ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ: ಬಂದ ನೋಡಿ ಧಾನ್ಯಗಳ ಗಣಪ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಸೆಪ್ಟೆಂಬರ್ 13: ಕೆಲವೊಂದು ದೇವರಿಗೆ ಹೀಗೆಯೇ ಎಂಬ ಚೌಟಕ್ಕು ಇರುತ್ತದೆ. ಹೀಗಿದ್ದರೆ ಮಾತ್ರ ಆತ ದೇವರು ಅಂತ ಕರೆಸಿಕೊಳ್ಳುತ್ತಾನೆ. ಆದ್ರೆ ಇವ ಹಾಗಲ್ಲ. ಇವನಿಗೆ ನಿರ್ದಿಷ್ಟತೆ ಇಲ್ಲ, ಹೇಗಿದ್ದರೂ ಇವನಿಗೊಂದು ಐಡೆಂಟಿಟಿ ಇದೆ. ಅವ ಇವ ಮತ್ಯಾರೂ ಅಲ್ಲ.., ಗಣೇಶ.

ವಿಘ್ನ ನಿವಾರಕನ ಹುಟ್ಟಿದ ದಿನ ಇವತ್ತು. ಇದೇ ಅಂಗವಾಗಿ ಉಡುಪಿಯ ಟಿವಿಎಸ್ ಶೋ ರೂಂ ನಲ್ಲಿ ಧಾನ್ಯ ಗಣೇಶ ಪ್ರತ್ಯಕ್ಷನಾಗಿದ್ದಾನೆ. 12 ಅಡಿ ಎತ್ತರದ, 6 ಅಡಿ ಅಗಲದ ಧಾನ್ಯಗಳಿಂದ ಮಾಡಿದ ಗಣಪತಿ ಈಗ ಎಲ್ಲರ ಕುತೂಹಲದ ಕೇಂದ್ರಬಿಂದು.

ವಿಸರ್ಜನೆಯ ಬಳಿಕವೂ ಗಿಡವಾಗಿ ನೆಲೆ ನಿಲ್ಲುವ ಪರಿಸರ ಸ್ನೇಹಿ ಗಣಪವಿಸರ್ಜನೆಯ ಬಳಿಕವೂ ಗಿಡವಾಗಿ ನೆಲೆ ನಿಲ್ಲುವ ಪರಿಸರ ಸ್ನೇಹಿ ಗಣಪ

ಶ್ರೀನಾಥ್ ಮಣಿಪಾಲ ಮತ್ತು ರವಿ ಹಿರೇಬೆಟ್ಟು - ಇಬ್ಬರು ಕಲಾವಿದರು ಸೇರಿ ಈ ಕಲಾಕೃತಿ ರಚಿಸಿದ್ದಾರೆ. 20 ಕೆಜಿ ಧಾನ್ಯಗಳನ್ನು ಉಪಯೋಗಿಸಿಕೊಂಡು ಈ ಗಣೇಶನನ್ನು ಸೃಷ್ಟಿ ಮಾಡಿದ್ದಾರೆ. ಕಡ್ಲೆಬೇಳೆ, ಹುರಿಗಡಲೆ, ಅವರೆ, ಬಟಾಣಿ, ಸಾಸಿವೆ, ಬೀನ್ಸ್, ಸಾಬಕ್ಕಿಯಿಂದ ಈ ವಿನಾಯಕ ರೆಡಿಯಾಗಿದ್ದಾನೆ.

Grains Ganesha in Udupis TVS showroom

ಸುಮಾರು 10 ದಿನ ಈ ಕೆಲಸದಲ್ಲಿ ತೊಡಗಿಕೊಂಡಿರುವ ಕಲಾವಿದರು, ಮೈದಾ ಹಿಟ್ಟಿನ ಅಂಟು ತಯಾರಿಸಿ ಧಾನ್ಯಗಳನ್ನು ಅಂಟಿಸಿದ್ದಾರೆ. ಒಂದು ವಾರ ಪ್ರದರ್ಶನಕ್ಕಿಟ್ಟು ಮತ್ತೆ ಬೇಳೆ, ಕಾಳು ಕಡ್ಲೆ- ಅವರೆಯನ್ನು ಆಹಾರವಾಗಿ ಉಪಯೋಗಿಸಬಹುದು.

Grains Ganesha in Udupis TVS showroom

ಗಣೇಶ ಚತುರ್ಥಿ ಸ್ಪೆಷಲ್: ಕರಾವಳಿಯ ಐತಿಹಾಸಿಕ ಆರು ವಿನಾಯಕ ದೇವಾಲಯಗಳ ರೌಂಡ್ ಅಪ್ಗಣೇಶ ಚತುರ್ಥಿ ಸ್ಪೆಷಲ್: ಕರಾವಳಿಯ ಐತಿಹಾಸಿಕ ಆರು ವಿನಾಯಕ ದೇವಾಲಯಗಳ ರೌಂಡ್ ಅಪ್

ಟಿವಿಎಸ್ ಶೋರೂಂನಲ್ಲಿ ಕಳೆದ ಐದು ವರ್ಷದಿಂದ ಬೇರೆ ಬೇರೆ ಕಾನ್ಸೆಪ್ಟ್ ನ ಗಣಪತಿಯನ್ನು ರವಿ ಮತ್ತು ಶ್ರೀನಾಥ್ ತಯಾರಿಸಿಕೊಂಡು ಬಂದಿದ್ದಾರೆ.ಈ ಬಾರಿಯ ವಿಶೇಷ, ಧಾನ್ಯಗಳ ಗಣಪ.

English summary
Artists make Ganesha statue with grains in Udupi. two artists Srinath and Ravi make this statue in 10 days. This Ganesha statue is 12 feet hight and 6 feet width.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X