ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವದ ಅತೀ ಎತ್ತರದ ಮಧ್ವಾಚಾರ್ಯ ಮೂರ್ತಿಯ ವಿಶೇಷತೆ

ವಿಶ್ವದ ಅತೀ ಎತ್ತರದ ಮಧ್ವಾಚಾರ್ಯ ಮೂರ್ತಿ ಉಡುಪಿರ ಕುಂಜಾರುಗಿರಿ ತಪ್ಪಲಿನಲ್ಲಿ ನಿರ್ಮಾಣವಾಗಿದ್ದು, ಮೇ ತಿಂಗಳಿನಲ್ಲಿ ಲೋಕಾರ್ಪಣೆಯಾಗಲಿದೆ. ಮೂರ್ತಿಯ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

By ಯಶಸ್ವಿನಿ ಎಂ.ಕೆ
|
Google Oneindia Kannada News

ಉಡುಪಿ, ಏಪ್ರಿಲ್ 1 : ಆಚಾರ್ಯತ್ರಯರಲ್ಲೊಬ್ಬರಾದ ಮಧ್ವಾಚಾರ್ಯರನ್ನು ಸ್ಮರಿಸಿ, ಗೌರವಿಸುವ ಸಲುವಾಗಿ ಉಡುಪಿಯಲ್ಲಿ ಅವರ ಮೂರ್ತಿಯೊಂದು ತಲೆಎತ್ತಿರುವ ಬಗ್ಗೆ ಒನ್ ಇಂಡಿಯಾ ಈಗಾಗಲೇ ವರದಿ ಮಾಡಿದ್ದು ನೆನಪಿರಬಹುದು. ಇದೀಗ ಈ ಮೂರ್ತಿಯ ವಿಶೇಷತೆಯ ಕುರಿತ ಸಂಪೂರ್ಣ ಮಾಹಿತಿಯನ್ನು ಓದುಗರಿಗೆ ನೀಡಲಾಗುತ್ತಿದೆ.

ಮಧ್ವಾಚಾರ್ಯರು ಹುಟ್ಟಿದ, ಓಡಾಡಿದ ಜಾಗ ಉಡುಪಿ ಜಿಲ್ಲೆಯ ಪಾಜಕ ಕ್ಷೇತ್ರದ ಸಮೀಪದ ಕುಂಜಾರುಗಿರಿಯ ತಪ್ಪಲು ಪ್ರದೇಶದಲ್ಲಿ ಮಧ್ವಾಚಾರ್ಯರ ಏಕಶಿಲಾ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. 40 ಅಡಿ ಎತ್ತರದ ಪೀಠದ ಮೇಲೆ 10 ಅಡಿ ಎತ್ತರದ ಪದ್ಮಪೀಠ ರಚನೆ ಮಾಡಲಾಗಿದ್ದು, ಅದರ ಮೇಲೆ ಮಧ್ವಾಚಾರ್ಯರ ಏಕಶಿಲಾ ಮೂರ್ತಿಯನ್ನು ನಿಲ್ಲಿಸಲಾಗಿದೆ.[ಉಡುಪಿ: ದೇಶಭಕ್ತಿ ಸಾರಲು ಹೀಗೊಂದು ಸಾಹಸೀ ನಡಿಗೆ]

ಬೃಹತ್ ಮೂರ್ತಿಯ ಹಿಂಭಾಗದಲ್ಲಿ ದುರ್ಗಾದೇವಿ ದೇವಸ್ಥಾನ, ಮುಂಭಾಗದಲ್ಲಿ ಪರಶುರಾಮ ಬೆಟ್ಟವಿದ್ದು ಎರಡು ಬೆಟ್ಟಗಳ ಮಧ್ಯೆ ಮಧ್ವಾಚಾರ್ಯರು ವಿರಾಜಮಾನರಾಗಿ ನಿಂತಿದ್ದಾರೆ. ಮೂರ್ತಿಯ ಕೆಳಭಾಗದಲ್ಲಿ ಮುಂದಿನ ದಿನಗಳಲ್ಲಿ ಧ್ಯಾನ- ಭಜನೆ, ಪ್ರವಚನಗಳು ನಡೆಯಲಿವೆ. ಕುಂಜಾರು ಗಿರಿಯ ತಪ್ಪಲಿನಲ್ಲಿ ಉದ್ಯಾನವನ ಸ್ಥಾಪನೆ ಮಾಡಲಿದ್ದು ಮಧ್ವಾಚಾರ್ಯರಿಗೆ ದಿನವೂ ಪೂಜೆ ಪುನಸ್ಕಾರ ನಡೆಯಲಿದೆ. ಮೇ ತಿಂಗಳಲ್ಲಿ ಲೋಕಾರ್ಪಣೆಯಾಗಲಿರುವ ಈ ಮೂರ್ತಿಯ ವಿಶೇಷದ ಬಗ್ಗೆ ಮಾಹಿತಿ ಇಲ್ಲಿದೆ.[ಉಡುಪಿಗೆ ಬಂತು ಕೇರಳ ಮಾದರಿಯ ಬೋಟ್ ಹೌಸ್]

