• search
  • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉಡುಪಿಯ ಈ ತಾಯಿ-ಮಗನ ಅಭಿಯಾನವನ್ನು ಪ್ರತಿಯೊಬ್ಬರೂ ಮೆಚ್ಚಲೇಬೇಕು..!

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಸೆಪ್ಟೆಂಬರ್.14: ಇದು ತಾಯಿ -ಮಗ ಹಮ್ಮಿಕೊಂಡಿರುವ ವಿಶಿಷ್ಟ ಅಭಿಯಾನ. ಇದರ ಹಿಂದೆ ಒಂದು ಉತ್ತಮ ಉದ್ದೇಶವೂ ಅಡಗಿದೆ. ವಿಶೇಷವಾಗಿ ಅಪ್ರಾಪ್ತ ಬಾಲಕಿಯರು ಮತ್ತು ಯುವತಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಮೆಟ್ಟಿ ನಿಲ್ಲುವ ಸಂಕಲ್ಪ ಈ ಅಭಿಯಾನದ ಹಿಂದಿದೆ.

ಯಾರು ಈ ತಾಯಿ ಮಗ ? ಇವರು ಹಮ್ಮಿಕೊಂಡಿರುವ ಅಭಿಯಾನವಾದ್ರೂ ಏನು ಅಂತೀರಾ?. ಈ ಲೇಖನ ಓದಿ ನಿಮಗೇ ತಿಳಿಯುತ್ತದೆ.

ಬೆಂಗಳೂರು: ಜೆಜೆ ನಗರದಲ್ಲಿ 5ರ ಬಾಲೆ ಮೇಲೆ ಲೈಂಗಿಕ ದೌರ್ಜನ್ಯಬೆಂಗಳೂರು: ಜೆಜೆ ನಗರದಲ್ಲಿ 5ರ ಬಾಲೆ ಮೇಲೆ ಲೈಂಗಿಕ ದೌರ್ಜನ್ಯ

ರಾಷ್ಟ್ರೀಯ ಅಪರಾಧ ದಳದ ಇತ್ತೀಚಿನ ವರದಿ ಬೆಚ್ಚಿ ಬೀಳಿಸುವಂಥದ್ದು. ಈ ವರದಿಯ ಪ್ರಕಾರ ಅತ್ಯಾಚಾರಕ್ಕೆ ಒಳಗಾಗುವ ಮಹಿಳೆಯರಲ್ಲಿ ಶೇ.40 ರಷ್ಟು ಅಪ್ರಾಪ್ತ ವಯಸ್ಸಿನ ಬಾಲಕಿಯರೇ ಇದ್ದಾರೆ. ದೇಶದಲ್ಲಿ ಪ್ರತೀ ಗಂಟೆಗೆ ನಾಲ್ಕು ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿವೆ.

ಇನ್ನು ದಾಖಲಾಗದ ಬೆಳಕಿಗೆ ಬಾರದ ಕಿರುಕುಳಗಳು ಅವೆಷ್ಟೋ? ಹಾಗಾದರೆ ಮಹಿಳಾ ದೌರ್ಜನ್ಯ ಕಡಿಮೆಯಾಗುವುದೆಂದು? ಇದಕ್ಕೊಂದು ಪರಿಹಾರ ಬೇಡವೇ? ಈ ಪ್ರಶ್ನೆ ಇಟ್ಟುಕೊಂಡು ವಿಶಿಷ್ಟ ಅಭಿಯಾನವನ್ನು ಕೈಗೊಂಡವರೇ ಈ ತಾಯಿ ಮಗ.

ಸ್ವರಕ್ಷಾ ಫಾರ್ ವಿಮೆನ್ ಎಂಬ ಘೋಷವಾಕ್ಯದಡಿ ಕಳೆದ ನಾಲ್ಕು ವರ್ಷಗಳಿಂದ ಕಾರ್ತಿಕ್ ಎಸ್ ಕಟೀಲ್, ಮತ್ತವರ ತಾಯಿ ಶೋಭಲತಾ ಬಾಲಕಿಯರು ಮತ್ತು ಯುವತಿಯರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

 ಇನ್ಫೋಗ್ರಾಫಿಕ್ಸ್: ಹೊರ ಬಿದ್ದಿದೆ ಭಾರತದ ಬಗ್ಗೆ ಆಘಾತಕಾರಿ ಸಂಗತಿ ಇನ್ಫೋಗ್ರಾಫಿಕ್ಸ್: ಹೊರ ಬಿದ್ದಿದೆ ಭಾರತದ ಬಗ್ಗೆ ಆಘಾತಕಾರಿ ಸಂಗತಿ

ಮುಖ್ಯವಾಗಿ ದೌರ್ಜನ್ಯಗಳಾದಾಗ ಹೇಗೆ ತಮ್ಮನ್ನು ರಕ್ಷಿಸಿಕೊಳ್ಳಬೇಕು? ಸ್ಥಳದಲ್ಲಿ ತಕ್ಷಣಕ್ಕೆ ಪ್ರತಿರೋಧಿಸುವ ಟೆಕ್ನಿನಿಕ್ ಗಳೇನು ಎಂಬುದನ್ನು 11 ವರ್ಷದ ಬಾಲಕಿಯರಿಂದ ಹಿಡಿದು 60 ವರ್ಷದ ಮಹಿಳೆಯರವರೆಗೆ ಹೇಳಿಕೊಡುತ್ತಿದ್ದಾರೆ.

