ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ನೂ ಸಿಗದ ಬೋಟ್ ಸುಳಿವು: ಗಡುವು ನೀಡಿದ ಮಲ್ಪೆ ಮೀನುಗಾರರ ಸಂಘ

|
Google Oneindia Kannada News

ಉಡುಪಿ, ಜನವರಿ 01: ಆಳ ಸಮುದ್ರದಿಂದ ಕಣ್ಮರೆಯಾಗಿರುವ ಮಲ್ಪೆಯ ಏಳು ಮಂದಿ ಮೀನುಗಾರರ ಸುಳಿವು ಈವರೆಗೆ ಪತ್ತೆಯಾಗಿಲ್ಲ. 7 ಮಂದಿ ಮೀನುಗಾರರನ್ನು ಹೊತ್ತು ಮಲ್ಪೆಯಿಂದ ಹೊರಟ ಸುವರ್ಣ ತ್ರಿಭುಜ ಮೀನುಗಾರಿಕಾ ಬೋಟ್ ಆಳಸಮುದ್ರದಲ್ಲಿ ನಾಪತ್ತೆಯಾಗಿ 16 ದಿನಗಳು ಕಳೆದಿವೆ.

ನಾಪತ್ತೆಯಾಗಿರುವ ಬೋಟ್ ಹಾಗೂ ಮೀನುಗಾರರಿಗಾಗಿ ಶೋಧಕಾರ್ಯ ಮುಂದುವರೆದಿದೆ. ಆದರೆ ಈವರೆಗೆ ಯಾವುದೇ ಸುಳಿವು ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ 7 ಮೀನುಗಾರರ ಕುಟುಂಬ ಆತಂಕದಲ್ಲಿ ದಿನದೂಡುತ್ತಿವೆ.

ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದವರು ನಾಪತ್ತೆಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದವರು ನಾಪತ್ತೆ

ಈ ನಡುವೆ ನಾಪತ್ತೆಯಾಗಿರುವ 7 ಮಂದಿ ಮೀನುಗಾರರು ಮತ್ತು ದೋಣಿಯನ್ನು ಮೂರು ದಿನದೊಳಗೆ ಪತ್ತೆ ಹಚ್ಚದಿದ್ದರೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಮಲ್ಪೆ ಮೀನುಗಾರರ ಸಂಘ ಎಚ್ಚರಿಕೆ ನೀಡಿದೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಸಂಘದ ಅಧ್ಯಕ್ಷ ಸತೀಶ್ ಕುಂದರ್ ನಾಪತ್ತೆಯಾಗಿರುವ ಮೀನುಗಾರಿಗಾಗಿ ಮಲ್ಪೆ ಸೇರಿದಂತೆ ರಾಜ್ಯದ ಕರಾವಳಿ ಉದ್ದಗದಲ್ಲಿ ಮೀನುಗಾರರರು ಶೋಧ ನಡೆಸುತ್ತಿದ್ದಾರೆ. ಅದಲ್ಲದೇ ಕೋಸ್ಟ್‌ಗಾರ್ಡ್‌, ನೌಕಾದಳದವರು ಶೋಧ ನಡೆಸಿದ್ದಾರೆ. ಆದರೂ ಪತ್ತೆಯಾಗಿಲ್ಲ.

ಆಳಸಮುದ್ರದಲ್ಲಿ ಈವರೆಗೂ ಪತ್ತೆಯಾಗದ ಬೋಟ್: ಮೀನುಗಾರರು ಎಲ್ಲಿಗೆ ಹೋದರು?ಆಳಸಮುದ್ರದಲ್ಲಿ ಈವರೆಗೂ ಪತ್ತೆಯಾಗದ ಬೋಟ್: ಮೀನುಗಾರರು ಎಲ್ಲಿಗೆ ಹೋದರು?

ಸ್ಥಳೀಯ ಶಾಸಕರು ಕೇಂದ್ರ ಸಚಿವ ಸದಾನಂದ ಗೌಡ ಅವರ ಮೂಲಕ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಗಮನ ಸೆಳೆದಿದ್ದಾರೆ. ಮುಖ್ಯಮಂತ್ರಿ ಕೂಡ ಪ್ರಧಾನಿ ಜತೆ ಮಾತುಕತೆ ನಡೆಸಬೇಕು ಎಂದರು. ಮುಂದೆ ಓದಿ...

 ಅಂತಿಮ ತೀರ್ಮಾನ

ಅಂತಿಮ ತೀರ್ಮಾನ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲ್ಲಾ ಇಲಾಖೆಗಳ ಮೂಲಕ ಎಲ್ಲ ವಿಧಾನಗಳಲ್ಲಿಯೂ ಕಾರ್ಯಾಚರಣೆ ನಡೆಸಿ ಮೀನುಗಾರರನ್ನು ಶೀಘ್ರವಾಗಿ ಪತ್ತೆ ಹಚ್ಚಬೇಕು. ಮುಂದಿನ ಹೋರಾಟದ ಕುರಿತು ಚರ್ಚಿಸಲು ನಾಳೆ ಜನವರಿ 2ರಂದು ಮಲ್ಪೆಯಲ್ಲಿ ಸಭೆ ನಡೆಯಲಿದೆ. ಅಂದು ಕರಾವಳಿಯಾದ್ಯಂತ ಮೀನುಗಾರಿಕೆಯನ್ನು ಸಂರ್ಪೂಣ ಸ್ಥಗಿತಗೊಳಿಸಿ ಹೋರಾಟದ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

