• search
  • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಗೆ ರಜತ ಮಹೋತ್ಸವ; ಜಿಲ್ಲೆ ರಚನೆ ಹಿಂದಿನ ಕಥೆ

|
Google Oneindia Kannada News

ಉಡುಪಿ ಜಿಲ್ಲೆ ರಚನೆಯಾಗಿ ಇವತ್ತಿಗೆ ಸರಿಯಾಗಿ 25 ವರ್ಷಗಳಾಗಿವೆ. 1997ರ ಆಗಸ್ಟ್ 25ರಂದು ಅಂದಿನ ಮುಖ್ಯಮಂತ್ರಿ ಜೆಎಚ್ ಪಟೇಲ್ ಉಡುಪಿ ಪ್ರತ್ಯೇಕ ಜಿಲ್ಲೆ ಉದ್ಘಾಟನೆ ಮಾಡಿದ್ದರು. ದಕ್ಷಿಣಕನ್ನಡ ಜಿಲ್ಲೆಯಿಂದ ಅಂದು ಉಡುಪಿ ಬೇರ್ಪಟ್ಟು ಪ್ರತ್ಯೇಕ ಜಿಲ್ಲೆಯಾಯಿತು.

ಇಂದು ಗುರುವಾರ ಉಡುಪಿಯಲ್ಲಿ ಜಿಲ್ಲಾ ರಜತ ಮಹೋತ್ಸವದ ಸಂಭ್ರಮ ಮನೆಮಾಡಿದೆ. ನೂತನ ರಾಜ್ಯಪಾಲ ತಾವರ್ ಚಂದ್ ಗೆಹ್ಲೋತ್ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳು, ಮೆರವಣಿಗೆ ಇತ್ಯಾದಿ ನಡೆದಿವೆ. ಅರ್ಜುನ್ ಜನ್ಯ ಮೊದಲಾದ ಪ್ರಮುಖ ಸಂಗೀತ ಸಂಯೋಜಕರು, ಯುವ ಗಾಯಕರಿಂದ ಇಂದು ಸಂಗೀತ ಕಾರ್ಯಕ್ರಮಗಳು ನಡೆಯುತ್ತಿವೆ.

ಉಡುಪಿಗೆ ಇಎಸ್‌ಐ ಆಸ್ಪತ್ರೆ ಮಂಜೂರು, ಶೀಘ್ರದಲ್ಲೇ ಕಾಮಗಾರಿ ಆರಂಭಉಡುಪಿಗೆ ಇಎಸ್‌ಐ ಆಸ್ಪತ್ರೆ ಮಂಜೂರು, ಶೀಘ್ರದಲ್ಲೇ ಕಾಮಗಾರಿ ಆರಂಭ

25 ವರ್ಷಗಳ ಹಿಂದೆ ಉಡುಪಿ ರಚನೆಯಾದಾಗ ಉಡುಪಿ, ಕಾರ್ಕಳ ಮತ್ತು ಕುಂದಾಪುರ, ಈ ಮೂರು ತಾಲೂಕುಗಳು ಮಾತ್ರ ಇದ್ದವು. ಇಂದು ಏಳು ತಾಲೂಕುಗಳಿರುವ ಪರಿಪೂರ್ಣ ಜಿಲ್ಲೆಯಾಗಿ ಉಡುಪಿ ಬೆಳೆದಿದೆ. ಕಾಪು, ಬ್ರಹ್ಮಾವರ, ಬೈಂದೂರು ಮತ್ತು ಹೆಬ್ರಿ ತಾಲೂಕುಗಳು ಹೊಸದಾಗಿ ರಚನೆಯಾಗಿವೆ.

ಉಡುಪಿ ರಚನೆ ಯಾಕಾಗಿ ಆಯಿತು? ಅದರ ಹಿಂದಿನ ಶ್ರಮಗಳೇನು? ಎದುರಾದ ಅಡೆತಡೆಗಳೇನು? ಇತ್ಯಾದಿ ಕೆಲ ಸಂಗತಿಗಳನ್ನು ರಜತ ಮಹೋತ್ಸವ ಸಂದರ್ಭದಲ್ಲಿ ಮೆಲುಕು ಹಾಕುವುದು ಪ್ರಸ್ತುತ ಎನಿಸುತ್ತದೆ.

