ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟ್ರೀ ಪಾರ್ಕಲ್ಲೂ ಪಾರ್ಟಿ ಮಾಡಬಹುದು, ಇದು ಇಲಾಖೆ ಗಿಫ್ಟ್

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಅಕ್ಟೋಬರ್ 15: ಹುಟ್ಟುಹಬ್ಬದಂಥ ಸಣ್ಣಪುಟ್ಟ ಸಮಾರಂಭಗಳು ಸ್ಮರಣೀಯವಾಗಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಕ್ರಿಯಾಶೀಲವಾಗಿ ಆಚರಿಸಬೇಕೆಂದು ಸಾಕಷ್ಟು ಖರ್ಚನ್ನೂ ಮಾಡುತ್ತಾರೆ. ಅಂಥದ್ದೇ ಒಂದು ಕ್ರಿಯಾಶೀಲತೆಯನ್ನು ಕಡಿಮೆ ಖರ್ಚಿನಲ್ಲಿ ನಿಭಾಯಿಸಬಹುದಾದ ಅವಕಾಶ ಸಿಕ್ಕರೆ? ಇಂಥ ಒಂದು ಆಲೋಚನೆಗೆ ಉಡುಪಿ ಅರಣ್ಯ ಇಲಾಖೆ ಮುಂದಾಗಿದೆ.

ಉಡುಪಿ ಅರಣ್ಯ ಇಲಾಖೆ ಒಂದು ಕ್ರಿಯಾಶೀಲ ಆಲೋಚನೆಯನ್ನು ಕಾರ್ಯರೂಪಕ್ಕೆ ತಂದಿದೆ. ಈ ಆಲೋಚನೆ ಹಿಂದೆ ಒಂದು ಒಳ್ಳೆಯ ಉದ್ದೇಶವೂ ಇದೆ. ಅದೇ ಟ್ರೀ ಪಾರ್ಕ್ ನಲ್ಲಿ ಪಾರ್ಟಿ ಆಯೋಜನೆ!

ಶಿವಮೊಗ್ಗ : ಯೋಧರ ಸಾಹಸ ಬಿಂಬಿಸುವ ಸೈನಿಕ ಶಿಲ್ಪ ಉದ್ಯಾನ ಶಿವಮೊಗ್ಗ : ಯೋಧರ ಸಾಹಸ ಬಿಂಬಿಸುವ ಸೈನಿಕ ಶಿಲ್ಪ ಉದ್ಯಾನ

ಹೌದು... ಇಲ್ಲಿ ಪರಿಸರದ ಜೊತೆಗೆ ನಮ್ಮ ಬದುಕಿನ ಸಂಭ್ರಮದ ಕ್ಷಣಗಳನ್ನೂ ಕಳೆಯಲು ಇಲಾಖೆ ಅನುವು ಮಾಡಿಕೊಡುತ್ತಿದೆ. ಮಣಿಪಾಲದಲ್ಲಿನ ಸಾಲುಮರದ ತಿಮ್ಮಕ್ಕ ಟ್ರೀ ಪಾರ್ಕ್ ನಲ್ಲಿ ಪಾರ್ಟಿ ಆಯೋಜನೆಗೆ ಇಲಾಖೆ ಅನುಮತಿ ನೀಡುತ್ತಿದೆ. ಸುಂದರವಾದ ಚಿಕ್ಕ ಚೊಕ್ಕವಾದ ಈ ಹಸಿರು ತುಂಬಿರುವ ಉದ್ಯಾನದಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಚಿಕ್ಕಪುಟ್ಟ ಕಾರ್ಯಕ್ರಮಗಳನ್ನು ಹಗಲು ಹೊತ್ತಿನಲ್ಲಿ ಆಯೋಜಿಸಬಹುದಾಗಿದೆ.

Forest Department Give Permission To Conduct Party At Tree Park In Udupi

ಮಣಿಪಾಲ ಸಿಟಿಯಿಂದ ಮೂರು ಕಿಲೋಮೀಟರ್ ದೂರದಲ್ಲಿ ಈ ಟ್ರೀ ಪಾರ್ಕ್ ಇದೆ. ಪಾರ್ಕ್ ನಲ್ಲಿ ವಾಕಿಂಗ್ ಟ್ರ್ಯಾಕ್, ಮಕ್ಕಳಿಗೆ ಗೇಮ್ ಏರಿಯಾ, ವಿವಿಧ ಬಗೆಯ ಮರಗಳು, ಆಯುರ್ವೇದದ ಗಿಡಗಳ ತೋಟ, ಕಲ್ಲುಬೆಂಚುಗಳು, ಸಣ್ಣದೊಂದು ವೇದಿಕೆ ಎಲ್ಲವೂ ಇದೆ. ಮನುಷ್ಯ ಪರಿಸರಕ್ಕೆ ಹತ್ತಿರವಾಗಬೇಕು ಎಂಬ ಉದ್ದೇಶದೊಂದಿಗೆ ಇಲಾಖೆ ಇಂಥ ತೀರ್ಮಾನ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ವೃಕ್ಷೋತ್ಸವ ಎಂಬ ಕಾರ್ಯಕ್ರಮವನ್ನೂ ಆಯೋಜಿಸಿದೆ.

Forest Department Give Permission To Conduct Party At Tree Park In Udupi

ಪರಿಸರದ ಜೊತೆ ಒಂದಾಗಿ ಜನರು ಕಾಲ ಕಳೆಯಲೆಂದೇ ಸಣ್ಣ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಲಾಗಿದೆ. ಆದರೆ ಅರಣ್ಯ ಇಲಾಖೆಯ ಈ ಯೋಜನೆಯನ್ನು ಪರಿಸರಪ್ರಿಯರು ಎಷ್ಟರಮಟ್ಟಿಗೆ ಉಪಯೋಗಿಸಿಕೊಳ್ಳುತ್ತಾರೆ ಎಂಬುದನ್ನು ನೋಡಬೇಕಿದೆ.

English summary
The Udupi Forest Department has came with creative idea. It gave permission to organize a party at Tree Park in udupi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X