 ಗಂಭೀರವಾಗಿ ಪರಿಗಣಿಸಿಲ್ಲ

ಗಂಭೀರವಾಗಿ ಪರಿಗಣಿಸಿಲ್ಲ

ಬೇರೆ ದುರ್ಘಟನೆಗಳ ಸಂದರ್ಭ ಸರಕಾರ ವಿಶೇಷ ಗಮನಹರಿಸುತ್ತದೆ. ಆದರೆ ಮೀನುಗಾರರು ನಾಪತ್ತೆಯಾಗಿ 16 ದಿನಗಳು ಕಳೆದರೂ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ. ನಾಪತ್ತೆಯಾಗಿರುವ ಮೀನುಗಾರರ ಕುಟುಂಬಸ್ಥರು ಕಂಗಾಲಾಗಿದ್ದು, ಅವರಿಗೆ ಉತ್ತರಿಸುವ ಸ್ಥಿತಿಯಲ್ಲಿ ನಾವಿಲ್ಲ. ನಾಪತ್ತೆಯಾದವರ ಕುರಿತು ಸರಿಯಾದ ಮಾಹಿತಿ ದೊರೆಯದೆ ನಾವು ಕೂಡ ಮೀನುಗಾರಿಕೆಗೆ ತೆರಳುತ್ತಿಲ್ಲ ಎಂದು ಅವರು ಆಭಿಪ್ರಾಯಪಟ್ಟಿದ್ದಾರೆ.

ಆಳ ಸಮುದ್ರದಲ್ಲಿ ಅಪಾಯದಲ್ಲಿದ್ದ 15 ಮೀನುಗಾರರನ್ನು ರಕ್ಷಿಸಿದ ಭಾರತೀಯ ತಟರಕ್ಷಣಾ ಪಡೆಆಳ ಸಮುದ್ರದಲ್ಲಿ ಅಪಾಯದಲ್ಲಿದ್ದ 15 ಮೀನುಗಾರರನ್ನು ರಕ್ಷಿಸಿದ ಭಾರತೀಯ ತಟರಕ್ಷಣಾ ಪಡೆ

 ಸಂಪರ್ಕ ಕಡಿತ

ಸಂಪರ್ಕ ಕಡಿತ

ಸುವರ್ಣ ತ್ರಿಭುಜ ಬೋಟಿನ ಸಣ್ಣಪುಟ್ಟ ದುರಸ್ತಿ ಕಾಮಗಾರಿ ಮುಗಿಸಿ ಡಿಸೆಂಬರ್ 13ರಂದು ಗಣಪತಿ ಹೋಮ, ಪೂಜೆ ನಡೆಸಿ ರಾತ್ರಿ 11 ಗಂಟೆಗೆ ಮಲ್ಪೆ ಬಂದರಿನಿಂದ 7 ಮಂದಿ ಮೀನುಗಾರರು ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದರು. ಡಿಸೆಂಬರ್ 15ರ ತಡರಾತ್ರಿ 1 ಗಂಟೆವರೆಗೆ ಸುವರ್ಣ ತ್ರಿಭುಜ ಬೋಟ್ ನ ಮೀನುಗಾರರರು ವಾಸುದೇವ ಹೆಸರಿನ ಬೋಟ್‌ನ ಮೀನುಗಾರರ ಜತೆ ವಯರ್ಲೆಸ್ ಸಂಪರ್ಕದಲ್ಲಿದ್ದರು. ಬಳಿಕ ಎಲ್ಲರ ಮೊಬೈಲ್‌ ಮತ್ತು ವಯರ್ ಲೆಸ್ ಸಂಪರ್ಕ ಕಡಿದುಕೊಂಡಿತ್ತು. ಮೊಬೈಲ್‌ಗ‌ಳು ಸ್ವಿಚ್‌ ಆಫ್‌ ಆಗಿದೆ ಎಂದು ಹೇಳಲಾಗಿದೆ.

 ಈಗಿರುವ ಪ್ರಶ್ನೆ

ಈಗಿರುವ ಪ್ರಶ್ನೆ

ಸುವರ್ಣ ತ್ರಿಭುಜ ಟ್ರಾಲ್ ಬೋಟ್‌ನ ಮಾಲೀಕ ಚಂದ್ರಶೇಖರ್‌ ಕೋಟ್ಯಾನ್ ಸಹಿತ 7 ಮಂದಿ ನಾಪತ್ತೆಯಾದ ಬೋಟ್‌ನಲ್ಲಿದ್ದರು. ಈ ಬೋಟ್‌ ಇತರ 20 ಬೋಟುಗಳೊಂದಿಗೆ ಮೀನುಗಾರಿಕೆಗೆ ತೆರಳಿದ್ದು, 500-600 ಮೀ. ಅಂತರದಲ್ಲಿ ಇತರ ಬೋಟ್‌ಗಳಿದ್ದವು. ಆದರೂ ಈ 7 ಮಂದಿ ಬೋಟ್ ಸಮೇತ ನಾಪತ್ತೆಯಾಗಿದ್ದಾದರೂ ಹೇಗೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

English summary
Malpe Fishermens association given 3 days dead line to government to trace missing 7 fishermen of Malpe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X