ಉಡುಪಿಯಲ್ಲಿ ಆಗಸ್ಟ್ 26ರಂದು ನೇರ ಸಂದರ್ಶನಉಡುಪಿಯಲ್ಲಿ ಆಗಸ್ಟ್ 26ರಂದು ನೇರ ಸಂದರ್ಶನ

ಜಯಪ್ರಕಾಶ್ ಹೆಗ್ಡೆ ಪ್ರಯತ್ನ

ಬೈಂದೂರು, ಶಿರೂರು ಮೊದಲಾದ ಪ್ರದೇಶಗಳು ಮಂಗಳೂರಿನಿಂದ ದೂರವೇ ಇದೆ. ತಮ್ಮ ಸರ್ಕಾರಿ ಕೆಲಸಕಾರ್ಯಗಳಿಗೆ ಜನರು ಅಷ್ಟು ದೂರದಿಂದ ಹೋಗಿ ಬರುವುದು ದುಸ್ತರವಾಗಿತ್ತು. ಹೀಗಾಗಿ, ಉಡುಪಿಯನ್ನು ಪ್ರತ್ಯೇಕ ಜಿಲ್ಲೆಯಾಗಿ ಮಾಡಲು ಬಹಳ ಹಿಂದೆಯೇ ಚಿಂತನೆ ನಡೆದಿತ್ತು.

ಈ ಚಿಂತನೆಗೆ ಜೀವ ಸಿಕ್ಕಿದ್ದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆಯಿಂದ. ಆಗ ಅವರು ಜೆಎಚ್ ಪಟೇಲ್ ಸರ್ಕಾರದಲ್ಲಿ ಮೀನುಗಾರಿಕಾ ಸಚಿವರಾಗಿದ್ದರು. ಮುಂಚೂಣಿಯಲ್ಲಿದ್ದುಕೊಂಡು ಅವರು ಉಡುಪಿ ಪ್ರತ್ಯೇಕ ಜಿಲ್ಲೆ ರಚನೆಗೆ ವಿವಿಧ ರೀತಿಯಲ್ಲಿ ಪ್ರಯತ್ನ ಹಾಕಿದರು. ಅಧಿಕಾರಿಗಳು, ತಜ್ಞರ, ಜನಪ್ರತಿನಿಧಿಗಳು ಎಲ್ಲರೂ ಸೇರಿ ಉಡುಪಿ ಜಿಲ್ಲೆ ರಚನೆಗೆ ಬೇಕಾದ ಯೋಜನೆಗಳನ್ನು ರೂಪಿಸಿದರು. ಸಂಕಲ್ಪ ತೊಟ್ಟ ಬಳಿಕ ಬಹಳ ಬೇಗ ಎಲ್ಲವೂ ಕಾರ್ಯಗತವಾಗಿ 1997 ಆಗಸ್ಟ್ 25ರಂದು ಉಡುಪಿ ಹೊಸ ಜಿಲ್ಲೆಯ ಘೋಷಣೆ ಆಯಿತು.

 Udupi Formation Day: Silver Jubilee Celebration, Know The History

ಉಡುಪಿ ಜಿಲ್ಲೆ ವಿವರ

ಉಡುಪಿ ಜಿಲ್ಲೆಯಲ್ಲಿ ಒಟ್ಟು ಏಳು ತಾಲೂಕುಗಳಿವೆ: ಉಡುಪಿ, ಕಾರ್ಕಳ, ಕುಂದಾಪುರ, ಕಾಪು, ಹೆಬ್ರಿ, ಬೈಂದೂರು ಮತ್ತು ಬ್ರಹ್ಮಾವರ.

ಒಂದು ನಗರಸಭೆ, ಮೂರು ಪುರಸಭೆ ಮತ್ತು 158 ಗ್ರಾಮ ಪಂಚಾಯಿತಿಗಳು ಈ ಜಿಲ್ಲೆಯಲ್ಲಿವೆ.

