ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ: ಮುಗ್ಧರ ಮೂಗಿಗೆ ಜೇನುತುಪ್ಪ, ಹಲವರಿಗೆ ಬೆಲ್ಲದಪಾನಕ

|
Google Oneindia Kannada News

ಉಡುಪಿ, ಸೆಪ್ಟೆಂಬರ್ 22 : ಜೇನಿನ ಬದಲು ಬೆಲ್ಲದ ನೀರು ಕೊಟ್ಟು ಸಾವಿರಾರು ರು. ಲಪಟಾಯಿಸಿದ ಘಟನೆ ಉಡುಪಿ ಜಿಲ್ಲೆಯ ಕೋಟ ಮೂರು ಕೈ ಗ್ರಾಮದಲ್ಲಿ ನಡೆದಿದೆ.

20 ರಿಂದ 30 ವರ್ಷದ ನಾಲ್ಕು ಜನರ ಗುಂಪೊಂದು ಇಲ್ಲಿನ ನಿವಾಸಿಗಳಿಗೆ ಜೇನು ಎಂದು ನಂಬಿಸಿ ಬೆಲ್ಲದ ನೀರು ಇರುವ ಬಾಟಲ್ ನೀಡಿ ಹಣ ತೆಗೆದುಕೊಂಡು ಮೋಸ ಮಾಡಿದ್ದಾರೆ.

ಜೇನು ನೊಣಗಳೊಂದಿಗೆ ಪುತ್ತೂರಿನ ಮಹಿಳೆಯ ಸ್ನೇಹಜೇನು ನೊಣಗಳೊಂದಿಗೆ ಪುತ್ತೂರಿನ ಮಹಿಳೆಯ ಸ್ನೇಹ

ಸುಮಾರು 15, 20 ನಿಮಿಷದಲ್ಲಿ ಜೇನು ತೆಗೆದು ಅದರಲ್ಲಿ ಜೇನನ್ನು ಹಿಂಡಿ 2 ಲೀಟರ್ ಖಾಲಿ ತಂಪು ಪಾನೀಯದ ಬಾಟಲ್ ಗೆ ಹಾಕಿ ಮಾರಾಟ ಮಾಡಿದ್ದಾರೆ.

Guys who came in the name of Honey Extraction cheat residents and escape at kundupar

ಒಂದು ಲೀಟರ್‌ನಷ್ಟು ಜೇನು ತೆಗೆದವರು, 5 ಲೀಟರ್ ಜೇನು ತುಪ್ಪವನ್ನು ಫ್ಲಾಟ್ ನಲ್ಲಿದ್ದ ಬ್ಯಾಂಕ್ ವ್ಯವಸ್ಥಾಪಕರೋರ್ವರಿಗೆ ಸೇರಿದಂತೆ ಒಟ್ಟು 10 ಸಾವಿರ ರೂಪಾಯಿಗೆ ಜೇನು ತುಪ್ಪ ವ್ಯಾಪಾರ ಮಾಡಿದ್ದಾರೆ.

ಆದರೆ ಅವರಿಂದ ಖರೀದಿಸಿದ ವೈದ್ಯರೊಬ್ಬರ ಪತ್ನಿ ಜೇನು ತುಪ್ಪ ಗುಣಮಟ್ಟದ ಬಗ್ಗೆ ಶಂಕೆ ವ್ಯಕ್ತಪಡಿಸಿ ಹಿಂದಿರುಗಿಸಿದ ಹಿನ್ನೆಲೆಯಲ್ಲಿ, ಜೇನು ತೆಗೆಯುವ ತಂಡ ತರಾತುರಿಯಲ್ಲಿ ಪರಾರಿಯಾಗಿದ್ದಾರೆ.

ಅವರು ತೆರಳಿದ ಗಂಟೆಗಳ ಬಳಿಕ ಜೇನು ಖರೀದಿಸಿದವರು ಜೇನು ಪರೀಕ್ಷಿಸಿದಾಗ ಅದು ಜೇನು ತುಪ್ಪದ ವಾಸನೆ ಇರುವ ಬೆಲ್ಲದ ನೀರು ಎಂದು ತಿಳಿದು ನಕಲಿ ಜೇನು ಕೊಟ್ಟ ಹೋದವರಿಗೆ ಹುಡುಕಾಟ ನಡೆಸಿದ್ದಾರೆ.

English summary
A team of Guys who came in the name of Honey Extraction to remove Honeycomb in a flat at Kundapur have cheated the residents of flat by adulterating jaggery into the water and have escaped by taking the originally Honeycomb by collecting more than ten Thousand Rupees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X