ಕರಾವಳಿ ಜಿಲ್ಲೆಗಳಲ್ಲಿ ಮಂಜು ಮುಸುಕಿದ ವಾತಾವರಣ: ಹಲವೆಡೆ ಗುಡುಗು ಸಹಿತ ಮಳೆ
ಉಡುಪಿ, ನವೆಂಬರ್ 4: ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿ ಭಾಗದಲ್ಲಿ ಬುಧವಾರ ಮಂಜು ಮುಸುಕಿದ ವಾತಾವರಣ ಇತ್ತು. ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆ ಮಂಗಳವಾರ ತಡರಾತ್ರಿ ಮಳೆಯಾಗಿದ್ದು, ಉಳಿದಂತೆ ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣವಿತ್ತು.
ಮಂಗಳೂರು ನಗರದಲ್ಲಿಯೂ ಬೆಳಿಗ್ಗೆ ಮಂಜಿನಿಂದ ಕೂಡಿದ ವಾತಾವರಣ ನಿರ್ಮಾಣವಾಗಿತ್ತು. ಉಡುಪಿ ಜಿಲ್ಲೆಯ ಹಾಲಾಡಿಯಲ್ಲಿ ಮಂಗಳವಾರ ಸಂಜೆ ವೇಳೆ ಗುಡುಗು ಸಹಿತ ಮಳೆಯಾಗಿದೆ.
ಉಡುಪಿ; ಟೆಸ್ಟ್ ರೈಡ್ ಗೆಂದು ತೆಗೆದುಕೊಂಡ ಬೈಕ್ ಜೊತೆ ಎಸ್ಕೇಪ್
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಕಡಬ, ಪುತ್ತೂರು ತಾಲೂಕಿನ ಹಲವೆಡೆ ಸೋಮವಾರ ರಾತ್ರಿ ಗುಡುಗು, ಸಿಡಿಲು ಸಹಿತ ಉತ್ತಮ ಮಳೆಯಾಗಿದೆ. ಬಳ್ಪದಲ್ಲಿ ಗರಿಷ್ಠ 43 ಮಿ.ಮೀ., ಮಡಪ್ಪಾಡಿ 40, ಕಲ್ಲಾಜೆ 38, ಕಡಬ 37, ಮೆಟ್ಟಿನಡ್ಕ 36, ಸುಬ್ರಹ್ಮಣ್ಯ 32 ಮಿ.ಮೀ ಮಳೆಯಾಗಿದೆ.
ಇನ್ನು ಅಯ್ಯನಕಟ್ಟೆ, ಬಾಳಿಲ, ಹಾಲೆಮಜಲು ತಲಾ 30 ಮಿ.ಮೀ, ಕೊಳ್ತಿಗೆ-ಎಕ್ಕಡ್ಕ 23, ವಾಲ್ತಾಜೆ- ಕಂದ್ರಪ್ಪಾಡಿ 20, ಕಲ್ಮಡ್ಕ 18, ಹರಿಹರ- ಮಲ್ಲಾರ 17, ಕೋಡಿಂಬಾಳ-ತೆಕ್ಕಡ್ಕ 12, ಚೊಕ್ಕಾಡಿ, ಎಣ್ಮೂರು ತಲಾ 10, ಕಲ್ಲಕಟ್ಟ 09, ಶಾಂತಿಗೋಡು ತಲಾ 06, ಮುಂಡೂರು 05, ಕೊಲ್ಲಮೊಗ್ರ 03, ಮುಳ್ಯ-ಅಜ್ಜಾವರ, ತೊಡಿಕಾನ ತಲಾ 02, ದೊಡ್ಡತೋಟ, ಬಲಾಡು, 01 ಮಿ.ಮೀ.ನಷ್ಟು ಮಳೆ ದಾಖಲಾಗಿದೆ.
ಹವಾಮಾನ ಇಲಾಖೆ ಅಧಿಕಾರಿಗಳ ಪ್ರಕಾರ, ಹಿಂಗಾರು ಸಮಯದಲ್ಲಿ ಹಾಗೂ ಚಳಿ ಆಗಮನದ ವೇಳೆ ಈ ರೀತಿ ಮಂಜಿನಿಂದ ಕೂಡಿದ ವಾತಾವರಣ ಇರುವುದು ಸಹಜ ಎಂದು ಹೇಳಿದ್ದಾರೆ.