ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಯಲ್ಲಿ ನಕಲಿ ಪೊಲೀಸ್; ಮಹಿಳೆಯ ಚಿನ್ನಾಭರಣ ಕಳುವು!

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜನವರಿ 11: ಕಳೆದ ವಾರ ಉಡುಪಿ ಜಿಲ್ಲಾ ಪೊಲೀಸರು ಅಂತರ್ ಜಿಲ್ಲಾ ಸರಗಳ್ಳನನ್ನು ಬಂಧಿಸಿದ್ದರು. ತಾನು ಪೊಲೀಸ್ ಎಂದು ನಂಬಿಸಿದ ವ್ಯಕ್ತಿಯೊಬ್ಬ ಮಹಿಳೆಯೋರ್ವರ ಚಿನ್ನಾಭರಣ ದೋಚಿರುವ ಘಟನೆ ಉಡುಪಿಯಲ್ಲಿ ಭಾನುವಾರ ನಡೆದಿದೆ.

ಉಡುಪಿಯ ಅಂಬಲಪಾಡಿ ಜಂಕ್ಷನ್ ಬಳಿ 40 ಸಾವಿರ ರೂ. ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ನಡೆದಿದೆ. ಅಸಲಿ ಪೊಲೀಸರು ನಕಲಿ ಪೊಲೀಸ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಕಡಿಮೆ ದರಕ್ಕೆ ಚಿನ್ನ ನೀಡುವುದಾಗಿ 23 ಲಕ್ಷ ವಂಚನೆ ಕಡಿಮೆ ದರಕ್ಕೆ ಚಿನ್ನ ನೀಡುವುದಾಗಿ 23 ಲಕ್ಷ ವಂಚನೆ

ಅಂಬಲಪಾಡಿಯ ವಸಂತಿ ಎಂಬುವವರು ಭಾನುವಾರ ಮನೆಯೊಂದರಲ್ಲಿನ ಕೆಲಸ ಮುಗಿಸಿ ನಡೆದುಕೊಂಡು ಹೋಗುತ್ತಿದ್ದರು. ಅಂಬಲಪಾಡಿಯ ಶ್ಯಾಮಿಲಿ ಹಾಲ್‌ನ ವಾಹನ ಪಾರ್ಕಿಂಗ್ ಸ್ಥಳದ ಬಳಿ ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ಬೈಕ್ ನಿಲ್ಲಿಸಿ ನಿಂತುಕೊಂಡಿದ್ದರು.

 ಚಿನ್ನದ ಬೆಲೆಯಲ್ಲಿ ದಾಖಲೆ ಮಟ್ಟದ ಏರಿಕೆ; ಗಗನ ಕುಸುಮವಾಗುತ್ತಿದೆ ಚಿನ್ನ... ಚಿನ್ನದ ಬೆಲೆಯಲ್ಲಿ ದಾಖಲೆ ಮಟ್ಟದ ಏರಿಕೆ; ಗಗನ ಕುಸುಮವಾಗುತ್ತಿದೆ ಚಿನ್ನ...

Fake Police Escape With Gold Jewellery

ವಸಂತಿಯವರನ್ನು ತಡೆದ ಇಬ್ಬರೂ ನಾವು ಪೊಲೀಸರು ಮುಂದೆ ಯಾರೋ ಹೆಂಗಸಿಗೆ ಚೂರಿ ತೋರಿಸಿ ಚಿನ್ನದ ಸರ ತೆಗೆದುಕೊಂಡು ಹೋಗಿದ್ದಾರೆ. ನಿಮ್ಮ ಚಿನ್ನಾಭರಣಗಳನ್ನು ತೆಗೆದು ಕೊಡಿ, ಪೇಪರ್‌ನಲ್ಲಿ ಕಟ್ಟಿಕೊಡುತ್ತೇವೆ ಎಂದು ನಂಬಿಸಿದ್ದಾರೆ.

ಫಿಂಗರ್ ಪ್ರಿಂಟ್ ನೆರವಿನಿಂದ 4 ಕೆ.ಜಿ ಚಿನ್ನ ಪತ್ತೆ ಮಾಡಿದ ಸಿಸಿಬಿ ಪೊಲೀಸರು ! ಫಿಂಗರ್ ಪ್ರಿಂಟ್ ನೆರವಿನಿಂದ 4 ಕೆ.ಜಿ ಚಿನ್ನ ಪತ್ತೆ ಮಾಡಿದ ಸಿಸಿಬಿ ಪೊಲೀಸರು !

ಮುಕ್ಕಾಲು ಪವನ್ ಚಿನ್ನದ ಸರ ಹಾಗೂ ಅರ್ಧ ಪವನ್‌ನ 2 ಚಿನ್ನದ ಬಳೆಗಳನ್ನು ಪಡೆದುಕೊಂಡು ಪೇಪರ್‌ನಲ್ಲಿ ಸುತ್ತಿ ವಾಪಾಸು ಕೊಟ್ಟಿದ್ದರು. ನಂತರ ಸಂಶಯಗೊಂಡ ಮಹಿಳೆ ಅವರು ಕೊಟ್ಟ ವಸ್ತುವನ್ನು ನೋಡಿದಾಗ ಅದರಲ್ಲಿ 5 ನಕಲಿ ಬಳೆಗಳು ಇದ್ದವು.

ವಂಚನೆ ಪ್ರಕರಣದ ಬಗ್ಗೆ ವಸಂತಿಯವರು ಉಡುಪಿ ನಗರ ಠಾಣೆಗೆ ದೂರು ನೀಡಿದ್ದಾರೆ. ಗಮನಾರ್ಹ ಸಂಗತಿ ಎಂದರೆ ಪೊಲೀಸರ ಸೋಗಿನಲ್ಲಿ ಚಿನ್ನಾಭರಣ ದೋಚುವ ಜಾಲ ಈ ಹಿಂದೆ ಉಡುಪಿಯಲ್ಲಿ ಸಕ್ರಿಯವಾಗಿತ್ತು.

ಇದೀಗ ಮತ್ತೆ ಅದೇ ರೀತಿಯ ಜಾಲ ಸಕ್ರಿಯವಾಗಿದ್ದು ಮಹಿಳೆಯರ ಆತಂಕ ಹೆಚ್ಚುವಂತೆ ಮಾಡಿದೆ. ಅಸಲಿ ಪೊಲೀಸರು ವಂಚಕರನ್ನು ಹುಡುಕಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

English summary
Fake police in Udupi escape with gold jewellery of women. Complaint field in Udupi city police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X