ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ; ಸುಂದರವಾಯಿತು ತ್ಯಾಜ್ಯ ಎಸೆಯುವ ಜಾಗ!

|
Google Oneindia Kannada News

ಉಡುಪಿ, ಅಕ್ಟೋಬರ್ 19; ಉಡುಪಿ ಜಿಲ್ಲಾ ಪಂಚಾಯತಿ ಸ್ವಚ್ಛ ಭಾರತ ಮಿಷನ್ (ಗ್ರಾ) ಯೋಜನೆಯಡಿ ಪರಿಣಾಮಕಾಗಿಯಾಗಿ ಕೆಲಸ ಮಾಡುತ್ತಿದೆ. ಜಿಲ್ಲೆಯಲ್ಲಿ ಇದುವರೆಗೆ 150ಕ್ಕೂ ಹೆಚ್ಚು ಕಸವನ್ನು ಹಾಕುತ್ತಿದ್ದ ಜಾಗವನ್ನು ನಿರ್ಮೂಲನಾ ಮಾಡಲಾಗಿದೆ.

ಯೋಜನೆಯಡಿ ಜಿಲ್ಲೆಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಅದರಲ್ಲೂ ಮುಖ್ಯವಾಗಿ ರಸ್ತೆ, ಬಸ್ ಸ್ಟಾಂಡ್, ನದಿಯ ಪಕ್ಕದಲ್ಲಿ ತ್ಯಾಜ್ಯ ಎಸೆಯುವ ಜಾಗವನ್ನು ಗುರುತಿಸಿ black spot ಸ್ವಚ್ಛಗೊಳಿಸುವ ಕಾರ್ಯ ಮಾಡಲಾಗುತ್ತಿದೆ.

ಕಸ ಗುಡಿಸುತ್ತಿದ್ದ ಮಹಿಳೆ ಈಗ ರಾಜಸ್ಥಾನದ ಜಿಲ್ಲಾಧಿಕಾರಿ!ಕಸ ಗುಡಿಸುತ್ತಿದ್ದ ಮಹಿಳೆ ಈಗ ರಾಜಸ್ಥಾನದ ಜಿಲ್ಲಾಧಿಕಾರಿ!

ಜಿಲ್ಲಾ ಪಂಚಾಯಿತಿ ಕಾರ್ಯಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರಕಿದ್ದು, ಜಿಲ್ಲೆಯಲ್ಲಿ ಇದುವರೆಗೆ 150ಕ್ಕೂ ಹೆಚ್ಚು ಕಡೆಗಳಲ್ಲಿ ಕಸ ಎಸೆಯುತ್ತಿದ್ದ ಜಾಗವನ್ನು ಸ್ವಚ್ಛಗೊಳಿಸಲಾಗಿದೆ. ಒಟ್ಟು 55 ಕಡೆಗಳಲ್ಲಿ black spot ಇರುವ ಬಗ್ಗೆ ಜನರು ವಾಟ್ಸಪ್ ಮೂಲಕ ಜಿಲ್ಲಾ ಪಂಚಾಯಿತಿಗೆ ಮಾಹಿತಿ ನೀಡಿದ್ದರು.

ಗುತ್ತಿಗೆದಾರನ ಮೇಲೆ ಕಸ ಸುರಿಸಿದ ಶಿವಸೇನೆಯ ಶಾಸಕ: ವಿಡಿಯೋ ವೈರಲ್‌ ಗುತ್ತಿಗೆದಾರನ ಮೇಲೆ ಕಸ ಸುರಿಸಿದ ಶಿವಸೇನೆಯ ಶಾಸಕ: ವಿಡಿಯೋ ವೈರಲ್‌

Garbage Black Spots At Udupi Now Clean Place

ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಗ್ರಾಮೀಣ ಭಾಗಕ್ಕೆ ಸೇರಿದ 42ರಲ್ಲಿ 40 ಅನ್ನು ಸಂಪೂರ್ಣ ಸ್ವಚ್ಛಗೊಳಿಸಲಾಗಿದೆ. ಉಳಿದಂತೆ ನಗರ ವ್ಯಾಪ್ತಿಗೆ ಸೇರಿದ ಬ್ಲಾಕ್ ಸ್ಟಾಟ್‌ಗಳ ಬಗ್ಗೆ ನಗರಸಭೆಗೆ ಮಾಹಿತಿ ನೀಡಲಾಗಿದೆ.

