• search
 • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಸ್ಕರ್ ವಿಧಿವಶ: ದೆಹಲಿ- ಬೆಂಗಳೂರು - ಕರಾವಳಿಗೆ ಇನ್ನು ಕೊಂಡಿ ಯಾರು?

By ಕೆ. ರಾಧಾಕೃಷ್ಣ ಹೊಳ್ಳ
|
Google Oneindia Kannada News

ತುಂಬಾ ಸೃಜನಶೀಲ ವ್ಯಕ್ತಿತ್ವದವರು ಆಸ್ಕರ್ ಫರ್ನಾಂಡಿಸ್ ರವರು. ಉಡುಪಿಯ ಸಾರಿಗೆ ನೌಕರರ ಸಂಘಟನೆಯ ಗೌರವ ಅಧ್ಯಕ್ಷರಾಗಿ ಸಾಮಾಜಿಕ ಜೀವನಕ್ಕೆ ತೊಡಗಿಸಿದ ಒಬ್ಬ ವಿದ್ಯಾವಂತ ಯುವಕ ದೇಶದ ಅತ್ಯಂತ ಹಳೆಯ ರಾಷ್ಟ್ರೀಯ ಪಕ್ಷದ ನಿರ್ಣಾಯಕ ಸ್ಥಾನದಲ್ಲಿ ಪದೋನ್ನತಿಯನ್ನು ಪಡೆದ ನಾಯಕರಾಗಿದ್ದರು.

ಇವರು ಕರ್ನಾಟಕ ರಾಜ್ಯ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ 1989ರ ಸಂದರ್ಭದಲ್ಲಿ ಎರಡು ಕ್ಷೇತ್ರದ ಚುನಾವಣೆ ಬಂದಿತ್ತು. ಆ ಸಂದರ್ಭದಲ್ಲಿ ನಾನೂ ಅವರಿಗೆ ವಾಹನ ಸೌಲಭ್ಯ ಒದಗಿಸಿದ್ದೆ. ರಾಜಕೀಯದಲ್ಲಿ ದಿವಂಗತ ಫರ್ನಾಂಡಿಸ್ ಅವರಂತಹ ಶಾಂತಿ ದೂತರು ಸಿಗುವುದು ಬಹಳ ಕಡಿಮೆ.

ವ್ಯಕ್ತಿಚಿತ್ರ: ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ ರಾಜಕೀಯ ಜೀವನವ್ಯಕ್ತಿಚಿತ್ರ: ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ ರಾಜಕೀಯ ಜೀವನ

ಕರ್ನಾಟಕ ಕಾಂಗ್ರೆಸ್ಸಿನಲ್ಲಿ ನವ ಯುವಕರಿಗೆ ನಾಯಕರಾಗಿ ಬರುವ ಆವಕಾಶ ಮಾಡಿದ ಮೊದಲ ಮೆಟ್ಟಿಲು ಆಸ್ಕರ್ ಫರ್ನಾಂಡಿಸ್ ರವರು. ಇತ್ತೀಚೆಗಿನ ಕೆಲ ವರ್ಷಗಳ ಹಿಂದೆ ಕೇಂದ್ರ ಸಾರಿಗೆ ಸಚಿವರಾದ ಸಂದರ್ಭದಲ್ಲಿ ( NDA 2) ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಕೆಲಸ ನಿಧಾನಗತಿಗೆ ಹೋದಾಗ ಅವರು ಅದಕ್ಕೆ ವೇಗ ಒದಗಿಸಿದವರು.

ಬೆಂಗಳೂರು ಮಂಗಳೂರು ರಸ್ತೆಯಲ್ಲಿ ಮಳೆಗಾಲದಲ್ಲಿ ರಸ್ತೆ ಹಾಳಾಗುವುದನ್ನು ತಡೆಯಲು ಅವರು ಕೇಂದ್ರದಿಂದ ಹೊಸ ಯೋಜನೆಯನ್ನು ತಂದ್ದಿದರು, ಮಾತ್ರವಲ್ಲದೆ ಶಿರಾಡಿ ಗಾಟ್ ರಸ್ತೆಗೆ ಜಪಾನ್‌ನ ಇಂಜಿನಿಯರಿಂಗ್ ಸಂಸ್ಥೆ Jaiko ಮೂಲಕ ಸುರಂಗ ಮಾರ್ಗ ನಿರ್ಮಾಣದ ಯೋಜನೆಗೆ ಪ್ರಥಮದಲ್ಲಿ ತೊಡಗಿದ ಕರಾವಳಿಯ ಸಹೃದಯಿ ರಾಜಕೀಯದ ಹಿರಿಯ ನಾಯಕರು.