ಮೂರು ಕೋಟಿ ವೆಚ್ಚ

ಮೂರು ಕೋಟಿ ವೆಚ್ಚ

ಎತ್ತರದಲ್ಲಿ ನಿಂತಿರುವ ಭಂಗಿಯಲ್ಲಿರುವ ಆಚಾರ್ಯರ ಮೂರ್ತಿ ಎಲ್ಲರನ್ನೂ ಸೆಳೆಯುತ್ತಿದೆ. ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಮೂರ್ತಿಯನ್ನು ನಿರ್ಮಾಣ ಮಾಡಿದ್ದು, ಪಲಿಮಾರು ಮಠಾಧೀಶ ವಿದ್ಯಾಧೀಶ ಸ್ವಾಮೀಜಿ ಇದರ ನೇತೃತ್ವ ವಹಿಸಿದ್ದಾರೆ. ಅದಮಾರು ಮಠ ಮತ್ತು ಸ್ಥಳೀಯರ ಸಹಕಾರದಿಂದ ಸುತ್ತಲಿನ ಜಮೀನನ್ನು ಖರೀದಿಸಿ ಈ ಮೂರ್ತಿಯನ್ನು ಸ್ಥಾಪನೆ ಮಾಡಲಾಗಿದೆ. ಉಡುಪಿಗೆ ಬರುವ ಧಾರ್ಮಿಕ ಪ್ರವಾಸಿಗರಿಗೆ ಮಧ್ವಮೂರ್ತಿಯ ವಿಶೇಷ ದರ್ಶನ ಸಿಗಲಿದೆ.[ಜಲಸಂರಕ್ಷಣೆಯ ಸಂಕಲ್ಪ ಮಾಡಿದ ಉಡುಪಿಯ ಜೋಸೆಫ್]

ಕೃಷ್ಣಮಠ ಸ್ಥಾಪಿಸಿದ ಆಚಾರ್ಯರು:

ಕೃಷ್ಣಮಠ ಸ್ಥಾಪಿಸಿದ ಆಚಾರ್ಯರು:

ಉಡುಪಿ ಅಂದ್ರೆ ಎಲ್ಲರಿಗೂ ನೆನಪಾಗೋದು ಕಡೆಗೋಲು ಶ್ರೀಕೃಷ್ಣ. ಕಡೆಗೋಲು ಶ್ರೀಕೃಷ್ಣನನ್ನು ಉಡುಪಿಯಲ್ಲಿ ಪ್ರತಿಷ್ಠಾಪನೆ ಮಾಡಿದವರು ಮಧ್ವಾಚಾರ್ಯರು. ಹೀಗಾಗಿ ಮಧ್ವಾಚಾರ್ಯರ ಜನ್ಮಸ್ಥಾನದಲ್ಲಿ ಆಚಾರ್ಯರ ಬೃಹತ್ ಪುತ್ಥಳಿ ಸ್ಥಾಪನೆ ಮಾಡಬೇಕೆಂಬ ಅಭಿಲಾಷೆಯಿಂದ ಪಲಿಮಾರು ಮಠ ಈ ಯೋಜನೆಯನ್ನು ಹಾಕಿಕೊಂಡಿತ್ತು. ಮುಂದಿನ ಪರ್ಯಾಯ ಪೀಠಾರೋಹಣ ಮಾಡಲಿರುವ ಪಲಿಮಾರು ಮಠಾಧೀಶ ವಿದ್ಯಾಧೀಶ ಸ್ವಾಮೀಜಿಯವರ ಹಲವು ಕನಸುಗಳಲ್ಲಿ ಇದೂ ಒಂದಾಗಿತ್ತು.[ಉಡುಪಿ: 32 ಅಡಿ ಎತ್ತರದ ಮಧ್ವಾಚಾರ್ಯರ ಏಕಶಿಲಾ ಪ್ರತಿಮೆ ಸ್ಥಾಪನೆ]

