ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಳಮಹಾರಾಜ ವಿಕಾಸ್ ಖನ್ನಾರಿಂದ ಮಣಿಪಾಲದಲ್ಲಿ 'ಕಿಚನ್ ಮ್ಯೂಸಿಯಂ'

|
Google Oneindia Kannada News

ಮಂಗಳೂರು, ಜೂನ್ 6: ನಮ್ಮ ನಮ್ಮ ಮನೆಗಳಲ್ಲಿ ಪ್ರತಿನಿತ್ಯ ಅಮ್ಮ ಅಡುಗೆ ಮಾಡುತ್ತಾರೆ. ಆದರೆ ಅದು ಒಂದು ಕಲೆ; ಎಲ್ಲರಿಗೂ ಒಲಿಯುವುದಿಲ್ಲ. ಇಂಥಹ ಅಡುಗೆ ಕಲೆಯಲ್ಲಿ ಎತ್ತಿದ ಕೈ ಅಂದರೆ ಅದು ಮಹಾಭಾರತದಲ್ಲಿ ನಳ ಮಹಾರಾಜ. ಆತ ಒಳ್ಳೆಯ ಅಡುಗೆಗಾರನಾಗಿದ್ದರಿಂದ ಆತನ ಅಡುಗೆಗಳಿಗೆ "ನಳಪಾಕ" ಎಂಬ ಹೆಸರು ಬಂತು. ಯಾಕೀ ವಿಷ್ಯ ಅಂದರೆ ಭಾರತದಲ್ಲೂ ವಿಶ್ವ ಪ್ರಸಿದ್ದ 'ನಳಪಾಕ' ತಯಾರಿಸುವವರೊಬ್ಬರಿದ್ದಾರೆ. ಅವರೇ ವಿಕಾಸ್ ಖನ್ನಾ; ಇವರ ಅಡುಗೆಯ ಸವಿರುಚಿ ನೋಡದ ಗಣ್ಯರಿಲ್ಲ.

ಮಣಿಪಾಲದಲ್ಲಿ ಕಿಚನ್ ಮ್ಯೂಸಿಯಮ್

ಇದೇ ವಿಕಾಸ್ ಖನ್ನಾ ಭಾರತದಲ್ಲಿ ಕಿಚನ್ ಮ್ಯೂಸಿಯಮ್ ತೆರೆಯುವ ಆಸೆ ಹೊಂದಿದ್ದಾರೆ. ಅದಕ್ಕಾಗಿ ತನಗೆ ಬದುಕು ನೀಡಿದ ಮಣಿಪಾಲವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮಣಿಪಾಲದಲ್ಲಿ ಈ ಕಿಚನ್ ಮ್ಯೂಸಿಯಂ ತಲೆ ಎತ್ತಲಿದೆ.

ಈಗಾಗಲೆ ಇದರ ಕೆಲಸಗಳು ಪ್ರಾರಂಭವಾಗಿವೆ. 2018 ಎಪ್ರಿಲ್ ಹೊತ್ತಿಗೆ ಇದನ್ನು ಉದ್ಘಾಟಿಸುವ ಇರಾದೆಯನ್ನು ಖನ್ನಾ ಹೊಂದಿದ್ದಾರೆ. ಇದರಲ್ಲಿ ಅಡುಗೆ ಸಂಬಂಧಪಟ್ಟ ಪುಸ್ತಕ, ಸಿ.ಡಿ, ಕಾರ್ಯಾಗಾರ ನಡೆಸುವ ಉದ್ದೇಶ ಅವರದ್ದು.

ಚಿಕ್ಕಂದಿನಿಂದಲೇ ಅಡುಗೆಯತ್ತ ಒಲವು

ಚಿಕ್ಕಂದಿನಿಂದಲೇ ಅಡುಗೆಯತ್ತ ಒಲವು

ವಿಕಾಸ್ ಖನ್ನಾ ಮೂಲತಃ ಪಂಜಾಬ್‍ನ ಅಮೃತಸರದವರು. ಮಧ್ಯಮ ವರ್ಗದಲ್ಲಿ ಹುಟ್ಟಿದ ಅವರು ಸಣ್ಣ ವಯಸ್ಸಿನಲ್ಲಿ ಕಾಲಿನ ಅಂಗವೈಕಲ್ಯ ಇದ್ದ ಕಾರಣ ಎಲ್ಲಾ ಮಕ್ಕಳಂತೆ ನಡೆದಾಡಲು
ಸಾಧ್ಯವಾಗದೇ ಮನೆಯಲ್ಲಿದ್ದರು. ಈ ವೇಳೆ ಮನೆಯಲ್ಲಿ ಅಜ್ಜಿ ಹಾಗೂ ಅಮ್ಮನಿಗೆ ಅಡಿಗೆ ಮಾಡಲು ಸಣ್ಣಪುಟ್ಟ ಸಹಾಯ ಮಾಡುತ್ತಾ ಅಡುಗೆಯತ್ತ ಒಲವು ಬೆಳೆಸಿಕೊಂಡರು.