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನೆಗೆ ದಿನಾಂಕ ನಿಗದಿಯಾಗಿತ್ತು. ಆದರೆ, ಗುತ್ತಿಗೆ ಪಡೆದ ಸಂಸ್ಥೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಕೆಲಸ ವೇಗ ಪಡೆದಿರಲಿಲ್ಲ. ಆ ವೇಳೆ, ನಾವು ಪ್ರತೀದಿನ ಕೇಂದ್ರ ಲೋಕೋಪಯೋಗಿ ಇಲಾಖೆಗೆ ಲೇಖನದ ಮೂಲಕ ಅಪ್ಡೇಟ್ಸ್ ನೀಡುತ್ತಿದ್ದೆವು.

ಇದನ್ನು ಗಮನಿಸಿದ್ದ ಆಸ್ಕರ್ ಫರ್ನಾಂಡಿಸ್ ಅವರು ಇಲಾಖೆಯ ರಾಜ್ಯ ಖಾತೆಯ ಸಚಿವರನ್ನು ಎರಡು ದಿನಗಳ ಕಾಲ ಬೆಂಗಳೂರಿಗೆ ಕಳುಹಿಸಿದರು. ಕೇಂದ್ರ ಸರಕಾರದ ಸಚಿವರ ಜೊತೆಗೆ ಒಂದು ದಿನ ಪೂರ್ತಿ ಕಳೆದು ನಾನು ಮತ್ತು ನಮ್ಮ ತಂಡ ವಸ್ತುಸ್ಥಿತಿಯ ಮಾಹಿತಿಯನ್ನು ನೀಡಿದ್ದೆವು.

ಯಾವುದೇ ಪತ್ರ, ಹೇಳಿಕೆಗಳಿಗೆ ಆಸ್ಕರ್ ಪ್ರತಿಕ್ರಿಯೆ ನೀಡುತ್ತಿದ್ದರು. ಶಿರಾಡಿ ಘಾಟ್ ಕಾಂಕ್ರೀಟೀಕರಣಗೊಳ್ಳಲು ಆಸ್ಕರ್ ಫರ್ನಾಂಡಿಸ್ ಅವರ ಪಾತ್ರ ಬಹಳ ದೊಡ್ಡದು. ಇನ್ನು ಬೆಂಗಳೂರು -ಮೈಸೂರು ಕಾರಿಡಾರ್ ಯೋಜನೆಗೆ ಆಸ್ಕರ್ ಅವರ ಪಾತ್ರವೂ ಇದೆ.

 ಆಸ್ಕರ್ ಫರ್ನಾಂಡಿಸ್ ನಿಧನಕ್ಕೆ ರಾಜಕೀಯ ಗಣ್ಯರ ಸಂತಾಪ ಆಸ್ಕರ್ ಫರ್ನಾಂಡಿಸ್ ನಿಧನಕ್ಕೆ ರಾಜಕೀಯ ಗಣ್ಯರ ಸಂತಾಪ

   ವಿರಾಟ್ ಕೊಹ್ಲಿ ಬದಲಿಗೆ ಹೊಸ ನಾಯಕನಾಗಿ ರೋಹಿತ್ ಶರ್ಮಾ | Oneindia Kannada

   ಮಾಜಿ ಕೇಂದ್ರ ಸಚಿವರನ್ನು ಕರ್ನಾಟಕ ಕಳಕೊಂಡಿದೆ. ಸಾರಿಗೆ ಸಂಬಂಧಿಸಿದ ಯಾವೂದೇ ಪತ್ರಗಳಿಗೆ/ ಮನವಿಗಳಿಗೆ ಪ್ರತಿಕ್ರಿಯಿಸುವ ಸ್ವಭಾವ ಅವರದಾಗಿತ್ತು. ಅವರ ಅತ್ಮಕ್ಕೆ ಭಗವಂತನು ಸದ್ಗತಿಯನ್ನು ಕೊಡಲಿ. ಹಾಗೂ ಇಂದಿನ ಸಾರ್ವಜನಿಕ ರಂಗದಲ್ಲಿ ತೊಡಗಿಸಿ ಕೊಂಡಿರುವ ಜನನಾಯಕರು ಅವರ ಹಾದಿಯಲ್ಲಿ ನಡೆಯಲಿ.

   English summary
   Former Union Minister Oscar Fernandes Dies, How This Will Impact On Coastal Karnataka. Article By K Radhakrishna Holla. Know More
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X