ಆಚಾರ್ಯರನ್ನು ಕಣ್ತುಂಬಿಸಿಕೊಳ್ಳೋಣ

ಆಚಾರ್ಯರನ್ನು ಕಣ್ತುಂಬಿಸಿಕೊಳ್ಳೋಣ

ಮಧ್ವಾಚಾರ್ಯರು ನೋಡಲು ಅತೀ ಸುಂದರವಾಗಿದ್ದರು. ಆಚಾರ್ಯರನ್ನು ಹನುಮ-ಭೀಮರ ಅವತಾರ ಎಂಬ ನಂಬಿಕೆಯಿದೆ. ಶಿಲ್ಪಿಯೊಬ್ಬರಿಗೆ ಮಧ್ವರೇ ಕಲ್ಪನಾ ಮೂರ್ತಿ. 32 ಲಕ್ಷಣಗಳು ಮಧ್ವರ ದೇಹದಲ್ಲಿತ್ತು. ಅದನ್ನು ಜಗತ್ತಿಗೆ ತೋರಿಸುವ ಸಲುವಾಗಿ 32 ಅಡಿ ಎತ್ತರ ಮೂರ್ತಿಯನ್ನು ಸ್ಥಾಪಿಸಲಾಗಿದೆ. ಸಂತ್ರಸಾರದ ಲಕ್ಷಣಗಳನ್ನು ಒಳಗೊಂಡಂತೆ ಮೂರ್ತಿಯನ್ನು ಕೆತ್ತಲಾಗಿದೆ. ಆಚಾರ್ಯರು ನಮ್ಮೆಲ್ಲರನ್ನು ಮತ್ತು ನಾವು ಆಚಾರ್ಯರನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗಿದೆ ಎಂದು ಪಲಿಮಾರು ಮಠಾಧೀಶ ವಿದ್ಯಾಧೀಶರು ಹೇಳಿದ್ದಾರೆ.

ಮೂರ್ತಿ ಕೆತ್ತಿದ್ದು ಯಾರು..?:

ಮೂರ್ತಿ ಕೆತ್ತಿದ್ದು ಯಾರು..?:

ದೇಶಾದ್ಯಂತ ಹಲವು ಬೃಹತ್ ಮೂರ್ತಿಗಳನ್ನು ಕೆತ್ತಿರುವ ಹಿರಿಯ ಹಾಗೂ ಪ್ರಸಿದ್ಧ ಶಿಲ್ಪಿ ಅಶೋಕ್ ಗುಡಿಗಾರು ಮತ್ತು ತಂಡ ಈ ಸುಂದರ ಶಿಲ್ಪದ ಕೆತ್ತನೆಯನ್ನು ಮಾಡಿದೆ. ಚೆನ್ನೈನ ಎಲ್ ಆಂಡ್ ಟಿ ಕಂಪನಿಯ ಇಂಜಿನಿಯರ್ ಗಳು ಮತ್ತು ಸಿಬ್ಬಂದಿ . ಸುಮಾರು 32 ತಿಂಗಳುಗಳ ಕಾಲ ಸುಂದರ ಮೂರ್ತಿ ಪ್ರತಿಷ್ಠಾಪಿಸುವ ಕಾರ್ಯದಲ್ಲಿ ತೊಡಗಿದ್ದರು. ಸಾವಿರಾರು ಮಂದಿ ಸ್ಥಳೀಯರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.

ಅಮೇರಿಕನ್ ಟೆಕ್ನಾಲಜಿ:

ಅಮೇರಿಕನ್ ಟೆಕ್ನಾಲಜಿ:

ಮಲಗಿದ್ದ ಮಧ್ವಾಚಾರ್ಯರ ಮೂರ್ತಿಯನ್ನು ಎದ್ದು ನಿಲ್ಲಿಸಲು ಅಮೇರಿಕಾದ ಕ್ರೈನ್ ಬಳಸಲಾಯ್ತು. ಚೆನ್ನೈನ ಎಲ್ ಆಂಡ್ ಟಿ ಕಂಪನಿಯ ಇಂಜಿನಿಯರ್ ಗಳು- ಕಾರ್ಮಿಕರು ಮೂರು ದಿನ ಈ ಕಾರ್ಯದಲ್ಲಿ ತೊಡಗಿದರು. ಬೃಹತ್ ಕ್ರೈನ್ ಗಳು, ರೋಡ್ ರೋಲರ್, ಜೆಸಿಬಿ, ಕಬ್ಬಿಣದ ರೋಪ್ ಗಳ ಸಹಿತ ಹತ್ತಕ್ಕೂ ಹೆಚ್ಚು ಇಂಜಿನಿಯರ್ ಗಳು, ಸುಮಾರು 25 ಸಿಬ್ಬಂದಿ ಮೂರ್ತಿ ಎತ್ತಿ, ಪೀಠದ ಮೇಲೆ ಪ್ರತಿಷ್ಠಾಪಿಸುವಲ್ಲಿ ತೊಡಗಿದ್ದರು. ಎರಡು ಬೆಟ್ಟಗಳು- ಸುತ್ತಲೂ ಹಚ್ಚ ಹಸುರಿನ ಕಾಡು. ಈ ನಡುವೆ ಮಧ್ವಾಚಾರ್ಯರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ.

English summary
The great saint Madhvacharya's statue carved in Pajaka region, Udupi district. This will be the world's largest statue of Madhvacharya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X