ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ: ನಿವೃತ್ತ ಪೊಲೀಸ್ ನಿಂದಲೇ ಕೃಷಿಕರ ಜಮೀನು ಕಬಳಿಕೆ!

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜನವರಿ 21: ಉಡುಪಿ ಜಿಲ್ಲೆಯ ಕೋಡಿಬೆಟ್ಟು ಗ್ರಾಮ ಪಂಚಾಯತಿ ವ್ಯಾಪ್ತಿಯ ಪೆರ್ಣಂಕಿಲ ಗ್ರಾಮದಲ್ಲಿ ನಿವೃತ್ತ ಪೊಲೀಸರೊಬ್ಬರು ಬಡ ಕೃಷಿಕರ ಜಮೀನನ್ನು ಅತಿಕ್ರಮಣ ಮಾಡಿದ್ದಾರೆ.

ಈ ಸಂಬಂಧ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಂತ್ರಸ್ಥ ಕುಟುಂಬಗಳು, ಈ ಗ್ರಾಮದ ಸರ್ವೆ ನಂಬರ್ 129 ರಲ್ಲಿ ಮೂರು ಎಕರೆ 84 ಸೆಂಟ್ಸ್ ಜಮೀನನ್ನು ದಲ್ಲಾಳಿ ಒಬ್ಬ ನಿವೃತ್ತ ಪೊಲೀಸ್ ಪೇದೆ ಜನಾರ್ದನ ನಾಯಕ್ ಎಂಬುವರಿಗೆ ಮಾರಾಟ ಮಾಡಿದ್ದಾರೆ.

ಸಚಿವ ಕೋಟ ವಿರುದ್ಧ ಫೇಸ್ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್: ಯುವಕನ ವಿರುದ್ಧ ದೂರುಸಚಿವ ಕೋಟ ವಿರುದ್ಧ ಫೇಸ್ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್: ಯುವಕನ ವಿರುದ್ಧ ದೂರು

ಈ ಜಾಗದ ಪಕ್ಕದ ಸರ್ವೆ ನಂಬರ್ 6ರಲ್ಲಿ ರೈತರ ಸುಮಾರು ಮೂರು ಎಕರೆ ಜಾಗ ಇದೆ. ಈ ಕುಮ್ಕಿ ಜಾಗವನ್ನು ಉಮೇಶ್ ನಾಯಕ್ ಮತ್ತು ನಿವೃತ್ತ ಪೊಲೀಸ್ ಜನಾರ್ದನ ಇಬ್ಬರು ಸೇರಿ ಅತಿಕ್ರಮಣ ಮಾಡಿದ್ದಾರೆ.

 Udupi: Farmers Land Encroached By Retired Policeman Janardana In Kodibettu

ಆಕ್ರಮಿತ ಜಾಗವು ಸರಕಾರವು ಕೃಷಿಕರಿಗೆ ಕೊಟ್ಟಂತಹ ಕುಮ್ಕಿ ಜಾಗವಾಗಿರುತ್ತದೆ. ಈ ಜಾಗದಲ್ಲಿ ರೈತರು ಗೇರುಬೀಜ, ಮಾವು, ಹಲಸು ಮತ್ತಿತರ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇದನ್ನೂ ಲೆಕ್ಕಿಸದೆ ನಿವೃತ್ತ ಪೊಲೀಸ್ ಜನಾರ್ದನ ಮತ್ತು ಉಮೇಶ್ ನಾಯಕ್ ಜಮೀನನ್ನು ಕಬಳಿಸಿದ್ದಲ್ಲದೆ, ಈ ಜಾಗದಲ್ಲಿ ಕಾನೂನುಬಾಹಿರವಾಗಿ ಗಣಿಗಾರಿಕೆಯನ್ನು ನಡೆಸುತ್ತಿದ್ದಾರೆ.

Recommended Video

Bangalore: Lockdown ವೇಳೆಯಲ್ಲಿ ದಾಖಲಾಯ್ತು ಲಕ್ಷಗಟ್ಟಲೆ ಕೇಸ್, ಕೋಟಿ ಕೋಟಿ ಕಲೆಕ್ಷನ್..! | Oneindia Kannada

ಜಾಗವನ್ನು ಸಮತಟ್ಟುಗೊಳಿಸಿ ಸುಮಾರು ಐನೂರು ಲೋಡ್ ಗಳಷ್ಟು ಪಾದೆ ಕಲ್ಲುಗಳನ್ನು ಮಾರಾಟ ಮಾಡಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿಯವರಿಗೆ ಮತ್ತು ತಹಶೀಲ್ದಾರ್ ಅವರಿಗೆ ದೂರು ಕೊಟ್ಟಿದ್ದೇವೆ. ನಿವೃತ್ತ ಪೊಲೀಸ್ ಪೇದೆಯೇ ನಮಗೆ ಅನ್ಯಾಯ ಎಸಗಿದ್ದಾರೆ. ನಮಗೆ ನ್ಯಾಯ ಬೇಕು ಎಂದು ಸಂತ್ರಸ್ತರು ಆಗ್ರಹಿಸಿದ್ದಾರೆ.

English summary
A retired policeman has encroached a poor farmer's land in Pernankila village in Kodibettu village panchayat in Udupi district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X