ಜನಸಂಖ್ಯೆ: 12 ಲಕ್ಷ
ಮಹಿಳೆಯರು: ಶೇ. 51
ಪುರುಷರು: ಶೇ. 49
ಪ್ರಮುಖ ಸಮುದಾಯಗಳು: ಬಿಲ್ಲವ, ಬಂಟ, ದಲಿತ, ಒಬಿಸಿ, ಬ್ರಾಹ್ಮಣ, ಮುಸ್ಲಿಂ, ಕ್ರೈಸ್ತರು, ಮೊಗವೀರ ಇಲ್ಲಿನ ಪ್ರಮುಖ ಸಮುದಾಯಗಳಾಗಿವೆ. ಹಾಗೆಯೇ, ಕೊರಗ, ಕುಡುಬಿ, ಮಲೆಕುಡಿಯ, ಹಾಲಕ್ಕಿ ಸಮುದಾಯದ ಜನರು ಸಣ್ಣ ಪ್ರಮಾಣದಲ್ಲಿ ಇಲ್ಲಿದ್ದಾರೆ.

ಪುರುಷರಿಗಿಂತ ಮಹಿಳೆಯರು ಹೆಚ್ಚು ಸಂಖ್ಯೆ ಇರುವ ಕೆಲವೇ ಜಿಲ್ಲೆಗಳಲ್ಲಿ ಉಡುಪಿಯೂ ಒಂದು. ಅಂತೆಯೇ, ಜಿಲ್ಲೆಯ ಮೊದಲ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಇಬ್ಬರೂ ಮಹಿಳೆಯರೇ ಎಂಬುದು ವಿಶೇಷ. ಡಾ. ಕಲ್ಪನಾ ಗೋಪಾಲನ್ ಅವರು ಉಡುಪಿಯ ಮೊದಲ ಜಿಲ್ಲಾಧಿಕಾರಿ ಆಗಿದ್ದರು. ಸವಿತಾ ಹಂದೆ ಮೊದಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರು.

ಅಭಿವೃದ್ಧಿ ಕಾಣದ ಉಡುಪಿ

ಆಡಳಿತಾತ್ಮಕ ದೃಷ್ಟಿಯಿಂದ ದಕ್ಷಿಣಕನ್ನಡದಿಂದ ಬೇರ್ಪಟ್ಟ ಉಡುಪಿ ಜಿಲ್ಲೆ 25 ವರ್ಷಗಳಾದರೂ ನಿರೀಕ್ಷಿತ ರೀತಿಯಲ್ಲಿ ಅಭಿವೃದ್ಧಿ ಹೊಂದಿಲ್ಲ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ಬಿಟ್ಟು ಉಳಿದ ಕ್ಷೇತ್ರಗಳಲ್ಲಿ ಉಡುಪಿ ಹೆಚ್ಚು ಬೆಳವಣಿಗೆ ತೋರಿಲ್ಲ. ಇಲ್ಲಿ ಉದ್ಯೋಗಸೃಷ್ಟಿ ತೀರಾ ಕಡಿಮೆ ಇದೆ

ಜಯಪ್ರಕಾಶ್ ಹೆಗ್ಡೆ ಪ್ರಕಾರ, ಪರಿಸರಸೂಕ್ಷ್ಮ ಜಿಲ್ಲೆಯಾಗಿರುವ ಹಿನ್ನೆಲೆಯಲ್ಲಿ ದೊಡ್ಡ ದೊಡ್ಡ ಕೈಗಾರಿಕೆಗಳನ್ನು ನಡೆಸುವುದು ಕಷ್ಟ. ಪರಿಸರಕ್ಕೆ ಹಾನಿಯಾಗದ ಉದ್ದಿಮೆಗಳನ್ನು ಉಡುಪಿಯಲ್ಲಿ ಸ್ಥಾಪಿಸಲು ಒತ್ತು ಕೊಡುವ ಕೆಲಸವಾಗಲಿಲ್ಲ. ಹೀಗಾಗಿ, ಉಡುಪಿಯಲ್ಲಿ ಹೆಚ್ಚು ಸುಶಿಕ್ಷಿತರಿದ್ದರೂ ಉದ್ಯೋಗಕ್ಕಾಗಿ ಬೆಂಗಳೂರು, ಮುಂಬೈ ಇತ್ಯಾದಿ ಪ್ರಮುಖ ನಗರಗಳಿಗೆ ಜನರು ಹೋಗಬೇಕಾಗದ ಪರಿಸ್ಥಿತಿ ಇದೆ.

