆ ಬರೆಯುವುದಕ್ಕೆ ದೊಡ್ಡ ತೊಡಕು ಉಂಟಾಗಿತ್ತು.‌ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಅವರಿಗೆ ಪಾಠ ಮಾಡಿದ ಟೀಚರುಗಳೇ ಪರೀಕ್ಷೆ ಬರೆದಿದ್ದರು. ಅವರು ತಮ್ಮ ಸ್ವಂತ ಉತ್ತರ ಬರೆಯದಂತೆ ಸ್ಕ್ವಾಡ್ ಗಳು ಕಾಯುತ್ತಿದ್ದರು.

Handicap Brother and Sisters mind blowing performance in Second PU

ತಮ್ಮ ಪರಿಚಯದ, ಯಾವತ್ತೂ ಬಂದು ಹೋಗಿ ಸಲಿಗೆ ಇದ್ದ ಟೀಚರುಗಳ ಮಂದೆ ಉತ್ತರವನ್ನು ನಿರರ್ಗಳವಾಗಿ ಹೇಳಿ ಇಬ್ಬರೂ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದರು.ಆದರೆ ಪಿ.ಯು ಪರೀಕ್ಷೆಗೆ ಟೀಚರುಗಳು ಅಥವಾ ಅವರ ವಿಷಯವನ್ನು ಓದಿದವರು ಬರೆಯಬಾರದೆಂಬ ಕಟ್ಟು ನಿಟ್ಟು ನಿಯಮವಿದೆ.

ಆ ಕಾನೂನು ನಿಜಕ್ಕೂ ಒಳ್ಳೆಯದೇ. ಆದರೆ ಹೊಸಬರ ಜೊತೆಗೆ ತುಟಿ ಬಿಚ್ಚದ ಈ ಹುಡುಗರಿಗೆ ಹೊಸ ಸಹಾಯಕರನ್ನು ಹುಡುಕುವ ಸವಾಲು ಎದುರಾಗಿತ್ತು. ಅದೆಷ್ಟೋ ಕಾಲೇಜಿಗೆ, ಪರಿಚಯಸ್ಥರ ಮನೆಗಳಿಗೆ ತಂದೆ ತಾಯಿ ಅಲೆದಾಡಿದರು. ಸಹಾಯಕರು ಸಿಗಬಹುದೇ ಹುಡುಕಾಡಿದರು. ಯಾರೂ ಬರೆಯಲು ಒಪ್ಪಲಿಲ್ಲ.

ಯಾವ ಜಾತಿ ವಿದ್ಯಾರ್ಥಿಗಳು ಎಷ್ಟು ಫಲಿತಾಂಶ ಪಡೆದಿದ್ದಾರೆ?ಯಾವ ಜಾತಿ ವಿದ್ಯಾರ್ಥಿಗಳು ಎಷ್ಟು ಫಲಿತಾಂಶ ಪಡೆದಿದ್ದಾರೆ?

ಕೊನೆಗೆ ಇಬ್ಬರು ವಿದ್ಯಾರ್ಥಿಗಳು ಸಹಾಯಕ್ಕೆ ಬಂದರು. ಓರ್ವಳು ಮನೆ ಪಕ್ಕದ ಹುಡುಗಿ.‌ ಇನ್ನೋರ್ವ ದೂರದ ಕಲ್ಯಾ ಊರಿನವನು. ಪರೀಕ್ಷೆಗಿಂತ ವಾರದ ಹಿಂದೆ ಇಬ್ಬರೂ ಒಂದೊಂದು ಗಂಟೆ ಪ್ರಜ್ವಲ್ ಪ್ರತೀಕ್ಷಾರ ಮನೆಗೆ ಬಂದು ಅವರ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದರು. ಪ್ರತೀಕ್ಷ ಸರಿಯಾಗಿ ಮಾತನಾಡುತ್ತಾಳೆ. ಆದರೆ ಹೊರಗಿನವರೆಂದರೆ ಬಹಳ ನಾಚಿಕೆ. ಪ್ರಜ್ವಲ್ ನಾಚಿಕೆ ಇಲ್ಲ. ಆದರೆ ಪ್ರತೀ ಮಾತಿಗೂ ಬಹಳವೇ ತೊದಲುತ್ತಾನೆ.

ಒಟ್ಟಿನಲ್ಲಿ ಅಪ್ಪ, ಅಮ್ಮ, ಇಬ್ಬರು ಉಪನ್ಯಾಸಕರು, ಇಬ್ಬರು ಸಹಾಯಕರು ಹಾಗೂ ಆ ವಿದ್ಯಾರ್ಥಿಗಳ ಪರಿಶ್ರಮ ಫಲಕೊಟ್ಟಿದೆ. ಇಬ್ಬರೂ ಉತ್ತಮ ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ. ಇವರ ಸಾಧನೆ ವಿದ್ಯಾರ್ಥಿ ಸಮೂಹಕ್ಕೇ ಒಂದು ಸ್ಪೂರ್ತಿ.

English summary
Prajwal and Prakatheeksha of the Karkala Taluk, Udupi, have secured 51% and 49% marks respectively in the second PU exam. Both of them lost the balance below the waist. Still they achieved mind blowing performance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X