ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಬಂದ್ರೂ ಕಾವಡಿಯಲ್ಲಿ ಕೋಳಿ ಅಂಕ ನಿಂತಿಲ್ಲ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಏಪ್ರಿಲ್ 07: ಕೊರೊನಾ ವೈರಸ್ ನಿಂದಾಗಿ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಜೊತೆಗೆ ಕೊರೊನಾ ತಡೆಯಲು ಸತತ ಹಲವು ಪ್ರಯತ್ನಗಳನ್ನೂ ನಡೆಸಲಾಗಿದೆ. ಮನೆ ಬಿಟ್ಟು ಬೀದಿಗೆ ಬರದಂತೆ ಮನವಿಯನ್ನೂ ಮಾಡಿಕೊಳ್ಳಲಾಗುತ್ತಿದೆ. ಆದರೆ ಇಷ್ಟಾದರೂ ಜನ ಕೇಳುತ್ತಿಲ್ಲ. ಬೀದಿಗಳಲ್ಲಿ ಸುಖಾ ಸುಮ್ಮನೆ ಓಡಾಡುತ್ತಿದ್ದಾರೆ.

ಉಡುಪಿಯಲ್ಲಿ ಓಡಾಡುವುದು ಮಾತ್ರವಲ್ಲ, ಕೊರೊನಾ ನಡುವೆಯೂ ಕೋಳಿ ಅಂಕ ನಡೆಸಿರುವುದು ತಿಳಿದುಬಂದಿದೆ. ಜೂಜುಕೋರರು ಕೊರೊನಾ ಬಂದರೂ ತಮ್ಮ ಚಾಳಿ ಬಿಟ್ಟಿಲ್ಲ. ಬ್ರಹ್ಮಾವರ ತಾಲೂಕು ಕಾವಡಿ ಗ್ರಾಮದ ಹೌರಾಲಿನಲ್ಲಿ ಇಂದು ಜನ ಗುಂಪು ಸೇರಿ‌ ಕೋಳಿ ಅಂಕ ನಡೆಸುತ್ತಿದ್ದುದಾಗಿ ತಿಳಿದುಬಂದಿದೆ.

ಉಪ್ಪಿನಂಗಡಿ ಕಾಲೇಜುಗಳ ಮೇಲೆ ಪೊಲೀಸರ ದಾಳಿ: 24 ಮೊಬೈಲ್ ವಶ ಉಪ್ಪಿನಂಗಡಿ ಕಾಲೇಜುಗಳ ಮೇಲೆ ಪೊಲೀಸರ ದಾಳಿ: 24 ಮೊಬೈಲ್ ವಶ

ಇಲ್ಲಿನ ಮಹಾಲಿಂಗೇಶ್ವರ ದೇವಸ್ಥಾನ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಗುಂಪು ಸೇರಿ ಕೋಳಿಗಳ ಕಾಲಿಗೆ ಹರಿತವಾದ ಬ್ಲೇಡ್‌ ಕಟ್ಟಿ ಜೂಜು ಆಡುತ್ತಿದ್ದುದು ತಿಳಿದುಬಂದಿದ್ದು, ಜುಗಾರಿ ಆಡುತ್ತಿದ್ದ ಏಳು ಮಂದಿಯನ್ನು ಬಂಧಿಸಲಾಗಿದೆ. ಕೋಟ ಪೊಲೀಸರು ಕಾರ್ಯಾಚರಣೆ ನಡೆಸಿ ಏಳು ಮಂದಿಯನ್ನು ಬಂಧಿಸಿದ್ದಾರೆ. ಇಬ್ಬರು ಸ್ಥಳದಲ್ಲೇ ಬೈಕ್ ಬಿಟ್ಟು ಪರಾರಿಯಾಗಿದ್ದಾರೆ.

Gambling Inbetween Coronavirus Lockdown In Bramhavara

ಜುಗಾರಿಗೆ ಬಳಸಿದ 6,880 ರೂಪಾಯಿ, 2 ಕೋಳಿಗಳು ಹಾಗೂ 8 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ

English summary
Lockdown has been imposed to stop spreading of coronavirus. But still people involved in gambling inbetween lockdown in bramhavara of udupi district,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X