• search
 • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಜ್ಜಿ ಆಸ್ತಿಯನ್ನೇ ಲಪಟಾಯಿಸಿದ ಮೊಮ್ಮಗಳು: ಉಡುಪಿಯಲ್ಲೊಂದು ಮನ ಕಲಕುವ ಘಟನೆ

By ರಹೀಂ ಉಜಿರೆ
|

ಉಡುಪಿ, ಅಕ್ಟೋಬರ್ 7: ಮೋಸ, ವಂಚನೆ ಎಂಬುದು ಮನೆಯವರಿಂದಲೇ ನಡೆದರೆ ಏನಾಗುತ್ತದೆ ಎಂಬುದಕ್ಕೆ ಈ ವೃದ್ಧೆಯ ಇಂದಿನ‌ ಸ್ಥಿತಿಯೇ ಸಾಕ್ಷಿ. ತನ್ನ ಮೊಮ್ಮಗಳಿಂದಲೇ ವಂಚನೆಗೊಳಗಾಗಿ ಆಘಾತಗೊಂಡಿರುವ ಉಡುಪಿ ಜಿಲ್ಲೆಯ ಸಾಂತೂರು ಗ್ರಾಮದ 84 ವರ್ಷದ ಸೆಲೆಸ್ಟಿನ್ ಅಂದ್ರಾದೆ, ಇದೀಗ ನ್ಯಾಯ ಯಾಚಿಸಿ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಮೊರೆ ಹೋಗಿದ್ದಾರೆ.

ತಾನು ದುಡಿದು ಗಳಿಸಿದ ಜಮೀನು ಹಾಗೂ ಮನೆಯನ್ನು ಲಪಟಾಯಿಸಿದ್ದು ತಾನೇ ಎತ್ತಿ ಮುದ್ದಾಡಿದ ಮೊಮ್ಮಗಳು ಎಂದು ತಿಳಿಯುತ್ತಲೇ ಪಾರ್ಶ್ವವಾಯು ಪೀಡಿತಳಾಗಿರುವ ಈ ಹಿರಿಯ ಜೀವಕ್ಕೆ ಪೂರ್ಣ ಪ್ರಮಾಣದ ಕಾನೂನು ನೆರವು ನೀಡಲು ಪ್ರತಿಷ್ಠಾನ ಮುಂದಾಗಿದೆ.

 ಮಕ್ಕಳಿಗೆ ಆಸ್ತಿ ಬರೆದಿದ್ದ ವೃದ್ಧೆ

ಮಕ್ಕಳಿಗೆ ಆಸ್ತಿ ಬರೆದಿದ್ದ ವೃದ್ಧೆ

1967ರಲ್ಲಿ ಸೆಲೆಸ್ಟಿನ್ ಎರಡು ಎಕರೆ ಜಮೀನನ್ನು ಖರೀದಿಸಿದ್ದರು. ಕ್ರಮೇಣ ಗಂಡ ಗ್ರೆಗರಿ ಡಿಸೋಜರೊಂದಿಗೆ ಸೇರಿ ಮನೆಯನ್ನೂ ಕಟ್ಟಿದರು. ಬಾವಿಯನ್ನು ತೋಡಿದರು. ಕೃಷಿ ಆದಾಯದಿಂದಲೇ ನಾಲ್ಕೂ ಮಂದಿ ಮಕ್ಕಳನ್ನು ಸಾಕಿ ಬೆಳೆಸಿದರು. ಎಲ್ಲರಿಗೂ ಮದುವೆ ಮಾಡಿ ಸಂಸಾರ ಕಟ್ಟಿ ಕೊಟ್ಟದ್ದೂ ಆಯಿತು. ಕೆಲ ವರ್ಷದ ಹಿಂದೆ ಗಂಡ ಗ್ರೆಗರಿ ಸತ್ತಾಗ ಮುಂಬೈಯಲ್ಲಿ ದುಡಿಯುತ್ತಿದ್ದ ಹಿರಿಯ ಮಗ ರೋನಾಲ್ಡ್ ‍ರ ಸಂಸಾರವನ್ನು ಮನೆಗೆ ಕರೆಸಿಕೊಂಡರು. ವೀಲುನಾಮೆ ಬರೆಸಿದರು. ತನ್ನ ಜೀವಿತಾವಧಿ ಅನಂತರ ಮಕ್ಕಳ ನಡುವೆ ಗೊಂದಲ ಉಂಟಾಗದಿರಲೆಂದು ತನ್ನ ಆಸ್ತಿಯಲ್ಲಿ ನಾಲ್ಕು ಮಕ್ಕಳಿಗೂ ಸಮಪಾಲು ನೀಡಿ ವೀಲುನಾಮೆ ಬರೆಸಿದರು. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾಯಿಸಿದ್ದೂ ಆಯಿತು. ತಾಯಿ ಮಾಡಿದ ವ್ಯವಸ್ಥೆ ನಾಲ್ಕೂ ಮಕ್ಕಳಿಗೆ ತೃಪ್ತಿಯನ್ನು ತಂದಿತ್ತು.

