ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ: ಕಡಲಾಮೆ ಜೀವ ಉಳಿಸಿ ಮಾನವೀಯತೆ ಮೆರೆದ ಮೀನುಗಾರ

By ಉಡುಪಿ ಪ್ರತಿನಿಧಿ
|
Google Oneindia Kannada News

Recommended Video

ಕಡಲಾಮೆ ಜೀವ ಉಳಿಸಿ ಮಾನವೀಯತೆ ಮೆರೆದ ಮೀನುಗಾರ | Oneindia Kannada

ಉಡುಪಿ, ಜುಲೈ.10: ಗಾಯಗೊಂಡ ಕಡಲಾಮೆಯನ್ನು ರಕ್ಷಣೆ ಮಾಡಿ, ಮತ್ತೆ ನದಿಗೆ ಬಿಟ್ಟ ಘಟನೆ ಜಿಲ್ಲೆಯ ಕೋಟ ಪಡುಕೆರೆ ಕಡಲ ಕಿನಾರೆಯಲ್ಲಿ ಮಂಗಳವಾರ ನಡೆದಿದೆ.

ಮೀನುಗಾರ ಪ್ರದೀಪ್, ಸಮುದ್ರದಲ್ಲಿ ಬಲೆ ಬೀಸಿ ಮೀನು ಹಿಡಿಯುವ ಸಂದರ್ಭದಲ್ಲಿ ಗಾಯಗೊಂಡಿರುವ ಕಡಲಾಮೆ ಕಣ್ಣಿಗೆ ಬಿದ್ದಿದೆ. ಕೂಡಲೇ ಪ್ರದೀಪ್ ಕೋಟದ ಸಾಮಾಜಿಕ ಸೇವಾ ಸಂಸ್ಥೆಯಾದ, ಗೀತಾನಂದ ಫೌಂಡೇಶನ್ ನ ಸಮಾಜ ಕಾರ್ಯ ವಿಭಾಗದ ರವಿಕಿರಣ್ ಅವರಿಗೆ ಮಾಹಿತಿ ನೀಡಿದ್ದಾರೆ.

ಅಪಾಯದಲ್ಲಿದ್ದ 10 ಮೀನುಗಾರರನ್ನು ರಕ್ಷಿಸಿದ ತಟರಕ್ಷಣಾ ಪಡೆಅಪಾಯದಲ್ಲಿದ್ದ 10 ಮೀನುಗಾರರನ್ನು ರಕ್ಷಿಸಿದ ತಟರಕ್ಷಣಾ ಪಡೆ

ರವಿಕಿರಣ್ ಸಾಮಾಜಿಕ ಕಾರ್ಯಕರ್ತ ವಿನಯಚಂದ್ರರಿಗೆ ಮಾಹಿತಿ ನೀಡಿ, ಅವರ ಮೂಲಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೊನೆಗೆ ಎಫ್ಎಸ್ಎಲ್ ಇಂಡಿಯಾ ಸಂಸ್ಥೆಯ ಮಂಜುನಾಥ ಮಾಹಿತಿ ಮೇರೆಗೆ ಕಡಲಾಮೆ ರಕ್ಷಿಸಲಾಗಿದೆ.

Fisherman protected wounded Tortoise in Kota

ಮಾಹಿತಿಗೆ ಸ್ಪಂದಿಸಿದ ಉಪವಲಯ ಅರಣ್ಯಾಧಿಕಾರಿ ಜೀವನ್ ದಾಸ್ ಶೆಟ್ಟಿ, ಅರಣ್ಯ ರಕ್ಷಕ ಶಿವಪ್ಪ ನಾಯ್ಕ, ಅರಣ್ಯ ವೀಕ್ಷಕ ಪರಶುರಾಮ್ ಮೇಟಿ, ವಾಹನ ಚಾಲಕ ಜೋಯ್ ಕಡಲಾಮೆ ರಕ್ಷಣಾ ಕಾರ್ಯಚರಣೆ ನೆಡೆಸಿದ್ದಾರೆ.

ಕಡಲಲ್ಲಿ ತೆರೆಗಳ ಅಬ್ಬರ ಹೆಚ್ಚಾಗಿರುವುದರಿಂದ ಸುರಕ್ಷತೆಯ ದೃಷ್ಟಿಯಿಂದ ಹಾರಾಡಿಯ ಸುವರ್ಣ ನದಿ ಮಡಿಲಿಗೆ ಆಮೆಯನ್ನು ಬಿಡಲಾಗಿದ್ದು, ಮಾನವೀಯತೆ ಮೆರೆಯುವಲ್ಲಿ ಸಾಸ್ತನದ ಜನ ಮುಂದಾಗಿದ್ದಾರೆ.

English summary
Fisherman protected wounded Sea Tortoise in Kota, Padukere. He informed to forest department in perfect time and saved Tortoise carefully.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X