ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಡಿತರ ಅಂಗಡಿ ಸಮಯ ವಿಸ್ತರಣೆ: ಆಹಾರ ಸಚಿವ

|
Google Oneindia Kannada News

ಉಡುಪಿ, ಮಾರ್ಚ್ 01: ಪಡಿತರ ಚೀಟಿಗಳ ಇ-ಕೆವೈಸಿ ಪ್ರಕ್ರಿಯೆಗಳಿಗೆ ಸರ್ವರ್ ಸಮಸ್ಯೆಯಿಂದ ತೊಡಕಾಗಿದ್ದು, ಜನರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಮುಂದಿನ ಎರಡು ತಿಂಗಳು ಪಡಿತರ ಅಂಗಡಿಗಳು ಬೆಳಿಗ್ಗೆ 7 ರಿಂದ ರಾತ್ರಿ 9 ಗಂಟೆಯವರೆಗೆ ಕಾರ್ಯನಿರ್ವಹಿಸಲಿವೆ ಎಂದು ಆಹಾರ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.

ಇ-ಕೆವೈಸಿ ನೋಂದಣಿ ಸದ್ಯ ರಾಜ್ಯದಲ್ಲಿ ಶೇ.40 ಪ್ರಗತಿ ಸಾಧಿಸಿದ್ದು, ಮುಂದಿನ ಎರಡು ತಿಂಗಳಲ್ಲಿ ಹೆಚ್ಚವರಿ ಅವಧಿ ಕೈಗೊಂಡು ಶೇ. 100 ಪ್ರಗತಿ ಸಾಧಿಸಲು ಜಿಲ್ಲಾಧಿಕಾರಿಗಳ ಮೂಲಕ ಸುತ್ತೋಲೆ ಹೊರಡಿಸಲಾಗುವುದು ಎಂದರು.

ಬೋಗಸ್ BPL ಕಾರ್ಡ್‌ ಹಿಂದಿರುಗಿಸದೇ ಇದ್ದರೆ ಕಾದಿದೆ ಜೈಲು ಶಿಕ್ಷೆ!ಬೋಗಸ್ BPL ಕಾರ್ಡ್‌ ಹಿಂದಿರುಗಿಸದೇ ಇದ್ದರೆ ಕಾದಿದೆ ಜೈಲು ಶಿಕ್ಷೆ!

ಇ-ಕೆವೈಸಿ ಪ್ರಕ್ರಿಯೆ, ಪಡಿತರ ವಿತರಣೆಗೆ ಸಂಬಂಧಿಸಿ ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಬೇಕು, ರಜಾದಿನ ಹೊರತುಪಡಿಸಿ ಪ್ರತಿದಿನವೂ ತೆರೆದಿರಬೇಕು ಎಂದು ಸೂಚಿಸಿದರು.

Food Minister K Gopalaiah Said Ration Shop Time Extended

ಅನರ್ಹರು ಬಿಪಿಎಲ್ ಕಾರ್ಡ್ ಹಿಂದಿರುಗಿಸಲು ಇನ್ನೆರಡು ತಿಂಗಳು ಕಾಲಾವಕಾಶ ನೀಡಲಾಗಿದ್ದು, ಸರ್ಕಾರವೇ ಪತ್ತೆ ಮಾಡಿ ವಾಪಸ್ ಪಡೆದರೆ ದುಬಾರಿ ದಂಡ ಪಾವತಿಸಬೇಕಾಗುತ್ತದೆ ಎಂದು ಹೇಳಿದರು.

ಬಿಪಿಎಲ್ ಕಾರ್ಡ್ ದಾರರಿಗೆ ಶಾಕ್: ಅಕ್ಕಿ ಪ್ರಮಾಣಕ್ಕೆ ಸರ್ಕಾರ ಕತ್ತರಿ?ಬಿಪಿಎಲ್ ಕಾರ್ಡ್ ದಾರರಿಗೆ ಶಾಕ್: ಅಕ್ಕಿ ಪ್ರಮಾಣಕ್ಕೆ ಸರ್ಕಾರ ಕತ್ತರಿ?

ಮಂಗಳೂರಿನ ಕುಟುಂಬವೊಂದು 96 ಸಾವಿರ ರುಪಾಯಿ ಪಾವತಿಸಿದೆ. ರಾಜ್ಯಾದ್ಯಂತ ಈವರೆಗೆ 96 ಲಕ್ಷ ರುಪಾಯಿ ದಂಡ ವಸೂಲಿ ಮಾಡಲಾಗಿದೆ ಎಂದು ತಿಳಿಸಿದರು.

English summary
Food Minister K Gopalaiah said the ration shops would be operating from 7 am to 9 pm for the next two months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X