ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೇರುಬೀಜ ಫ್ಯಾಕ್ಟರಿಯಲ್ಲಿ ಬೆಂಕಿ: ಎರಡು ಲಾರಿ ಸಹಿತ ಲಕ್ಷಾಂತರ ರೂ ಮೌಲ್ಯದ ವಸ್ತುಗಳು ಭಸ್ಮ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಆಗಸ್ಟ್ 25: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕುಕ್ಕಂದೂರಿನ ಗೇರುಬೀಜ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಆಹುತಿಯಾಗಿವೆ.

Recommended Video

DK Shivakumar, ಕನಕಪುರ ಬಂಡೆನು ಬಿಡಲಿಲ್ಲ ಕೊರೋನ! | Oneindia Kannada

ಕುಕ್ಕಂದೂರಿನ ಮಾರುತಿ ಇಂಡಸ್ಟ್ರೀಸ್ ಕಾರ್ಖಾನೆಗೆ ಇಂದು ಬೆಂಕಿ ತಗುಲಿದ್ದು, ಈ ಅವಘಡದಲ್ಲಿ ಭಾರೀ ನಷ್ಟ ಸಂಭವಿಸಿದೆ. ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡು, ಅದು ವ್ಯಾಪಿಸಿದ್ದರಿಂದ ಎರಡು ಲಾರಿ ಸಹಿತ ಫ್ಯಾಕ್ಟರಿಯ ವಸ್ತುಗಳು, ಸಾಮಗ್ರಿಗಳು ಸಂಪೂರ್ಣ ಭಸ್ಮವಾಗಿವೆ.

ಕೊಡೇರಿ ಸಮುದ್ರದಲ್ಲಿ ನಾಡದೋಣಿ ಅವಘಡ: ಮೂವರು ಮೀನುಗಾರರು ನೀರುಪಾಲುಕೊಡೇರಿ ಸಮುದ್ರದಲ್ಲಿ ನಾಡದೋಣಿ ಅವಘಡ: ಮೂವರು ಮೀನುಗಾರರು ನೀರುಪಾಲು

ನಸುಕಿನ ಜಾವ ಈ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಮಲಗಿದ್ದ ಕೆಲಸಗಾರರಿಗೆ ಬೆಂಕಿ ತಗುಲಿದಾಗ ಅವಘಡ ಗಮನಕ್ಕೆ ಬಂದಿದೆ. ಬಳಿಕ ಮಾಲೀಕರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಮೂರು ಅಗ್ನಿ ಶಾಮಕ ದಳದವರು ಬೆಂಕಿ ನಂದಿಸುವ ಪ್ರಯತ್ನ ನಡೆಸಿದರು. ಆದರೆ ಅಷ್ಟು ಹೊತ್ತಿಗಾಗಲೇ ಕಾರ್ಖಾನೆ ಬಹುತೇಕ ಸುಟ್ಟು ಭಸ್ಮವಾಗಿದೆ.

Udupi: Fire Broke Out At Cashew Factory In Karkala

ಬೀಜದ ಸಿಪ್ಪೆ ಮತ್ತು ಎಣ್ಣೆ ಇದ್ದಿದ್ದರಿಂದ ಬೆಂಕಿ ಅತಿ ವೇಗವಾಗಿ ಪಸರಿಸಿ ಇಡೀ ಕಾರ್ಖಾನೆಯೇ ಭಸ್ಮವಾಗಿದೆ. ಇದರಿಂದ ಒಂದು ಕೋಟಿಗೂ ಅಧಿಕ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

English summary
Millions of rupees worth of goods have been destroyed in a fire accident at Kukkandoor's cashew factory in Karkala at Udupi,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X