Girls should be appreciate Mother, Sons campaign in Udupi

ನೀವು ನಂಬಲಿಕ್ಕಿಲ್ಲ, ಕಳೆದ ನಾಲ್ಕು ವರ್ಷದಲ್ಲಿ ಇವರಿಬ್ಬರು 430 ಸಂಸ್ಥೆಗಳ ಸುಮಾರು ಒಂದು ಲಕ್ಷ ಮೂವತ್ತು ಸಾವಿರಕ್ಕೂ ಅಧಿಕ ಬಾಲಕಿಯರಿಗೆ ,ಯುವತಿಯರಿಗೆ ಮತ್ತು ಮಹಿಳೆಯರಿಗೆ ತರಬೇತಿ ನೀಡಿದ್ದಾರೆ. ಈ ತಾಯಿ ಮಗ ನಡೆಸಿರುವ ಕಾರ್ಯಾಗಾರಗಳು ಏಳುನೂರಕ್ಕೂ ಹೆಚ್ಚು.

ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲೂ ಕಾರ್ಯಾಗಾರಗಳನ್ನು ನಡೆಸಿ ಮಹಿಳೆಯರಿಗೆ ಸ್ವರಕ್ಷಣೆಯ ಪಾಠವನ್ನು ಸದ್ದಿಲ್ಲದೆ ಹೇಳಿ ಕೊಟ್ಟಿದ್ದಾರೆ. ಇದೀಗ ಮತ್ತಷ್ಟು ಪರಿಣಾಮಕಾರಿಯಾಗಿ ಈ ಕಾರ್ಯ ನಡೆಸಲು ಇವರಿಬ್ಬರು ಮಿಕ್ಸ್ ಡ್ ಮಾರ್ಷಲ್ ಆರ್ಟ್ಸ್ ನ್ನು ಪರಿಚಯಿಸುತ್ತಿದ್ದಾರೆ.

 ವಿಶ್ವದಲ್ಲೇ ಮಹಿಳೆಯರಿಗೆ ಭಾರತ ಅತ್ಯಂತ ಅಪಾಯಕಾರಿ ದೇಶ ವಿಶ್ವದಲ್ಲೇ ಮಹಿಳೆಯರಿಗೆ ಭಾರತ ಅತ್ಯಂತ ಅಪಾಯಕಾರಿ ದೇಶ

ಬಹುಶಃ ರಾಜ್ಯದಲ್ಲಿ ಹೆಣ್ಣುಮಕ್ಕಳಿಗೆ ಇಂತಹದ್ದೊಂದು ತರಬೇತಿ ಬೇರೆಲ್ಲೂ ಸಿಗುತ್ತಿಲ್ಲ. ಕರಾಟೆ ಸಹಿತ ಮಾರ್ಷಲ್ ಆರ್ಟ್ಸ್ ನ ಕೆಲವೊಂದು ಟಿಪ್ಸ್ ಗಳನ್ನು ಕಲಿಸಿ ಹೆಣ್ಣುಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಹೊಸ ಪ್ರಯತ್ನ ಇದಾಗಿದೆ.

ಉಡುಪಿಯ ಮಣಿಪಾಲ ಶಿಕ್ಷಣ ಕಾಶಿಯಲ್ಲಿ ಸಾವಿರಾರು ವಿದ್ಯಾರ್ಥಿನಿಯರಿದ್ದಾರೆ. ಇವರನ್ನೇ ಗುರಿಯಾಗಿಟ್ಟುಕೊಂಡು ತಾಯಿ ಮಗ ಮಣಿಪಾಲದಲ್ಲಿ ಮಿಕ್ಸ್ ಡ್ ಮಾರ್ಷಲ್ ಆರ್ಟ್ಸ್ ತರಬೇತಿ ಕೇಂದ್ರ ಪ್ರಾರಂಭಿಸಿದ್ದಾರೆ. ಬಡ ಹೆಣ್ಣುಮಕ್ಕಳಿಗೂ ನೆರವಾಗುವ ಉದ್ದೇಶ ಈ ಅಕಾಡೆಮಿಯ ಹಿಂದೆ ಇದೆ.

ಇಂತಹ ಅಪೂರ್ವ ಅಭಿಯಾನದ ಮೂಲಕ ಹೆಣ್ಣುಮಕ್ಕಳಿಗೆ ಆತ್ಮರಕ್ಷಣೆಯ ಕಲೆ ಕಲಿಸೋ ಈ ತಾಯಿ ಮಗನಿಗೆ ಪ್ರೋತ್ಸಾಹ ನೀಡಬೇಕಾಗಿದೆ.

English summary
This is a special campaign of mother and son. There is also a good purpose behind it. This campaign behind intention is preventing minor girls and young women against Violence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X