ಆಗ ಹುಡುಗರಾರೂ ಅಡುಗೆ ಮಾಡುವ ಪದ್ದತಿ ಇರಲಿಲ್ಲ. ಈ ವೇಳೆ ಅಕ್ಕಪಕ್ಕದ ಮನೆಯವರು ಖನ್ನಾ ಅವರನ್ನು ಛೇಡಿಸುತ್ತಿದ್ದರಂತೆ. ಹುಡುಗಿ ಮಾಡುವ ಕೆಲಸವನ್ನು ಹುಡುಗ ಮಾಡುತ್ತಾನೆ ಅಂತ. ಈ ವೇಳೆ ಅವನ ತಾಯಿ ಖನ್ನಾ ಅವರಿಗೆ ಧೈರ್ಯ ತುಂಬುತ್ತಿದ್ದರಂತೆ.

ಖನ್ನಾರನ್ನೇ ನಂಬಿ ಮನೆಯವರಿಂದ ಕ್ಯಾಟರಿಂಗ್

ಖನ್ನಾರನ್ನೇ ನಂಬಿ ಮನೆಯವರಿಂದ ಕ್ಯಾಟರಿಂಗ್

ಅವರೇ ಹೇಳುವಂತೆ ಖನ್ನಾ ಅವರ ಅಡುಗೆ ಒಲವು ನೋಡಿದ ಮನೆಯವರು ಸಣ್ಣ ಮಟ್ಟದ ಕ್ಯಾಟರಿಂಗ್ ಸೇವೆ ಆರಂಭಿಸಲು ಚಿಂತಿಸಿದರು. ಈ ವೇಳೆ ಹಣಕ್ಕಾಗಿ ಸ್ವೆಟ್ಟರ್‍ಗಳನ್ನು ಹೊಲಿದು ಹಣ
ಹೊಂದಿಸಿ ಕ್ಯಾಟರಿಂಗ್ ಸೇವೆ ಆರಂಭಿಸಿದರು.
ಮೊದಲ ಬಾರಿಗೆ 100ಜನರಿಗಾಗುವಷ್ಟು ಕ್ಯಾಟರಿಂಗ್ ಸೇವೆ ನೀಡಿದರು. ಅಲ್ಲಿಂದ ಖನ್ನಾ ಅಡುಗೆ ಪಯಣ ಆರಂಭವಾಯಿತು.
ಖನ್ನಾ ತಮ್ಮ ಹಿಂದಿನ ನೆನಪುಗಳನ್ನು ನೆನಪಿಸಿಕೊಳ್ಳುತ್ತಾ, "ತಾನು ಮತ್ತು ತಾಯಿ ಬೆಳಗಿನ ಜಾವ 5 ಗಂಟೆಯವರೆಗೆ ಪಾತ್ರೆಗಳನ್ನು ತೊಳೆಯುವುದು, ಅಡುಗೆ ಮಾಡುವುದು ಮಾಡುತ್ತಿದ್ದೆ," ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಅಮೇರಿಕನ್ನರಿಗೂ ಕೈ ರುಚಿ ತೋರಿಸಿದ ಖನ್ನಾ

ಅಮೇರಿಕನ್ನರಿಗೂ ಕೈ ರುಚಿ ತೋರಿಸಿದ ಖನ್ನಾ

ಖನ್ನಾ ಅಡುಗೆ ಆಸಕ್ತಿ ನೋಡಿದ ಮಾವ ಮಣಿಪಾಲ ವಿಶ್ವವಿದ್ಯಾನಿಲಯಕ್ಕೆ ಹೋಟೆಲ್ ಮ್ಯಾನೇಜ್‍ಮೆಂಟ್ ಕೋರ್ಸಿಗೆ ಸೇರಿಸಿದರು. ಅಲ್ಲಿ ಇಂಗ್ಲೀಷ್ ಭಾಷೆ ಬರದ ಕಾರಣ
ಸಂದರ್ಶನದಲ್ಲಿ ಅನುತ್ತೀರ್ಣರಾದರು. ಭಾಷೆ ಬರದಿದ್ದರೂ ಇವರ ಅಡುಗೆ ಸವಿಯ ಬಗ್ಗೆ ತಿಳಿದ ಪ್ರಾಂಶುಪಾಲರು ಅವರನ್ನು ಮತ್ತೆ ಸೇರಿಸಿಕೊಂಡರಂತೆ.