ಬೆಂಗಳೂರು ನಗರದ ಕಸ ನಿರ್ವಹಣೆಗೆ ಬಿಬಿಎಂಪಿ ಹೊಸ ಪ್ರಯತ್ನ ಬೆಂಗಳೂರು ನಗರದ ಕಸ ನಿರ್ವಹಣೆಗೆ ಬಿಬಿಎಂಪಿ ಹೊಸ ಪ್ರಯತ್ನ

ಸುಮಾರು 100 ಕ್ಕೂ ಹೆಚ್ಚು ಕಡೆಗಳಲ್ಲಿ ತ್ಯಾಜ್ಯ ಎಸೆಯುವ ಜಾಗಗಳನ್ನು ಗ್ರಾಮ ಪಂಚಾಯತಿಗಳು ಸ್ವತಃ ಗುರುತಿಸಿದ್ದು, ಅದನ್ನು ಸ್ವಚ್ಛಗೊಳಿಸಲಾಗಿದ್ದು , ಬಹುತೇಕ ಕಡೆಗಳಲ್ಲಿ ಗಿಡ ನೆಡುವುದು, ಸಿಸಿಟಿವಿ ಅಳವಡಿಕೆ, ಬ್ಯಾನರ್, ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ.

Garbage Black Spots At Udupi Now Clean Place

ಕೋಟೇಶ್ವರ, ಕೋಡಿಬೆಟ್ಟು, ಬೊಮ್ಮರಬೆಟ್ಟು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಸ ಎಸೆಯುವ ಜಾಗವನ್ನು ಸ್ವಚ್ಛಗೊಳಿಸಲಾಗಿದೆ ಮತ್ತು ಕೆಲವಡೆ ಅದನ್ನು ಹೂದೋಟವಾಗಿ ಪರಿವರ್ತಿಸಿ ಅದಕ್ಕೆ ಕಲಾತ್ಮಕತೆಯ ಸ್ಪರ್ಶ ನೀಡಲಾಗಿದೆ.

ಕಸ ಎಸೆಯುವ ಜಾಗವನ್ನು ಗುರುತಿಸಿ ಮಾಹಿತಿ ನೀಡುವ ಕಾರ್ಯಕ್ಕೆ ಜನರು ಅತ್ಯುತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಕೆಲವು ಕಡೆಗಳಲ್ಲಿ ತ್ಯಾಜ್ಯ ಎಸೆದವರಿಗೆ ದಂಡ ವಿಧಿಸುವುದರೊಂದಿಗೆ ಅವರಿಂದಲೇ ಸ್ವಚ್ಛತಾಕಾರ್ಯ ನಡೆಸುವ ಕಾರ್ಯವೂ ನಡೆಯುತ್ತಿದೆ.

ಸಿದ್ಧಾಪುರ ಗ್ರಾಮ ಪಂಚಾಯಿತಿಯಲ್ಲಿ ಸ್ಮಶಾನದ ಬಳಿ ತ್ಯಾಜ್ಯ ಎಸೆದವರನ್ನು ಪತ್ತೆ ಹಚ್ಚಿ 1000 ರೂ. ದಂಡ ವಿಧಿಸಲಾಗಿದೆ. ಸಾಣೂರು ಗ್ರಾಮ ಪಂಚಾಯತಿಯಲ್ಲಿ ರೂ. 2000, ಬಡಾ ಗ್ರಾಮ ಪಂಚಾಯತಿಯಲ್ಲಿ 2000 ರೂ. ದಂಡ ವಿಧಿಸಲಾಗಿದೆ.

