ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ಷರದ ಹಂಗಿಲ್ಲದೆಯೂ ಸಾಧಕನಾಗಬಹುದೆಂದು ತೋರಿಸಿಕೊಟ್ಟ ಸಂಜೀವ ಸುವರ್ಣ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜುಲೈ.17: 2ನೇ ತರಗತಿ ಮೆಟ್ಟಿಲೇರಿದ್ದರೂ, ಓಡಾಡಿರುವುದು ನೂರಾರು ಕಡೆ. ಇವರ ಜೀವನಚರಿತ್ರೆ ಇದೀಗ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವಾಗಿದೆ. ಆ ವ್ಯಕ್ತಿ ಯಾರು ಗೊತ್ತಾ?
ಅವರೇ ಸಂಜೀವ ಸುವರ್ಣ.

ತುಳುನಾಡಿನ ಗಂಡು ಕಲೆ ಯಕ್ಷಗಾನದಲ್ಲಿ ಇವರದ್ದು ಭಾರೀ ದೊಡ್ಡ ಹೆಸರು. ಕಲಾವಿದನಾಗಿ, ಗುರುವಾಗಿ ಯಕ್ಷಗಾನ ಕಲೆಯನ್ನು ಜಗದಗಲ ಪ್ರಚುರಪಡಿಸಿದವರಲ್ಲಿ ಇವರು ಒಬ್ಬರು.
ಜ್ಞಾನಪೀಠ ಪುರಸ್ಕೃತ ಕೋಟ ಶಿವರಾಮ ಕಾರಂತರ ಗರಡಿಯಲ್ಲಿ ಪಳಗಿದವರು.

ಮನೆಮನೆಗೆ ಯಕ್ಷಗಾನದ ಕಂಪನ್ನು ಪಸರಿಸುವ ಚಿಕ್ಕಮೇಳ ಬಗ್ಗೆ ನಿಮಗೆಷ್ಟು ಗೊತ್ತು?ಮನೆಮನೆಗೆ ಯಕ್ಷಗಾನದ ಕಂಪನ್ನು ಪಸರಿಸುವ ಚಿಕ್ಕಮೇಳ ಬಗ್ಗೆ ನಿಮಗೆಷ್ಟು ಗೊತ್ತು?

ಕಲಾವಿದ ಮಾತ್ರವಲ್ಲ, ಬಡ ಮಕ್ಕಳ ಪಾಲಿಗೆ ಅಪ್ಪ-ಅಮ್ಮ, ಗುರು ಎಲ್ಲವೂ ಹೌದು. ಮುಂದೆ ಓದಿ...

ಬಡಮಕ್ಕಳಿಗೆ ಶಿಕ್ಷಣ

ಬಡಮಕ್ಕಳಿಗೆ ಶಿಕ್ಷಣ

ಸಂಜೀವ ಸುವರ್ಣ ಉಡುಪಿಯ ಇಂದ್ರಾಳಿಯಲ್ಲಿ ಯಕ್ಷಗಾನ ಕಲಾಕೇಂದ್ರವನ್ನು ಎಂಜಿಮ್ ಆಶ್ರಯದಲ್ಲಿ ನಡೆಸುತ್ತಿದ್ದಾರೆ. ಇಲ್ಲಿ ಕೇವಲ ಯಕ್ಷಗಾನ ಪಾಠ ಮಾತ್ರ ನಡೆಯುವುದಿಲ್ಲ, ಸುಮಾರು 60 ಬಡ ವಿದ್ಯಾರ್ಥಿಗಳನ್ನು ಸಾಕಿ ಸಲಹಿ ಶಿಕ್ಷಣಾರ್ಜನೆಯನ್ನು ಕೂಡ ನೀಡುತ್ತಿದ್ದಾರೆ.

ಕಲಾಕೇಂದ್ರದಲ್ಲಿ ಗುರುಕುಲ ಪದ್ಧತಿ ಇನ್ನೂ ಜೀವಂತ. ಮಕ್ಕಳಿಗೆ ಕಲೆ ಶಿಕ್ಷಣದ ಜೊತೆ ಬದುಕಿನ ಮೌಲ್ಯದ ಪಾಠವನ್ನು ನೀಡುವುದು ನಿಜವಾದ ಗುರುವಿನ ಕೆಲಸ ಎನ್ನುವುದು ಇವರ ಅಭಿಮತ.