ಇನ್ನು ಉಡುಪಿಯಲ್ಲಿ ಹೇರಳವಾದ ಪ್ರವಾಸೀ ತಾಣಗಳಿದ್ದರೂ ಪ್ರವಾಸೋದ್ಯಮ ದುಸ್ಥಿತಿಯಲ್ಲಿದೆ. ಪ್ರವಾಸ ಸ್ಥಳಗಳಲ್ಲಿ ಪ್ರವಾಸಿಗರಿಗೆ ಅಗತ್ಯವಾದ ಕೆಲ ಸೌಕರ್ಯಗಳು ಇಲ್ಲದಿರುವುದು ಆ ಉದ್ಯಮದ ಹಿನ್ನಡೆಗೆ ಕಾರಣವಾಗಿದೆ. ಹೋಮ್ ಸ್ಟೇ, ರಿಸಾರ್ಟ್ ಇತ್ಯಾದಿ ವ್ಯವಸ್ಥೆಯು ಜಿಲ್ಲೆಯಲ್ಲಿ ಕಡಿಮೆ ಇದೆ. ಹೀಗಾಗಿ ಪ್ರವಾಸಿಗರನ್ನು ಆಕರ್ಷಿಸಲು ಜಿಲ್ಲೆ ವಿಫಲವಾಗಿದೆ.

ಹಿಂದೆ ಉಡುಪಿಯಲ್ಲಿ ಆರಂಭವಾದ ಸಿಂಡಿಕೇಟ್ ಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕ್, ವಿಜಯ ಬ್ಯಾಂಕ್, ಎಸ್‌ಬಿಎಂ ಬ್ಯಾಂಕ್, ಕೆನರಾ ಬ್ಯಾಂಕ್‌ಗಳು ಇಡೀ ರಾಜ್ಯಕ್ಕೆ ಗರಿಮೆ ತಂದಿದ್ದವು. ಈಗ ಹೆಸರಿಗೆ ಕೆನರಾ ಬ್ಯಾಂಕ್ ಮಾತ್ರ ಉಳಿದುಕೊಂಡಿದೆ. ಉಳಿದವು ಬೇರೆ ಬ್ಯಾಂಕುಗಳೊಂದಿಗೆ ವಿಲೀನಗೊಂಡಿವೆ.

ನಿರೀಕ್ಷೆಗಳೇನು?

* ಉಡುಪಿ ಜಿಲ್ಲೆಗೆ ಪರಿಸರಕ್ಕೆ ಹಾನಿಯಾಗದ ಉದ್ದಿಮೆಗಳು ಹೆಚ್ಚು ಸಂಖ್ಯೆಯಲ್ಲಿ ಸ್ಥಾಪನೆಯಾಗಬೇಕು. ಗುಡಿ ಕೈಗಾರಿಕೆಗಳಂಥವು ಹೆಚ್ಚಬೇಕು. ಸಾಫ್ಟ್‌ವೇರ್ ಉದ್ಯಮವನ್ನು ಇಲ್ಲಿ ತರಬೇಕು. ಆ ಮೂಲಕ ಉದ್ಯೋಗ ಸೃಷ್ಟಿಯಾಗಬೇಕು.
* ಉಡುಪಿಗೆ ವಿಮಾನ ನಿಲ್ದಾಣ ಬೇಕು.
* ಪ್ರವಾಸೋದ್ಯಮಕ್ಕೆ ಒತ್ತು ಕೊಡಬೇಕು
* ರಸ್ತೆಗಳ ಸುಧಾರಣೆ ಆಗಬೇಕು.

(ಒನ್ಇಂಡಿಯಾ ಸುದ್ದಿ)

English summary
Udupi was carved out from Dakshina Kannada district 25 years back on this same day. Know how much the district has developed since its formation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X