ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿರೂರು ಮಠದಲ್ಲಿ ಪಟ್ಟಾಭಿಷೇಕ; ಧಾರ್ಮಿಕ ಕಾರ್ಯಕ್ರಮ ಆರಂಭ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಮೇ 12; ಉಡುಪಿ ಶಿರೂರು ಮಠದ ಯತಿ ಲಕ್ಷ್ಮೀವರ ತೀರ್ಥ ಶ್ರೀಗಳ ನಿಧನದಿಂದ ಸರಿಸುಮಾರು ಎರಡು ವರ್ಷಗಳಿಂದ ತೆರವಾಗಿರುವ ಶಿರೂರು ಮಠದ ಉತ್ತರಾಧಿಕಾರಿಯ ನೇಮಕ ಈಗಾಗಲೇ ನಡೆದಿದೆ. ಮೇ 14ರಂದು ನೂತನ‌ ಶ್ರೀಗಳ ಪಟ್ಟಾಭಿಷೇಕ ನಡೆಯಲಿದೆ.

ನೂತನ ಉತ್ತರಾಧಿಕಾರಿಯಾಗಿ ಚಿ.ಅನಿರುದ್ಧ ಸರಳತ್ತಾಯ ನಿಯೋಜನೆಗೊಂಡಿದ್ದಾರೆ. ಪಟ್ಟಾಭಿಷೇಕ ಮಹೋತ್ಸವದ ಪೂರ್ವಭಾವಿ ಕಾರ್ಯಕ್ರಮಗಳು ಉಡುಪಿಯ ಶಿರೂರು ಮೂಲ ಮಠದಲ್ಲಿ ನಡೆಯುತ್ತಿವೆ.

ಶಿರೂರು ಮಠಕ್ಕೆ ಪೀಠಾಧಿಪತಿ ನೇಮಕ; ಸಹೋದರನಿಂದ ವಿರೋಧ ಶಿರೂರು ಮಠಕ್ಕೆ ಪೀಠಾಧಿಪತಿ ನೇಮಕ; ಸಹೋದರನಿಂದ ವಿರೋಧ

ದೇವತಾ ಪ್ರಾರ್ಥನೆ, ವಟುವಿಗೆ ಫಲ ಪ್ರಧಾನ ಹಾಗೂ ಗಣಪತಿ ಹೋಮ, ಬ್ರಹ್ಮಕೂರ್ಚ ಹೋಮ, ಪವಮಾನ ಪೂಯಮಾನ ಮಂಡಲ ಹೋಮ, ಧನ್ವಂತರಿ ಹೋಮ, ನವಗ್ರಹ ಹೋಮ, ತಿಲಹೋಮ, ಪ್ರಾಯಶ್ಚಿತ್ತ ಯಾಗಾದಿ ಕರ್ಮಾಂಗಗಳು ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥರ ಉಪಸ್ಥಿತಿಯಲ್ಲಿ ನಡೆಯುತ್ತಿವೆ.

ಶಿರೂರು ಮಠಕ್ಕೆ ಉತ್ತರಾಧಿಕಾರಿಯಾದ 16 ವರ್ಷದ ಹಳ್ಳಿಯ ಬಾಲಕ ಶಿರೂರು ಮಠಕ್ಕೆ ಉತ್ತರಾಧಿಕಾರಿಯಾದ 16 ವರ್ಷದ ಹಳ್ಳಿಯ ಬಾಲಕ

 Formal Rituals Began In Shiroor Mutt For Pattabhishekam Of New Successor

ಅವಧಾನಿ ಸುಬ್ರಹ್ಮಣ್ಯ ಭಟ್ಟ ಹಾಗೂ ವಿದ್ವಾನ್ ಗಿರಿರಾಜ ಉಪಾಧ್ಯಾಯರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಮೇ 14ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮೂಲಮಠದಲ್ಲಿ ಜರುಗಲಿವೆ.

ಉಡುಪಿ; ಶಿರೂರು ಮಠಕ್ಕೆ ಉತ್ತರಾಧಿಕಾರಿ ಘೋಷಣೆ ಉಡುಪಿ; ಶಿರೂರು ಮಠಕ್ಕೆ ಉತ್ತರಾಧಿಕಾರಿ ಘೋಷಣೆ

Recommended Video

Narendra Modi ಮೇಲೆ ಕೋಪಗೊಂಡ RajGuru | Oneindia Kannada

ಸನ್ಯಾಸ ದೀಕ್ಷೆ, ವೇದಾಂತ ಸಾಮ್ರಾಜ್ಯದ ಪಟ್ಟಾಭಿಷೇಕಕ್ಕೆ ಸಂಬಂಧಿಸಿದ ವಿವಿಧ ಧಾರ್ಮಿಕ ವಿಧಿವಿಧಾನಗಳು ಮುಗಿದ ಬಳಿಕ ಮೇ14 ರಂದು ದೀಕ್ಷೆ, ಪಟ್ಟಾಭಿಷೇಕ ನಡೆಯಲಿದೆ ಎಂದು ಮಠದ ಮೂಲಗಳು ತಿಳಿಸಿವೆ.

English summary
Formal rituals started at Shiroor mutt of Udupi for pattabhishekam of new successor Aniruddha Saralatthaya. Pattabhishekam will be held on May 14, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X