ಸಂಜೀವ ಗುರುಗಳ ಅನಿಸಿಕೆ

ಸಂಜೀವ ಗುರುಗಳ ಅನಿಸಿಕೆ

ಪ್ರಶಸ್ತಿ ಸಮ್ಮಾನದಿಂದ ಮಾರುದ್ದ ಸರಿಯುವ ಸುವರ್ಣರನ್ನು ಅವರ ಅಭಿಮಾನಿ ಬಳಗ ಇತ್ತೀಚೆಗೆ ಒತ್ತಾಯದಿಂದ ಸಮ್ಮಾನಿಸಿತು. ಈ ಕಾರ್ಯಕ್ರಮದ ಹೆಸರು ಕರುಣ ಸಂಜೀವ. ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗ ಪ್ರಶಸ್ತಿ ನೀಡಿ ಗೌರವಿಸಿತು. ಬನ್ನಂಜೆ ಹಲವು ನಾಟ್ಯ ಪ್ರಾತ್ಯಕ್ಷಿಕೆ ನೀಡಿದರು.

ಸಮ್ಮಾನ ಸಮಾರಂಭ ಹಲವು ಹೊಸತನಗಳಿಗೆ ಸಾಕ್ಷಿಯಾಯಿತು. ಸಮಾಜದ ಮುಖ್ಯ ವಾಹಿನಿಯಿಂದ ದೂರ ಉಳಿದಿರುವ ಕೊರಗ ಸಮುದಾಯದ ಡೋಲಿನ ನಾದಕ್ಕೆ ಸಂಜೀವ ಸುವರ್ಣ ಹೆಜ್ಜೆ ಹಾಕುವ ಮೂಲಕ ಕರುಣ ಸಂಜೀವ ವಿಶಿಷ್ಟವೆನಿಸಿತು.

"ನನ್ನದು ಸಾಧನೆಯಲ್ಲ ವೃತ್ತಿಯ ತಪಸ್ಸು ಅಷ್ಟೇ. ನಿಷ್ಠೆ ಮಾಡುವ ಕಾರ್ಯ ಎಲ್ಲರಿಗೂ ಯಶಸ್ಸು" ತಂದು ಕೊಡುತ್ತೆ ಅನ್ನುವುದು ಸಂಜೀವ ಗುರುಗಳ ಅಭಿಪ್ರಾಯ.

ಯಕ್ಷಗಾನವೇ ಜೀವಾಳ

ಯಕ್ಷಗಾನವೇ ಜೀವಾಳ

ಸಂಜೀವ ಸುವರ್ಣರು ಯಕ್ಷಗಾನದ ಗುರು ಮಾತ್ರವಲ್ಲ. ಬಡಮಕ್ಕಳ ಪಾಲಿಗೆ ನಿಜವಾದ ದೇವರು ಕೂಡ. ಒಮ್ಮೆ ಇವರ ಬಳಿ ಹೋದ ಮಕ್ಕಳು ದೂರಹೋಗುವ ಚಿಂತೆ ಮಾಡಲ್ಲ. 2ನೇ ತರಗತಿ ಓದಿ ಬಡತನದ ಬೇಗೆಯ ನಡುವೆ ಯಕ್ಷಗಾನವನ್ನೇ ಜೀವಾಳವಾಗಿಸಿ ಕೊಂಡು ಬೆಳೆದವರು. ಕಲೆ ಉಳಿಸುವ ಜೊತೆಗೆ ಬಡಮಕ್ಕಳಿಗೆ ಬದುಕು ಕಟ್ಟಿಕೊಡುವ ಕನಸು ಹೊತ್ತವರು.