ಕೋಡಿಬೆಟ್ಟು ಗ್ರಾಮ ಪಂಚಾಯತಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಸ ಎಸದವರನ್ನು ಪತ್ತೆ ಹಚ್ಚಿ ಅವರಿಂದಲೇ ಕಸ ಹೆಕ್ಕಿಸುವ ಕಾರ್ಯವೂ ನಡೆದಿದೆ. ಅಲೆವೂರು ಗ್ರಾಮ ಪಂಚಾಯತಿಯಲ್ಲಿ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆದವರನ್ನು ಪತ್ತೆ ಮಾಡಿ ಅವರಿಂದಲೇ ಕಸ ಹೆಕ್ಕಿಸಿ 2000 ರೂ. ದಂಡ ಕೂಡ ವಿಧಿಸಲಾಗಿದೆ.

ಮುಂದಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವವರ ಪೋಟೋ/ ಕಸ ತಂದು ಸುರಿಯುವ ವಾಹನಗಳ ಪೋಟೋ/ ಕಸ ಬಿದ್ದಿರುವ ಜಾಗದ ಪೋಟೋಗಳನ್ನು ಮತ್ತು ಸ್ಥಳದ ಮಾಹಿತಿಯನ್ನು ಜನರು 9483330564 ಸಂಖ್ಯೆಗೆ ವಾಟ್ಸಪ್ ಮಾಡಬಹುದಾಗಿದೆ. ಮಾಹಿತಿ ನೀಡಿದವರಿಗೆ ಗ್ರಾಮ ಪಂಚಾಯತಿ ಸೂಕ್ತ ಬಹುಮಾನ ನೀಡಲಿದೆ. ಈ ಮಾಹಿತಿ ನೀಡಿದವರ ಮೊಬೈಲ್ ಸಂಖ್ಯೆ ಮತ್ತು ಹೆಸರನ್ನು ಬಹಿರಂಗ ಪಡಿಸುವುದಿಲ್ಲ.

ಜಿಲ್ಲೆಯಲ್ಲಿ ಕಸ ಸುರಿಯುವ ಜಾಗದ ಮಾಹಿತಿ ನೀಡಿ 'ನಮ್ಮ ಊರು ಸ್ವಚ್ಛ ಊರು' ಅಭಿಯಾನವನ್ನು ಮತ್ತಷ್ಟು ಯಶಸ್ವಿಗೊಳಿಸಿ ಎಂದು ಕರೆ ನೀಡಲಾಗಿದೆ.

Recommended Video

ಪಾಕ್ ಮುಂದೆ ಭಾರತ ಸೋಲೋದು ಗ್ಯಾರೆಂಟಿ ಅಂತಾ ಸೆಹ್ವಾಗ್ ಹೇಳಿದ್ಯಾಕೆ? | Oneindia Kannada

ಮತ್ತೆ ಚಾಲನೆ; ಕೋವಿಡ್ ಕಾರಣದಿಂದ ಸ್ಥಗಿತಗೊಂಡಿರುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಅಭಿಯಾನವನ್ನು ಉಡುಪಿ ಜಿಲ್ಲೆಯಲ್ಲಿ ಪುನಃ ಆರಂಭಿಸಲಾಗಿದೆ. ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ಪ್ರಪ್ರಥಮವಾಗಿ ಜಡ್ಕಲ್ ಗ್ರಾಮ ಪಂಚಾಯಿತಿಯಲ್ಲಿ ಅಪರ ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು. ತಹಸೀಲ್ದಾರ್ ಬೈಂದೂರು, ಅಧ್ಯಕ್ಷರು ಗ್ರಾಮ ಪಂಚಾಯತ ಜಡ್ಕಲ್ ಹಾಗೂ ಸದಸ್ಯರು ಹಾಗೂ ಜಿಲ್ಲಾ ಮಟ್ಟದ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ಜೊತೆ ಅಭಿಯಾನ ಆರಂಭಿಸಲಾಗಿದೆ.

English summary
Under Udupi zilla panchayat swachh bharat mission garbage black spots turned into clean place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X