ಮೈಸೂರಿನಲ್ಲಿ ಹಣದ ಆಸೆ ತೋರಿಸಿ ಸಾರ್ವಜನಿಕರಿಗೆ ವಂಚನೆ: ನಾಲ್ವರ ಬಂಧನ

 ಕೃಷಿ ಸಮೀಕ್ಷೆಯಿಂದ ಬಯಲಾಯ್ತು ಮೊಮ್ಮಗಳ ಮೋಸ

ಕೃಷಿ ಸಮೀಕ್ಷೆಯಿಂದ ಬಯಲಾಯ್ತು ಮೊಮ್ಮಗಳ ಮೋಸ

ಇದೀಗ ಇಪ್ಪತ್ತು ದಿನಗಳ ಹಿಂದೆ ಪಂಚಾಯತ್ ಅಧಿಕಾರಿಗಳು ಸರಕಾರಿ ಯೋಜನೆಯೊಂದಕ್ಕಾಗಿ ಕೃಷಿ ಸಮೀಕ್ಷೆಗೆ ಬಂದಾಗ ಮನೆ ಮಂದಿಗೆಲ್ಲ ಆಶ್ಚರ್ಯವೊಂದು ಕಾದಿತ್ತು. ಮನೆ ಹಾಗೂ ಜಮೀನು ಹಿರಿಯ ಮಗ ರೋನಾಲ್ಡರ ಮಗಳು ರೋಶನಿಯ ಹೆಸರಿನಲ್ಲಿದೆ ಎಂದು ತಿಳಿದೊಡನೆಯೇ ಪಾರ್ಶ್ವವಾಯು ಪೀಡಿತರಾದ ಸೆಲೆಸ್ಟಿನ್ ಇನ್ನೂ ಚೇತರಿಸಿಕೊಂಡಿಲ್ಲ.

ಹತ್ತು ವರ್ಷದ ಹಿಂದೆಯೇ ಮೊಮ್ಮಗಳು ರೋಶನಿ ಮದುವೆಯಾಗಿ ಗಂಡನ ಮನೆಗೆ ಹೋಗಿದ್ದಳು. ಗಂಡ ದುಬಾಯಿಯಲ್ಲಿ ಉದ್ಯೋಗದಲ್ಲಿದ್ದರೂ ಅವಳು ಮಾತ್ರ ಊರಿನಲ್ಲಿದ್ದ ಅತ್ತೆಯ ಮನೆಯಲ್ಲಿಯೇ ಇದ್ದಳು. ಆಗಾಗ ಅಜ್ಜಿಯ ಮನೆಗೆ ಬಂದು ಹೋಗುತ್ತಿದ್ದಳು. ಚಿಕ್ಕಂದಿನಿಂದಲೇ ಅಜ್ಜಿಗೆ ರೋಶನಿ ಪ್ರೀತಿಯ ಮೊಮ್ಮಗಳು. ಕೆಲ ಸಮಯದಿಂದ ಇದ್ದಕ್ಕಿಂತೆಯೇ ರೋಶನಿ ಕಣ್ಮರೆಯಾಗಿದ್ದಳು. ಮೊದಮೊದಲು ಸಂಪರ್ಕಕ್ಕೆ ಸಿಗುತ್ತಿದ್ದ ರೋಶನಿಯ ಮೊಬೈಲ್ ಕೂಡ ಸ್ತಬ್ದವಾಗಿತ್ತು.