ಈ ಗುರುಕುಲದಲ್ಲಿ ರಾಜ್ಯದ ಮೂಲೆ ಮೂಲೆಯಿಂದ ಕರೆತಂದಮಕ್ಕಳು ಶಿಕ್ಷಣ, ಯಕ್ಷಗಾನ ತರಬೇತಿಯ ಜೊತೆ ಮಾತೆಯ ಮಡಿಲಿನ ಆಸರೆಯನ್ನು ಗುರುವಿನ ಮಡಿಲಿನಲ್ಲಿ ಪಡೆದಿದ್ದಾರೆ. ಇಂತಹ ಗುರು ಸಾನ್ನಿಧ್ಯ ದೊರಕುವುದು ವಿದ್ಯಾರ್ಥಿಗಳ ಪಾಲಿನ ಪುಣ್ಯ ಎಂದ್ರೆ ತಪ್ಪಲ್ಲ.

 ಲಕ್ಷಾಂತರ ಅಭಿಮಾನಿಗಳ ಬಳಗ

ಲಕ್ಷಾಂತರ ಅಭಿಮಾನಿಗಳ ಬಳಗ

ಶಿವರಾಮ ಕಾರಂತರ ಗರಡಿಯಲ್ಲಿ ಯಕ್ಷಗಾನದ ಶಿಕ್ಷಣ ಪಡೆದ ಸಂಜೀವ ಸುವರ್ಣ ಯಕ್ಷಗಾನವನ್ನೇ ಜೀವನ ಮಾಡಿಕೊಂಡವರು. ಕಾರಂತರಲ್ಲದೇ 20ಕ್ಕೂ ಅಧಿಕ ಗುರುಗಳಲ್ಲಿ ಯಕ್ಷಗಾನ ಅಭ್ಯಾಸ ನಡೆದಿದವರು. ಬನ್ನಂಜೆ ಸಂಜೀವ ಸುವರ್ಣ ದೇಶ ವಿದೇಶದ ಸಾವಿರಾರು ವಿದ್ಯಾರ್ಥಿಗಳಿಗೆ ಯಕ್ಷಗಾನ ಶಿಕ್ಷಣ ಧಾರೆ ಎರೆದವರು.

ಬಡತನ ಹಾದಿಯಲ್ಲೇ ಸಾಧಕನಾಗಿ ಬೆಳೆದ ಸುವರ್ಣ ಜೀವನ ಯಶೋಗಾಥೆ ಈಗ ಮಂಗಳೂರು ವಿವಿ ಬಿಎ ಪದವಿಗೆ ಭೋಧನ ವಿಷಯವಾಗಿದೆ. ಆ ಮೂಲಕ ಅಕ್ಷರ ಹಂಗಿಲ್ಲದೆಯೂ ಸಾಧಕನಾಗಬಹುದು ತೋರಿಸಿಕೊಟ್ಟವರು ಮಹಾಗುರು ಸಂಜೀವ ಸುರ್ವಣ.

ಕರಾವಳಿಯಲ್ಲಿ ಯಕ್ಷಗಾನಕ್ಕೆ ಮಾತ್ರವಲ್ಲ ಗುರು ಸಂಜೀವ ಸುರ್ವಣರಿಗೂ ಲಕ್ಷಾಂತರ ಅಭಿಮಾನಿಗಳ ಬಳಗವಿದೆ. ಅಭಿಮಾನಿ ಬಳಗ ಕರುಣ ಸಂಜೀವ ಕಾರ್ಯಕ್ರಮ ಮೂಲಕ ಪ್ರಶಸ್ತಿ ನೀಡಿ ಗುರುವಿನ ಮೇಲಿನ ಅಭಿಮಾನ ಮೇರೆದಿದ್ದಾರೆ . ಕಲೆಯಲ್ಲೇ ನೆಲೆಕಂಡ ನೂರಾರು ಜನರಿಗೆ ನೆಲೆಕಾಣಿಸಿದ ಮಹಾಗುರುವಿಗೆ ನಮ್ಮದು ಒಂದು ಸಲಾಂ.

English summary
Guru Bannanje Sanjiva Suvarna Biography is a textbook for students now. His name is great in Yakshagana. He is not only the artist but father-mum and guru for poor children.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X