ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲ್ಪೆ ಬೋಟ್ ಬಲೆಗೆ ಬಿದ್ದ ರಕ್ಕಸ ಗಾತ್ರದ ಅಪರೂಪದ ತೊರಕೆ ಮೀನು!

|
Google Oneindia Kannada News

ಉಡುಪಿ, ಮೇ 13:ಉಡುಪಿಯ ಮಲ್ಪೆ ಬಂದರಿನ ಮೀನುಗಾರಿಕಾ ಬೋಟ್ ಬಲೆಗೆ ಬಿದ್ದ ಭಾರೀ ಗಾತ್ರದ ಮೀನು ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷಯವಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮಲ್ಪೆ ಬಂದರಿನ ಮೀನುಗಾರಿಕಾ ಬೋಟ್ ಅಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ಭಾರೀ ಗಾತ್ರದ ಅಪರೂಪದ 'ತೊರಕೆ' ಮೀನು ಬಲೆಗೆ ಸಿಲುಕಿದೆ.

ಮಟ್ಟು ಕಡಲ ತೀರದಲ್ಲಿ ಮೀನಿನ ಬುಗ್ಗೆ ಕಂಡು ಚಕಿತಗೊಂಡ ಮೀನುಗಾರರುಮಟ್ಟು ಕಡಲ ತೀರದಲ್ಲಿ ಮೀನಿನ ಬುಗ್ಗೆ ಕಂಡು ಚಕಿತಗೊಂಡ ಮೀನುಗಾರರು

ಆಳ ಸಮುದ್ರ ಮೀನುಗಾರಿಕೆ ನಡೆಸುವ ದಿವ್ಯಾಂಶಿ ಎಂಬ ಹೆಸರಿನ ಬೋಟಿಗೆ ಬಂಪರ್ ಲಾಟರಿ ಹೊಡೆದಿದೆ. ಬಲೆಗೆ ಸಿಕ್ಕ ತೊರಕೆ ಜಾತಿಯ ರಕ್ಕಸ ಗಾತ್ರದ ಮೀನು ಬರೋಬ್ಬರಿ 1.220ಕೆ.ಜಿಗೂ ಅಧಿಕ ಭಾರವಿದೆ. ಈ ಗಾತ್ರದ ಮೀನು ಸಿಗೋದು ಬಲು ಅಪರೂಪವೇ ಸರಿ.

Giant stingray fish caught in Udupi

ಮಿಥುನ್ ಕುಂದರ್ ಈ ಬೋಟಿನ ಮಾಲೀಕರು. ಬಲೆಗೆ ಸಿಕ್ಕ ಈ ಗಜಗಾತ್ರದ ಮೀನನ್ನು ದಡಕ್ಕೆ ಎಳೆಯಲು ಹರಸಾಹಸ ಪಡಬೇಕಾಯ್ತು. ಕ್ರೈನ್ ನ ಸಹಾಯದಿಂದ ಎತ್ತಿ ಮಲ್ಪೆ ಬಂದರಿಗೆ ಸಾಗಿಸಲಾಯ್ತು. ಬಳಿಕ ಉಡುಪಿಯ ಮಾರುಕಟ್ಟೆಗೆ ಈ ಮೀನು ಸೇಲ್ ಆಗಿದೆ. ಈ ಒಂದು ಮೀನಿನ ಬೆಲೆ ಐವತ್ತು ಸಾವಿರಕ್ಕೂ ಅಧಿಕ ಇರಬಹುದು ಎಂದು ಅಂದಾಜಿಸಲಾಗಿದೆ.

ಕುಂದಾಪುರದ ಕೋಡಿ ಸಮುದ್ರ ತೀರಕ್ಕೆ ಹಾರಿಬಂದ ಲೆಕ್ಕವಿಲ್ಲದಷ್ಟು ಮೀನುಗಳುಕುಂದಾಪುರದ ಕೋಡಿ ಸಮುದ್ರ ತೀರಕ್ಕೆ ಹಾರಿಬಂದ ಲೆಕ್ಕವಿಲ್ಲದಷ್ಟು ಮೀನುಗಳು

ಇಷ್ಟು ಬೃಹತ್‌ ಗಾತ್ರದ ಮೀನು ಕಾಣಸಿಗುವುದು ಬಲು ಅಪರೂಪ ಎನ್ನಲಾಗಿದ್ದು, ನೋಡಲು ಬಹಳಷ್ಟು ಜನ ಸೇರಿದ್ದರು. ಈ ಕುರಿತ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್‌ ಆಗಿದೆ. ತೊರಕೆ ಮೀನಿನ ಟೇಸ್ಟ್ ತಿಂದವರಿಗೇ ಗೊತ್ತು. ಈ ಗಜಗಾತ್ರದ ಮೀನು ಸಾವಿರಾರು ಮತ್ಸ್ಯಪ್ರಿಯರ ಹೊಟ್ಟೆ ಸೇರಿ ಸಂತೃಪ್ತಿ ನೀಡೊದಂತೂ ಖಂಡಿತ.

English summary
Deep sea fishing boat of Malpe caught giant stingray fish in its net. The video of this giant fish viral in social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X