 ಗೊತ್ತಿಲ್ಲದೇ ಸಹಿ ಪಡೆದಿದ್ದ ಮೊಮ್ಮಗಳು

ಗೊತ್ತಿಲ್ಲದೇ ಸಹಿ ಪಡೆದಿದ್ದ ಮೊಮ್ಮಗಳು

ಸಮೀಕ್ಷಾ ಆಧಿಕಾರಿಗಳ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ಆಸ್ತಿಗೆ ಸಂಬಂಧ ಪಟ್ಟ ಎಲ್ಲಾ ದಾಖಲೆಗಳ ಪ್ರತಿಗಳನ್ನು ಸಬ್ ರಿಜಿಸ್ಟ್ರಾರ್ ಕಚೇರಿಗಳಿಂದ ಪಡೆದುಕೊಂಡು ನೋಡಿದರೆ ಎಲ್ಲದರಲ್ಲೂ ರೋಶನಿಯದ್ದೇ ಹೆಸರು!

OLX ಹೆಸರಿನಲ್ಲಿ ಜನರಿಗೆ 12 ಲಕ್ಷ ರೂ. ವಂಚಿಸಿದ್ದವನ ಬಂಧನ

2019ರ ಜನವರಿ ತಿಂಗಳಲ್ಲಿ ಸಾಂತೂರಿನ ಮನೆಗೆ ಬಂದ ರೋಶನಿ ತಂದೆ ರೋನಾಲ್ಡರನ್ನೂ ಅಜ್ಜಿಯನ್ನೂ ಮೂಲ್ಕಿಯ ಯಾವುದೋ ಕಚೇರಿಗೆ ಕರೆದೊಯ್ದು ಕೆಲವು ಕಾಗದ ಪತ್ರಗಳಿಗೆ ಇಬ್ಬರ ಹೆಬ್ಬೆಟ್ಟು ಗುರುತು ಹಾಗೂ ಸಹಿ ಪಡೆದಿದ್ದಳು. ಇಬ್ಬರೂ ಅವಿದ್ಯಾವಂತರಾದ್ದರಿಂದ ಅವೆಲ್ಲ ಏನೆಂದು ತಿಳಿಯಲಿಲ್ಲ. ಪುನಃ ವಿಚಾರಿಸಲಾಗಿ "ರೈತರಿಗೆ ಸಾಲ ನೀಡುವ ಯೋಜನೆಯೊಂದು ಬಂದಿದೆ. ಅದಕ್ಕಾಗಿ ನೋಂದಣಿ ಮಾಡಲು ಬಂದಿದ್ದೇವೆ" ಎಂದಿದ್ದಳು ರೋಶನಿ.

  Sira ಹಾಗು R.R Nagar ಉಪಚುನಾವಣೆಗೆ ಕೈ ಅಭ್ಯರ್ಥಿಗಳು ಇವರೇ | Oneindia Kannada
   ಬೀದಿ ಪಾಲಾಗಿರುವ ಅಜ್ಜಿ

  ಬೀದಿ ಪಾಲಾಗಿರುವ ಅಜ್ಜಿ

  ಅದಾಗಿ ಮೂರನೇ ತಿಂಗಳಲ್ಲಿ ತಂದೆ ರೋನಾಲ್ಡ್ ಅವರನ್ನು ಪುನಃ ಅದೇ ಕಚೇರಿಗೆ ಕರೆದೊಯ್ದು ಅದೇ ತರಹದ ಸಹಿಗಳನ್ನು ಪಡೆದಿದ್ದಳು. ಅರ್ಥಾತ್, ರೋಶನಿಯು ಕೇವಲ ಮೂರೇ ತಿಂಗಳಲ್ಲಿ ಮೋಸದಿಂದ ಅಜ್ಜಿಯಿಂದ ಆಸ್ತಿಯನ್ನು ತಂದೆ ಹೆಸರಿಗೂ ಅಲ್ಲಿಂದ ಪುನಃ ಯಾರಿಗೂ ತಿಳಿಯದಂತೇ ತನ್ನ ಹೆಸರಿಗೂ ಮಾಡಿಕೊಂಡಿದ್ದಳು.

  ಇದೀಗ ಮೊಮ್ಮಗಳ ಮೋಸದಿಂದ ವೃದ್ಧೆ ಬೀದಿಪಾಲಾಗಿದ್ದಾರೆ. ಸೆಲೆಸ್ಟಿನ್ ಅಂದ್ರಾದೆ, ನ್ಯಾಯಕ್ಕಾಗಿ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಮೊರೆ ಹೋಗಿದ್ದಾರೆ.

  English summary
  The 84 year old Celestine Andrade of Santur village in Udupi district shocked by her grand daughter's fraud. She has now approached to Udupi Human Rights Foundation for justice
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X