1994ರಲ್ಲಿ ಮಣಿಪಾಲದಲ್ಲಿ ಶಿಕ್ಷಣ ಮುಗಿಸಿ ಪುನಃ ತವರಿನತ್ತ ತೆರಳಿ ಅಲ್ಲಿ ತನ್ನ ಅಡಿಗೆ ಕಾಯಕದಲ್ಲಿ ತೊಡಗಿಕೊಂಡರು ಖನ್ನಾ. ತದನಂತರ 2000 ಇಸವಿಯ ಹೊತ್ತಿಗೆ ಅಡುಗೆಯ ಕೆಲಸಕ್ಕೆಂದೇ ಅಮೇರಿಕಾಕ್ಕೆ ಕಾಲಿಟ್ಟರು. ಅಲ್ಲಿ ಸಣ್ಣ ಹೋಟೆಲುಗಳಲ್ಲಿ ಕೆಲಸ ಮಾಡಿ ನ್ಯೂಯಾರ್ಕ್‍ನಲ್ಲಿ "ಇಂಡಿಯನ್ ರೆಸ್ಟೋರೆಂಟ್" ತೆರೆದರು.

ಅಡುಗೆ ರುಚಿ ಸವಿಯದವರಿಲ್ಲ

ಅಡುಗೆ ರುಚಿ ಸವಿಯದವರಿಲ್ಲ

ಖನ್ನಾ ಅವರ ಅಡುಗೆ ರುಚಿಯನ್ನು ಪ್ರಧಾನಿ ನರೇಂದ್ರ ಮೋದಿ, ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಬ್ರಿಟನ್ ರಾಣಿ ಎಲಿಜಬೆತ್ 2, ಬಿಲ್ ಕ್ಲಿಂಟನ್, ಆ್ಯಪಲ್ ಕಂಪೆನಿಯ ಸಂಸ್ಥಾಪಕ
ಸ್ಟೀವ್ ಜಾಬ್ಸ್, ನಟರಾದ ಅಮಿತಾಭ್ ಬಚ್ಚನ್, ಶಾರೂಕ್ ಖಾನ್ ಖಾನ್ ಅಷ್ಟೇ ಯಾಕೆ ಧಾರ್ಮಿಕ ಗುರುಗಳಾದ ದಲೈಲಾಮ ಹಾಗೂ ಪೋಪ್ ಫ್ರಾನ್ಸಿಸ್ ಕೂಡಾ ಇವರ ಅಡುಗೆ ರುಚಿಗೆ ಸವಿದಿದ್ದಾರೆ.

ಹಾಟೆಸ್ಟ್ ಚೆಫ್

ಹಾಟೆಸ್ಟ್ ಚೆಫ್

'ಸ್ಟಾರ್‍ ಪ್ಲಸ್‍'ನಲ್ಲಿ ಪ್ರಸಾರವಾದ ಮಾಸ್ಟರ್ ಚೆಫ್ ಸೀಸನ್ 2, 3, 4, 5ರ ಜಡ್ಜ್ ಆಗಿ ಖನ್ನಾ ಕಾರ್ಯನಿರ್ವಹಿಸಿದ್ದಾರೆ. ಇನ್ನೂ ಅನೇಕ ಷೋಗಳನ್ನು ನಿರ್ವಹಿಸಿದ್ದಾರೆ. ಜತೆಗೆ ವಿಶ್ವದ ಪ್ರತಿಷ್ಠಿತ 'ಹಾಟೆಸ್ಟ್ ಚೆಫ್ ಆಫ್ ಅಮೇರಿಕಾ' ಸೇರಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

English summary
Famous chef Vikas Khanna is busy with making his ‘Kitchen Museum’ in Manipal. Manipal Hotel Management and the head said that, museum is under construction and will be opened in April 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X