• search
 • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಎದ್ದು, ಬಿದ್ದು, ಹೋರಾಡಿ, ಗೆದ್ದು ಬಾ ಗೆಳೆಯ' ಮೊದಲ ರಾತ್ರಿಗೆ ಬ್ಯಾನರ್ ಮೂಲಕ ವಿಶ್

|
Google Oneindia Kannada News

ಸಾಮಾನ್ಯವಾಗಿ ಗೆಳೆಯರು ಮದುವೆ, ಹುಟ್ಟಿದ ಹಬ್ಬಕ್ಕೆ ಬ್ಯಾನರ್‌ಗಳನ್ನು ಹಾಕಿ ಶುಭಹಾರೈಸುವುದನ್ನು ನಾವು ನೋಡಿದ್ದೇವೆ ಕೇಳಿದ್ದೇವೆ. ಇನ್ನೂ ಹೆಚ್ಚು ಆತ್ಮಿಯರಾಗಿದ್ದರೆ ಅವರ ಕಾಲದ ನಂತರವೂ ಬ್ಯಾನರ್ ಹಾಕಿರುವುದಿದೆ. ಆದರೆ ಮೊದಲ ರಾತ್ರಿಗೆ ಬ್ಯಾನರ್ ಹಾಕಿ ಶುಭಕೋರಿರುವುದನ್ನು ನೀವು ಎಲ್ಲಾದರು ನೋಡಿದ್ದೀರಾ? ಈ ಪ್ರಶ್ನೆ ನಿಮಗೆ ಆಶ್ಚರ್ಯ ಮತ್ತು ಮುಜುಗರ ತಂದರೂ ಇಂಥಹದೊಂದು ಬ್ಯಾನರ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬ್ಯಾನರ್ ಫೋಟೋ ಅದೆಷ್ಟು ಸತ್ಯವೋ ಸುಳ್ಳೋ ಗೊತ್ತಿಲ್ಲಾ. ಆದರೆ ಈ ಬ್ಯಾನರ್ ಫೋಟೋ ನೋಡಿದ ಮಂದಿ ಮಾತ್ರ ಹೊಟ್ಟೆ ಹುಣ್ಣಾಗಿಸುವಷ್ಟು ನಕ್ಕಿರುವುದಂತು ಸತ್ಯ.

ಈ ಬ್ಯಾನರ್ ಫೋಟೋದಲ್ಲಿ ಕುಚ್ಚೂರು ಎಂದು ಸ್ಥಳದ ಹೆಸರನ್ನು ಬರೆಯಲಾಗಿದೆ. ಅಷ್ಟಕ್ಕೂ ವೈರಲ್ ಆಗಿರುವ ಬ್ಯಾನರ್ ನಲ್ಲಿ ಏನಿದೆ ಅನ್ನೋದನ್ನು ನೀವು ಓದಿ ಬಿಡಿ.

'ನಮ್ಮ ಮುಗ್ದ ಗೆಳೆಯ

ರಸಿಕ

ಸನತ್ ಕೋಟ್ಯಾನ, ಇವರ ಮದುವೆ ನಂತರದ ಪ್ರಪ್ರಥಮ ಆಟ

ಮೊದಲ ರಾತ್ರಿಯ ಸಂಭ್ರಮ

ದಿನಾಂಕ: ಮೇ 6, 2022

ಸ್ಥಳ: ಕುಚ್ಚೂರು ತೋಟದ ಮನೆ

ಸಮಯ: ರಾತ್ರಿ 12 ಗಂಟೆಯಿಂದ

Friends Wish With Banner For Sanath Kotiyanas First Night

ಎದ್ದು, ಬಿದ್ದು, ಹೋರಾಡಿ

ಗೆದ್ದು ಬಾ ಗೆಳೆಯ

ನಿಮ್ಮ ಪ್ರಥಮ ರಾತ್ರಿಗೆ ಶುಭಕೋರುವವರು

ಚಿ.ತು ಸಂಘ'

ಈ ಬ್ಯಾನರ್‌ನಲ್ಲಿ ಯುವಕನೋರ್ವನ ಫುಲ್ ಫೋಟೋ ಕೂಡ ಹಾಕಲಾಗಿದೆ. ಹೀಗಾಗಿ ಈ ಬ್ಯಾನರ್ ಹಾಕಿರುವುದು ಸತ್ಯವೇ ಇರಬಹುದು ಎಂದು ಊಹಿಸಲಾಗಿದೆ. ಜೊತೆಗೆ ಇದರಲ್ಲಿ ಸ್ಥಳ ಕೂಡ ಉಡುಪಿಯದ್ದಾಗಿದೆ. ಹೀಗಾಗಿ ಈ ಬ್ಯಾನರ್ ಹಾಕಿರುವುದು ನಿಜ ಇರಬಹುದು. ಇದನ್ನು ಕಂಡ ಕೆಲವರು ಮುಖ ತಿರುಗಿಸಿಕೊಂಡರೆ ಇನ್ನೂ ಕೆಲವರು ನಗಾಡಿದ್ದಾರೆ.

   Ranveerರಿಂದಲೇ ಪಂದ್ಯ ಗೆದ್ದರಂತೆ Mumbai Indians | Oneindia Kannada
   English summary
   Friends Wish With Banner For Sanath Kotiyana's First Night at Udupi Kuchchoory.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X