ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಲಿಸುತ್ತಿರುವ ರೈಲಿನಲ್ಲಿ ಬೆಂಕಿ:ಮಹಿಳೆಯ ಸಮಯಪ್ರಜ್ಞೆಯಿಂದ ತಪ್ಪಿದ ಅಪಾಯ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಏಪ್ರಿಲ್ 28:ಚಲಿಸುತ್ತಿರುವ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ.ಉಡುಪಿ ಜಿಲ್ಲೆ ಬೈಂದೂರು ರೈಲ್ವೆ ನಿಲ್ದಾಣದಿಂದ ಸ್ವಲ್ಪವೇ ದೂರದಲ್ಲಿರುವ ಕಂಬದಕೋಣೆಯಲ್ಲಿ ಹಾದು ಹೋಗುವಾಗ ಈ ಅವಘಡ ಸಂಭವಿಸಿದೆ.

ಕಳೆದ ರಾತ್ರಿ 1.30 ರ ಸುಮಾರಿಗೆ ರೈಲಿನ ಎಸಿ ಕೋಚ್ ನಲ್ಲಿ ಕಾಣಿಸಿಕೊಂಡ ಬೆಂಕಿ ಮೊದಲು ಯಾರ ಗಮನಕ್ಕೂ ಬಂದಿರಲಿಲ್ಲ. ಆದರೆ ಮಹಿಳೆಯೊಬ್ಬರ ಸಮಯಪ್ರಜ್ಞೆಯಿಂದ ಅಪಾಯ ತಪ್ಪಿದೆ. ಮುಂಬೈನಿಂದ ಎರ್ನಾಕುಲಂ ಗೆ ನಿಜಾಮುದ್ದೀನ್ ಎಕ್ಸ್ ಪ್ರೆಸ್ (ಕ್ರಮಸಂಖ್ಯೆ 12618) ರೈಲು ಹೋಗುತ್ತಿತ್ತು.

Fire found on a moving train near Kambadakone

ಕಾಡಿನಲ್ಲಿ ಬೆಂಕಿ ನಂದಿಸೋದು ಬಿಟ್ಟು ಸೆಲ್ಫೀ ತೆಗೆಯೋದ್ರಲ್ಲಿ ಬಿಜಿಯಾದ್ರೆ ಹೇಗೆಕಾಡಿನಲ್ಲಿ ಬೆಂಕಿ ನಂದಿಸೋದು ಬಿಟ್ಟು ಸೆಲ್ಫೀ ತೆಗೆಯೋದ್ರಲ್ಲಿ ಬಿಜಿಯಾದ್ರೆ ಹೇಗೆ

ರಾತ್ರಿ ವೇಳೆ ಪ್ರಯಾಣಿಕರು ಮಲಗಿದ್ದರಿಂದ ಯಾರಿಗೂ ಆರಂಭದಲ್ಲಿ ಗೊತ್ತಾಗಲಿಲ್ಲ. ಕುಂದಾಪುರ ನಿಲ್ದಾಣದಲ್ಲಿ ಇಳಿಯಬೇಕಾಗಿರುವ ಮಹಿಳೆಯೊಬ್ಬಳು ಇದನ್ನು ಗಮನಿಸಿ ತಕ್ಷಣ ಆಲರ್ಟ್ ಆಗಿದ್ದಾರೆ. ಸಿಬ್ಬಂದಿಗಳ ಗಮನಕ್ಕೆ ತಂದ ಪರಿಣಾಮ ದೊಡ್ಡ ಅಪಾಯ ತಪ್ಪಿದೆ. ತಕ್ಷಣವೇ ರೈಲನ್ನು ನಿಲ್ಲಿಸಲಾಗಿದೆ.

Fire found on a moving train near Kambadakone

 ಕಾರವಾರದ ಯುದ್ಧನೌಕೆಯಲ್ಲಿ ಬೆಂಕಿ ಅವಘಡ: ಅಧಿಕಾರಿ ಸಾವು ಕಾರವಾರದ ಯುದ್ಧನೌಕೆಯಲ್ಲಿ ಬೆಂಕಿ ಅವಘಡ: ಅಧಿಕಾರಿ ಸಾವು

ಎಸಿ ಬೋಗಿಯಲ್ಲಿ ಶಾಟ್ ಸರ್ಕ್ಯೂಟ್ ನಿಂದ ಈ ಬೆಂಕಿ ಅವಘಢ ಸಂಭವಿಸಿದೆ ಎನ್ನಲಾಗಿದೆ.ಎಸಿ ಬೋಗಿಯ ಗ್ಲಾಸ್ ಒಡೆಯುವಾಗ ಸಂಭವಿಸಿದ ಸಣ್ಣಪುಟ್ಟ ಗಾಯ ಹೊರತುಪಡಿಸಿ ಯಾವುದೇ ಅಪಾಯ ಆಗಿಲ್ಲ. ಬೆಂಕಿ ಹತ್ತಿದ ಬೋಗಿಯನ್ನು ಪ್ರತ್ಯೇಕಿಸಿ, ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ ಮಾಡಿ ಕೇರಳದ ಎರ್ನಾಕುಲಂಗೆ ರೈಲನ್ನು ಕಳುಹಿಸಲಾಗಿದೆ.

English summary
Fire found on a moving train(Nizamuddin Express)near Kambadakone.Incident occurred around 1.30 pm last night. No casualty in the incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X